Site icon Vistara News

Sedition Case : ಪಾಕೈಸ್ತಾನ್‌ ಟ್ವೀಟ್‌ಗೆ ಸಿಟ್ಟಿಗೆದ್ದ ಕಾಂಗ್ರೆಸ್‌, ಪಾಕಿಸ್ತಾನದಲ್ಲೇ ಕೇಸ್‌ ಹಾಕಿ ಎಂದ ಬಿಜೆಪಿ!

Sedition Case Congress BJP

ಬೆಂಗಳೂರು: ರಾಜ್ಯಸಭೆ ಚುನಾವಣೆಯ (Rajyasabha Election) ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲೇ ಕೆಲವರು ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಘೋಷಣೆ ಕೂಗಿದ್ದಾರೆ ಎಂಬ ಘಟನೆ (Sedition Case) ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಸಂಘರ್ಷಕ್ಕೇ ಕಾರಣವಾಗಿದೆ. ವಿಧಾನ ಮಂಡಲದ ಉಭಯ ಸದನಗಳಲ್ಲಿ ಅದು ಕೋಲಾಹಲವೆಬ್ಬಿಸಿದೆ, ರಾಜ್ಯಾದ್ಯಂತ ಈ ಹೇಳಿಕೆಯ ವಿರುದ್ಧ ಬಿಜೆಪಿ ದೊಡ್ಡ ಮಟ್ಟದ ಪ್ರತಿಭಟನೆ (BJP Protest) ನಡೆಸಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡಾ ತಿರುಗೇಟು ನೀಡುತ್ತಿದೆ. ಈ ಜಟಾಪಟಿ ಸಾಮಾಜಿಕ ಜಾಲತಾಣದಲ್ಲೂ (Fight in Social Media) ಮುಂದುವರಿದಿದೆ.

ಕಾಂಗ್ರೆಸ್‌ ಇದೊಂದು ಸುಳ್ಳು ಆರೋಪ. ನಸೀರ್‌ ಸಾಬ್‌ ಜಿಂದಾಬಾದ್‌ ಎಂದು ಹೇಳಿದ್ದನ್ನು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿದಂತೆ ಬಿಂಬಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದೆ. ಅದಕ್ಕೆ ಬಿಜೆಪಿ ಕೂಡಾ ಡಿಚ್ಚಿ ಹೊಡೆದಿದೆ.

ಈ ನಡುವೆ, ಇನ್ನೊಂದು ಪೋಸ್ಟ್‌ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರಿ ಸಮರಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Sedition Case: ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ಯಾರು?; ಬ್ಯಾಡಗಿಯ ಮುಸ್ಲಿಂ ವ್ಯಾಪಾರಿ ಮೇಲೆ ಅನುಮಾನ

ಪಾ‘ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್

ಕಾಂಗ್ರೆಸ್​ ಚಿಹ್ನೆಯಾದ ಹಸ್ತವನ್ನ ಬಳಸಿ ಪಾ‘ಕೈ’ಸ್ತಾನ ಎಂದು ಬಿಜೆಪಿ ಪೋಸ್ಟ್ ಮಾಡಿದೆ. ಭಾರತದಲ್ಲಿ ಪಾಕಿಸ್ತಾನವನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ. ಹೀಗಾಗಿ ಈ ಕೈಯನ್ನು ಹೆಡೆಮುರಿ ಕಟ್ಟಿ ಎಂಬರ್ಥದಲ್ಲಿ ಸಂದೇಶವನ್ನು ಹಾಕಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷದ ಚಿಹ್ನೆ ಹಸ್ತಕ್ಕೆ ಹಸಿರು ಬಣ್ಣ ಹಾಗೂ ಪಾಕ್‌ ಬಾವುಟವನ್ನು ಚಿತ್ರಿಸಿ ಹರಿಬಿಡಲಾಗಿದೆ. ಅದಕ್ಕೆ ಪಾಕೈಸ್ತಾನ ಎಂದು ವಿವರಣೆ ನೀಡಲಾಗಿದೆ.

ಬಿಜೆಪಿ ಪೋಸ್ಟರ್ ಹಾಕಿದ್ದಕ್ಕೆ ಕೆರಳಿ ಕೆಂಡವಾದ ಕಾಂಗ್ರೆಸ್ ಪಕ್ಷವು, ಅಯೋಗ್ಯ ಬಿಜೆಪಿ ಎಂದು ತಿರುಗೇಟು ನೀಡಿದ್ದಲ್ಲದೆ, ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಈ ನಡುವೆ, ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ತಿರುಗೇಟು ನೀಡಿದ ಬಿಜೆಪಿ, ‘ನೀವು ದೂರು ದಾಖಲಿಸುವುದು ಪಾಕ್​ನಲ್ಲೋ ಅಥವಾ ಭಾರತದಲ್ಲೋ? ಎಂದು ಕಾಂಗ್ರೆಸ್ ಎಚ್ಚರಿಕೆಗೆ ಮತ್ತೆ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ.

ಇದೀಗ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

Exit mobile version