Site icon Vistara News

Sedition Case : ಹೌದಾ, ಅರೆಸ್ಟ್ ಆಗಿದ್ದಾರಾ? ; ದೇಶದ್ರೋಹಿಗಳ ಸೆರೆಗೆ ಪರಮೇಶ್ವರ್‌ ಫಸ್ಟ್‌ ರಿಯಾಕ್ಷನ್‌!

Sedition Case G Parameshwar

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajyasabha Election) ವಿಜಯೋತ್ಸವ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ (Vidhana soudha) ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಘೋಷಣೆ (Sedition Case) ಕೂಗಿದ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದರೂ (Three Arrested) ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ಅವರು ʻಹೌದಾ ಅರೆಸ್ಟ್‌ ಆಗಿದ್ದಾರಾʼ ಎಂದು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ ಮೂಲದ ಇಲ್ತಾಜ್, ಆರ್.ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿ ಪುಡಿ ಎಂಬವರನ್ನು ಬಂಧಿಸಿದ್ದಲ್ಲದೆ, ಪೊಲೀಸ್‌ ಇಲಾಖೆ ಅಧಿಕೃತ ಪ್ರಕಟಣೆಯನ್ನೇ ಹೊರಡಿಸಿದೆ. ಈ ವಿಚಾರಗಳೆಲ್ಲವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ, ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಕೆಡಿಪಿ ಸಭೆ ನಡೆಸುತ್ತಿದ್ದ ಸಚಿವ ಜಿ. ಪರಮೇಶ್ವರ್‌ ಅವರು ಈ ವಿಚಾರ ತನಗೆ ಗೊತ್ತೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಬೆಂಗಳೂರಿನಲ್ಲಿ ಬಂಧನ ಖಾತ್ರಿಯಾಗುತ್ತಿದ್ದಂತೆಯೇ ಸಚಿವ ಪರಮೇಶ್ವರ್‌ ಅವರಿಗೆ ಬೆನ್ನು ಬೆನ್ನಿಗೆ ಕರೆಗಳು ಬಂದಿದ್ದರು. ಅವರು ಸಭೆಯಿಂದ ಹೊರಗೆ ಹೋಗಿ ಮಾತನಾಡಿದ್ದರು. ಆದರೆ, ಕೊನೆಗೆ ತನಗೆ ಬಂಧನದ ವಿಚಾರ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Sedition Case: ವಿಧಾನಸೌಧದೊಳಗೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ‌ ದೃಢ; ಮೂವರು ಅರೆಸ್ಟ್

ಕೊನೆಗೆ ಮೂವರ ಬಂಧನದ ಬಳಿಕವೂ ತುಮಕೂರಿನಲ್ಲಿ ಮಾಧ್ಯಮಗಳು ಕೇಳಿದಾಗ, ಜಿ. ಪರಮೇಶ್ವರ್‌ ಅವರು, ಹೌದಾ, ಅರೆಸ್ಟ್ ಆಗಿದ್ದಾರಾ..? ಎಂದು ಮಾಧ್ಯಮದವರಿಗೇ ಮರುಪ್ರಶ್ನೆ ಹಾಕಿದರು.

ʻʻಈ ಬಗ್ಗೆ ನನಗೆ ಮಾಹಿತಿಯಿಲ್ಲ, ನಾನು ಬೆಳಗ್ಗೆಯಿಂದ ನಿಮ್ಮ ಜೊತೆಗೇ ಇದ್ದೀನಿ. ಪೊಲೀಸರಿಗೆ ಫುಲ್ ಫ್ರೀಡಂ ಕೊಟ್ಟಿದ್ದೀವಿ. ಅವರ ಕೆಲಸ ಮಾಡಿರ್ತಾರೆʼʼ ಎಂದು ಹೇಳಿದರು.

ʻʻನಾನು ಎಲ್ಲಾದ್ರೂ ಎರಡು ಗಂಟೆ ತಪ್ಪಿಸಿಕೊಂಡು ಹೋಗಿದ್ನಾ? ನಮ್ಮ ಇಲಾಖೆಯವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೀವಿ. ಅವರು ತನಿಖೆ ಮಾಡ್ತಾ ಇದ್ರು, ಅರೆಸ್ಟ್ ಮಾಡಿರಬಹುದುʼʼ ಎಂದು ಜಿ. ಪರಮೇಶ್ವರ್‌ ಹೇಳಿದರು.

ಆರೋಪಿಗಳ ಬಂಧನದ ಬಗ್ಗೆ ಅರೆಸ್ಟ್ ಆಗಿರುವ ಬಗ್ಗೆ ಪೊಲೀಸರು ಪ್ರಕಟಣೆ ಹೊರಡಿಸಿರುವ ಬಗ್ಗೆ ಕೇಳಿದಾಗ ʻʻಇದು ಅಧಿಕೃತ ಅಂತಾ ಹೇಗೆ ನಂಬೋದು? ನಾನು ಈ ಕಾಪಿ ಮೇಲೆ ಅವಲಂಬನೆಯಾಗಲ್ಲ. ಐ ಕಾಂಟ್ ಬಿಲೀವ್ ಇಟ್‌ʼʼ ಎಂದರು ಜಿ. ಪರಮೇಶ್ವರ್.

ʻʻಅರೆಸ್ಟ್ ಆಗಿದ್ರೆ ಅದನ್ನು ವೆರಿಫೈ ಮಾಡಿ ನಿಮಗೆ ಹೇಳ್ತೀನಿ. ಬೆಂಗಳೂರಿಗೆ ಹೋಗ್ತೀನಿ ಈಗ, ಆ ಬಳಿಕ ಕನ್ಫರ್ಮ್ ಮಾಡ್ತೀನಿ. ಅಂತಿಮವಾಗಿ ರಿಪೋರ್ಟ್ ಬಂದಿದ್ಯಾ, ಅದರ ಮೇಲೆ ಕ್ರಮ ತೆಗೆದುಕೊಂಡಿದ್ದಾರಾ ನೋಡ್ತೀನಿʼʼ ಎಂದು ಹೇಳಿದರು.

Exit mobile version