ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಹಲವು ಕಡೆ ರೌಡಿ ಶೀಟರ್‌ಗಳ (Rowdy sheeters) ಮನೆ ಮೇಲೆ ಪೋಲಿಸರು ದಾಳಿ (police raid) ನಡೆಸಿ ಪರಿಶೀಲಿಸಿದ್ದಾರೆ.
ಪೂರ್ವ ವಿಭಾಗದ ಪೊಲೀಸರು ಹಾಗೂ ಆಗ್ನೇಯ ವಿಭಾಗದ ಪೊಲೀಸರು ದಾಳಿ ನಡೆಸಿದರು. ಪೂರ್ವ ವಿಭಾಗದಲ್ಲಿ ಹಲಸೂರು, ಪುಲಕೇಶಿನಗರ, ಡಿಜೆ ಹಳ್ಳಿ, ಕೆಜಿ ಹಳ್ಳಿ, ಅಗ್ನೇಯ ವಿಭಾಗದಲ್ಲಿ ಕೋರಮಂಗಲ, ಮಡಿವಾಳ, ಅಡುಗೋಡಿ, ಮೈಕೋ ಲೇಔಟ್ ಸೇರಿ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ದಾಳಿ ನಡೆಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ರೌಡಿಗಳನ್ನು ಬಂಧಿಸಲಾಗಿತ್ತು. ಹಲವರನ್ನು ನಗರದಿಂದ ಗಡಿಪಾರು ಮಾಡಲಾಗಿತ್ತು. ಇದೀಗ ಜೈಲಿನಿಂದ ಬಿಡುಗಡೆಗೊಂಡಿರುವ ಹಾಗೂ ಮರಳಿ ಬಂದಿರುವ ರೌಡಿಶೀಟರ್‌ಗಳು ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಎಚ್ಚರಿಕೆ ಕೊಡುವ ಸಲುವಾಗಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಮನೆಯಲ್ಲಿ ಮಾರಕಾಸ್ತ್ರಗಳಿಗಾಗಿ ಶೋಧ ನಡೆಸಲಾಯಿತು. ರೌಡಿ ಆಕ್ಟಿವಿಟಿಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Murder Case: ರೌಡಿ ಶೀಟರ್ ಹತ್ಯೆ, ಕುಡಿದ ಅಮಲಿನಲ್ಲಿ ಹೊಡೆದು ಕೊಂದ ಮತ್ತೊಬ್ಬ ರೌಡಿ