Site icon Vistara News

ಶಿಕ್ಷಣ ಇಲಾಖೆಯಲ್ಲೂ ಪರ್ಸೆಂಟೇಜ್‌?: ಲಂಚ ಕೇಳಿದ ಆಡಿಯೊ ರಿಲೀಸ್‌ ಮಾಡಿದ ರುಪ್ಸಾ, ಪ್ರಧಾನಿಗೆ ಪತ್ರ

Rupsa lokesh talikatte

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಂಚ ವ್ಯವಹಾರ ನಡೆಯುತ್ತಿದೆ ಎಂಬ ಆರೋಪದ ಬೆನ್ನಿಗೇ ಶಿಕ್ಷಣ ಇಲಾಖೆಯಲ್ಲಿಯೂ ಖಾಸಗಿ ಶಾಲೆಗಳಿಂದ ಲಂಚ ಸ್ವೀಕರಿಸಲಾಗುತ್ತಿದೆ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ(ರುಪ್ಸಾ) ಆರೋಪಿಸಿದೆ.

ಈ ಕುರಿತು ಶಾಸಕರ ಭವನದಲ್ಲಿ ರುಪ್ಸಾ ಸಂಘಟನೆ ರಾಜ್ಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸುದ್ದಿಗೋಷ್ಠಿ ನಡೆಸಿದರು.

ಶಿಕ್ಷಣ ಇಲಾಖೆಯಲ್ಲಿ ಬಿಇಒ, ಡಿಡಿಪಿಐ ಸೇರಿದಂತೆ ಇತರೆ ಅಧಿಕಾರಗಳ ಪರ್ಸೆಂಟೇಜ್ ವ್ಯವಹಾರ ನಡೆಯುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೊಸ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹಣ ಮಾಡಲು ಹೊಸ ಹೊಸ ವಿಧಾನಗಳನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಮಾನ್ಯತೆ ನವೀಕರಣದ ಹೆಸರಿನಲ್ಲಿ ಸಚಿವರ ನೇತೃತ್ವದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಹಣ ನೀಡದೆ ಇಲ್ಲದೆ ಮಾನ್ಯತೆ ನವೀಕರಣ ಮಾಡುತ್ತಿಲ್ಲ ಎಂದ ತಾಳಿಕಟ್ಟೆ, ಬಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ಶಾಲೆಯೊಂದರ ಚೇರ್ಮನ್‌ ಕೊಪ್ಪದ್ ಎನ್ನುವವರಿಂದ ಬಿಇಒ ಒಬ್ಬರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿದರು.

https://vistaranews.com/wp-content/uploads/2022/08/Audeo-BEO.mp3
ಬಿಇಒ ಒಬ್ಬರು ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿರುವ ಆಡಿಯೊ

ಅಗ್ನಿ ಸುರಕ್ಷತೆ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ. ಇದರಿಂದ ಸಾಮಾನ್ಯ ಶಾಲೆಗಳಿಗೆ ಸಮಸ್ಯೆ ಆಗಿದೆ. RTE ಮರುಪಾವತಿ ಶುಲ್ಕ ವಾಪಸ್ ಪಡೆಯಲು 50% ಕೊಡಬೇಕು. ಹೀಗಾಗಿ ಅಗ್ನಿ ಸುರಕ್ಷತೆಯನ್ನು ಅನ್‌ಲೈನ್ ಮಾಡಿ ಎಂದು ಮನವಿ ಮಾಡಿದ್ದೇವೆ. ಆದರೆ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಅಗ್ನಿ ಸುರಕ್ಷತೆಗೆ NOC ಪ್ರತಿ ಟೇಬಲ್ ಮೂವ್ ಆಗಬೇಕಾಗುತ್ತದೆ. BEO ಆಫೀಸ್‌ನಿಂದ ಮಿನಿಸ್ಟರ್‌ ವರೆಗೆ ಹಣ ಕೊಡಬೇಕು ಎಂದರು ಲೋಕೇಶ್‌ ಆರೋಪಿಸಿದರು.

ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಕೂಡಲೇ ಶಿಕ್ಷಣ ಸಚಿವರನ್ನು ವಜಾ ಮಾಡುವಂತೆ ಸಂಘಟನೆ ಆರೋಪಿಸಿದೆ. ಇದು ಪ್ರಧಾನಿಯವರಿಗೆ ಬರೆಯುತ್ತಿರುವ ಮೂರನೇ ಪತ್ರ ಎಂದು ಲೋಕೇಶ್‌ ತಾಳಿಕಟ್ಟೆ ಹೇಳಿದ್ದಾರೆ.

ಇದನ್ನೂ ಓದಿ | ಸಿದ್ದರಾಮಯ್ಯ ಕಣ್ಣಿಗೆ ಎಣ್ಣೆ ಬಿಟ್ಕೊಂಡಿದ್ರ?: 40% ಆರೋಪದ ಕುರಿತು ಸಿಎಂ ಬೊಮ್ಮಾಯಿ ಆಕ್ರೋಶ

Exit mobile version