Site icon Vistara News

Physical Abuse : ಬೆಂಗಳೂರಿನಲ್ಲೊಂದು ಭಯಾನಕ ಕೃತ್ಯ; 10ರ ಬಾಲಕಿ ಮೇಲೆ ಕಾಮುಕ ಪ್ರಿನ್ಸಿಪಾಲ್‌ ಲೈಂಗಿಕ ದೌರ್ಜನ್ಯ

Physical abuse

ಬೆಂಗಳೂರು: ರಾಜಧಾನಿಯಲ್ಲೊಂದು ಭಯಾನಕ ಘಟನೆ ನಡೆದಿದೆ. 10 ವರ್ಷದ ಪುಟ್ಟ ಬಾಲಕಿಯೊಬ್ಬಳ ಮೇಲೆ ಶಾಲೆಯ ಪ್ರಿನ್ಸಿಪಾಲ್‌ (School Principal) ಲೈಂಗಿಕ ದೌರ್ಜನ್ಯ (Physical abuse) ನಡೆಸಿದ ಆರೋಪ ಕೇಳಿಬಂದಿದೆ. ಅದೂ ಶಾಲೆಗೆ ಬಂದ ಬಾಲಕಿ ಮೇಲೆ ಶಾಲೆಯ ಕತ್ತಲ ಕೋಣೆಯೊಂದರಲ್ಲಿ ಈ ಕೃತ್ಯ ನಡೆದಿದೆ. ಅದಕ್ಕಿಂತಲೂ ಆತಂಕಕಾರಿಯಾದ ಸಂಗತಿ ಎಂದರೆ ಈ ಬಾಲಕಿ ಸ್ವಲ್ಪ ಮಟ್ಟಿಗೆ ಬುದ್ಧಿಮಾಂದ್ಯೆ. ಅಂಥ ಬಾಲಕಿ ಮೇಲೆ ಅಮಾನವೀಯ ಕ್ರೌರ್ಯ (Inhuman Crime) ಮೆರೆಯಲಾಗಿದೆ.

ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ (Private school near Vartur) ಈ ಘಟನೆ ನಡೆದಿದ್ದು, ಪೊಲೀಸರು ಈಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಶಾಲೆಯ ಸಂಸ್ಥಾಪಕನೂ ಆಗಿರುವ ಪ್ರಿನ್ಸಿಪಾಲ್‌ ನಡೆಸಿರುವ ಕೃತ್ಯದ ಬಗ್ಗೆ ಸೂಕ್ತ ತನಿಖೆಗೆ ಎಲ್ಲ ಪೋಷಕರು ಒತ್ತಾಯಿಸಿದ್ದಾರೆ.

ಆಗಸ್ಟ್‌ 3 (ಶುಕ್ರವಾರ) ಈ ಘಟನೆ ನಡೆದಿದೆ. ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿ ಎಂದಿನಂತೆ ಶಾಲೆಗೆ ಹೋಗಿದ್ದಳು. ಆಕೆ ಒಂಟಿಯಾಗಿರುವುದನ್ನು ಕಂಡ ಕಾಮುಕ ಪ್ರಿನ್ಸಿಪಾಲ್‌ ಆಕೆಯನ್ನು ಖಾಲಿ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾಗಿ ಹೇಳಲಾಗಿದೆ. ಬೆಳಗ್ಗೆ 8.30ಕ್ಕೆ ಶಾಲೆಗೆ ಹೋಗಿದ್ದ ಬಾಲಕಿ ಮಧ್ಯಾಹ್ನ 3.30ರ ಹೊತ್ತಿಗೆ ಮನೆಗೆ ಮರಳಿದ್ದಾಳೆ. ಮನೆಗೆ ಬಂದವಳೇ ಹೊಟ್ಟೆ ನೋವು ಎಂದು ಹೇಳತೊಡಗಿದ್ದಾಳೆ. ಆಗ ತಾಯಿ ಆಕೆಯನ್ನು ಸ್ನಾನ ಮಾಡಿಸಲು ಮುಂದಾಗಿದ್ದಾರೆ. ಸ್ನಾನ ಮಾಡಿಸುವ ಸಂದರ್ಭದಲ್ಲಿ ಆಕೆಯ ಕಾಲುಗಳಲ್ಲಿ ರಕ್ತದ ಕಲೆಗಳು ಕಂಡುಬಂದಿವೆ.

ಇದನ್ನು ಕಂಡು ಹೌಹಾರಿದ ಬಾಲಕಿಯ ತಾಯಿ ಏನಾಗಿದೆ ಎಂದು ಕೂರಿಸಿ ವಿಚಾರಿಸಿದ್ದಾರೆ. ಆಗ ಆಕೆ ತಾನು ಬೆಳಗ್ಗೆ ಸ್ಕೂಲಿಗೆ ಹೋಗಿದ್ದು, ಆಗ ಅಲ್ಲಿ ಕಾರಿಡಾರಿನಲ್ಲಿ ಎದುರಾದ ಪ್ರಿನ್ಸಿಪಾಲ್‌ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿದ್ದು, ವಿಶ್ರಾಂತಿ ಪಡೆಯುವಂತೆ ಮಲಗಿಸಿದ್ದು, ಏನೋ ನೋವು ಮಾಡಿದ್ದು, ಬಳಿಕ ಕೇಕ್‌ ತಿನ್ನಿಸಿ ಕಳಹಿಸಿದ್ದನ್ನು ವಿವರಿಸಿದ್ದಾಳೆ. ಆ ಕ್ಷಣದಿಂದಲೇ ನೋವಾಗುತ್ತಿತ್ತು, ಮನೆಗೆ ಬರುವವರೆಗೆ ಹೇಗೋ ಸಹಿಸಿಕೊಂಡೆ ಎಂದು ಮಗು ವಿವರಿಸಿದೆ.

ಈ ನಡುವೆ ಬಾಲಕಿಗೆ ರಕ್ತಸ್ರಾವವೂ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ವರ್ತೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಾಲಕಿ ಮೈಲ್ಡ್‌ ಡಿಸ್ಲೆಕ್ಸಿಯಾ ಆಕ್ಟ್‌ ಎಂಬ ನರದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನು ತಿಳಿದಿದ್ದ ಪ್ರಿನ್ಸಿಪಾಲ್‌ ಆಕೆ ಪ್ರತಿರೋಧ ತೋರಲಾರಳು ಎಂದು ತಿಳಿದು ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಇಡೀ ಸಮಾಜವೇ ಅಸಹ್ಯ ಪಡುವಂತಹ ಕೃತ್ಯ ಅದು. ಏನೂ ಅರಿಯದ ಕಂದಮ್ಮಳನ್ನ ಬಳಸಿಕೊಂಡು ಲೈಂಗಿಕ ದೌರ್ ಎಸಗಿದ್ದ ಪ್ರಿನ್ಸಿಪಾಲ್ ಕಂ ಶಾಲಾ ಮಾಲೀಕ ಲಾಂಬರ್ಟ್ ಪುಷ್ಪರಾಜ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಿನ್ಸಿಪಾಲ್ ಗೆ ವಯಸ್ಸೇನು ಕಡಿಮೆ ಇಲ್ಲ . ಬರೋಬ್ಬರಿ 65 ವರ್ಷ . ಇಂತಹ ವೃದ್ಧ ಪ್ರಿನ್ಸಿಪಾಲ್ , ಬಾಲಕಿಗೆ ಗುರುವಾಗಬೇಕಿತ್ತು. ಮಾರ್ಗದರ್ಶಕನಾಗಬೇಕಿತ್ತು. ಆದರೆ, ಇಂಥ ದುಷ್ಕೃತ್ಯ ಎಸಗಿದ್ದಾನೆ.

ಈ ನಡುವೆ, ಶಾಲೆಯ ಮಕ್ಕಳ ಪೊಲೀಸರು ಪ್ರಿನ್ಸಿಪಾಲ್‌ನ ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಾಯಕ ಮಕ್ಕಳನ್ನು ರಕ್ಷಿಸಬೇಕಾದ ವ್ಯಕ್ತಿಯೇ ಹೀಗೆ ದೌರ್ಜನ್ಯ ನಡೆಸಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: POCSO Case : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಾಲಕ; ಜಾಮೀನು ಕೇಳಿದ ತಾಯಿಗೆ ಕೋರ್ಟ್ 7 ಷರತ್ತು

Exit mobile version