Site icon Vistara News

Robbery Case | ಫುಲ್‌ ಟೈಂ ಪೊಲೀಸ್‌ ಇನ್ಫಾರ್ಮರ್‌ನಿಂದ ಪಾರ್ಟ್‌ ಟೈಂ ಕಳ್ಳತನ!

Robbery Case

ಬೆಂಗಳೂರು: ಇಲ್ಲಿನ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ಮನೆಗಳ್ಳನನ್ನು (Robbery Case) ಬಂಧಿಸಿದ್ದಾರೆ. ರಾಜಾ ಅಲಿಯಾಸ್‌ ಜಪಾನ್ ರಾಜ ಹುಳಿಮಾವು ಪೊಲೀಸರ ಅತಿಥಿಯಾಗಿದ್ದಾನೆ.

ಜಪಾನ್‌ ರಾಜ ಹಾಗೂ ಅವರಣ್ಣ ಗೋಪಿ ಇಬ್ಬರೂ ಕೂಡ ಖತರ್ನಾಕ್ ಕಳ್ಳರು. ಬೆಳಗಿನ ಸಮಯದಲ್ಲಿ ಮಾತ್ರ ಇವರು ಮನೆಗಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಜಪಾನ್‌ ರಾಜ ಪಶ್ಚಿಮ ವಿಭಾಗದ ಪೊಲೀಸರಿಗೆ ಕಾರು ಓಡಿಸುವುದರಿಂದ ಹಿಡಿದು ಅಪರಾಧ ಚಟುವಟಿಕೆ ಬಗ್ಗೆ ಮಾಹಿತಿ ನೀಡುವವರೆಗೂ ಸಹಾಯ ಮಾಡುತ್ತಿದ್ದನಂತೆ. ಇತ್ತ ಪೊಲೀಸರ ವಿಶ್ವಾಸಗಳಿಸಿಕೊಂಡು, ಅತ್ತ ಸಹೋದರನ ಜತೆ ಸೇರಿ ಕಳ್ಳತನ ಮಾಡುತ್ತಿದ್ದ.

ಆದರೆ, ಇವರ ಕಳ್ಳತನಕ್ಕೆ ಸಂಬಂಧಪಟ್ಟಂತೆ ಸಂಪರ್ಕದಲ್ಲಿದ್ದ ಮತ್ತೊಬ್ಬ ಕಳ್ಳ ಮತ್ತಿನಾಗ ಎಂಬಾತ ಒಮ್ಮೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ವಿಚಾರಣೆ ತೀವ್ರಗೊಳಿಸಿದಾಗ ಜಪಾನ್‌ ರಾಜನ ಕಳ್ಳತನದ ಮಾಹಿತಿಯೂ ಹೊರಬಿದ್ದಿದೆ. ಜಪಾನ್ ರಾಜ ಕೆ.ಪಿ ಅಗ್ರಹಾರ, ವಿಜಯನಗರ, ಕೆಂಗೇರಿ ಸೇರಿದಂತೆ ಹಲವು ಏರಿಯಾ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.

ಜಪಾನ್ ರಾಜ ಜೈಲಿಂದ ರಿಲೀಸ್ ಆಗಿ ಒಂದೂವರೆ ತಿಂಗಳಷ್ಟೇ ಕಳೆದಿದ್ದು, ಒಂದೇ ತಿಂಗಳಲ್ಲಿ ಹತ್ತಾರು ಮನೆಗೆ ಕನ್ನ ಹಾಕಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಜಪಾನ್ ರಾಜನಿಂದ 400 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದು, ಪೊಲೀಸರು ತನಿಖೆ ಮುಂದುವರಿದಿದೆ.

ಇದನ್ನೂ ಓದಿ | Bengaluru Road | ಬೆಂಗಳೂರು ರಸ್ತೆಯ ಒಂದು ಗುಂಡಿ ಮುಚ್ಚಲು 10 ಸಾವಿರ ರೂಪಾಯಿ ಬೇಕಾ?

Exit mobile version