ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Electoion) ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ (Nasir Husein) ಅವರ ವಿಜಯೋತ್ಸವದ ವೇಳೆ ವಿಧಾನಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರು ಆರೋಪಿಗಳ ಮೂರು ದಿನದ ಪೊಲೀಸ್ ಕಸ್ಟಡಿ (Sedition Case) ಅವಧಿ ಬುಧವಾರಕ್ಕೆ ಮುಕ್ತಾಯಗೊಂಡಿತ್ತು. ಅವರನ್ನು ಬುಧವಾರ ಮತ್ತೆ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಇಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದರೆ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಧಾನ ಆರೋಪಿ, ಬ್ಯಾಡಗಿಯ ವ್ಯಾಪಾರಿ ಮಹಮ್ಮದ್ ಶಫಿ ನಾಶಿಪುಡಿಯನ್ನು (Mohammad Shafi Nashipudi) ಮತ್ತೊಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಗಳಾದ ಮಹಮ್ಮದ್ ಇಲ್ತಾಜ್ ಹಾಗೂ ಮುನಾವರ್ ಎಂಬವರನ್ನು ವಿಚಾರಣೆ ಮುಗಿದ ಹಿನ್ನೆಲೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಹಮ್ಮದ್ ಶಫಿ ನಶಿಪುಡಿಯನ್ನು ಇನ್ನಷ್ಟು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಎರಡು ಬಾರಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ
ಈ ನಡುವೆ ಆರೋಪಿಗಳ ವಿಚಾರಣೆ ಹಾಗೂ ಎಫ್‌ಎಸ್‌ಎಲ್ ವರದಿಯನ್ನು ಗಮನಿಸಿದಾಗ ಕೆಲವೊಂದು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಆರೋಪಿಗಳು ವಿಜಯೋತ್ಸವ ನೆಪದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಎರಡು ಭಾರಿ ಘೋಷಣೆ ಕೂಗಿದ್ದಾರೆ. ಮಾರ್ಚ್ 27ರಂದು ಸಂಜೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗುತ್ತದೆ.
ಮಾರ್ಚ್ 28ನೇ ವಿಡಿಯೊ ಕ್ಲಿಪ್ಪಿಂಗ್ ಗಳನ್ನು ಎಫ್ಎಸ್ಎಲ್‌ಗೆ ಕಳಿಸಿದ್ದಾರೆ. ಮೊದಲನೇ ವಿಡಿಯೊ ವರದಿ ಎಫ್ ಎಸ್ ಎಲ್ ನಿಂದ ಮಾರ್ಚ್ ಒಂದನೇ ತಾರೀಖು ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ಆರೋಪಿತರು ಒಂದಲ್ಲ ಎರಡು ಬಾರಿ ಪಾಕಿಸ್ತಾನ್ ಜಿಂದಾಬಾದ್ ಎಂದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ : Sedition Case: ಬಂಧಿತ ಮೊಹಮ್ಮದ್ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?
ಆರೋಪಿಗಳನ್ನು ಬಂಧಿಸಲು ಕಾರಣವಾದ ಅಂಶಗಳು
- ಆರೋಪಿಗಳು ರಾಷ್ಟ್ರೀಯ ಸಮಗ್ರತೆಗೆ ಭಾಧಕವುಂಟು ಮಾಡಿದ್ದಾರೆ. ಸಾರ್ವಜನಿಕ ಕೇಡಿನ ಕಾರಣವಾಗುವ “ಪಾಕಿಸ್ತಾನ್ ಜಿಂದಾಬಾದ್” ಜೈಕಾರವನ್ನು ಹಾಕಿ ಘೋರ ಅಪರಾಧ
- ಆರೋಪಿಗಳು ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರಲ್ಲಿ ಅಶಾಂತಿ ಮೂಡಿಸುವ ಪದಗಳನ್ನು ಬಳಸಿ ಕೃತ್ಯವೆಸಗಿದ್ದಾರೆ. ಹೀಗಾಗಿ ಇವರ ಹಿನ್ನೆಲೆಯನ್ನು ಪರಿಶೀಲನೆ ಮಾಡಬೇಕಾಗಿರುತ್ತದೆ.
- ಆರೋಪಿ 1 ಮತ್ತು ಆರೋಪಿ 3 ಬೇರೆ ಜಿಲ್ಲೆ ಮತ್ತು ಹೊರರಾಜ್ಯದವರಾಗಿದ್ದು, ಇವರ ಹಿನ್ನೆಲೆಯನ್ನು ತಿಳಿಯಬೇಕಾಗಿದೆ.
- ಆರೋಪಿಗಳ ವಿರುದ್ಧ ಬೇರೆ ಯಾವುದಾದರೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕಾಗಿದೆ.
ವಿಜಯೋತ್ಸವದಲ್ಲಿ ಭಾಗಿಯಾಗಿರುವ ಇನ್ನೂ ಹಲವು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಬೇಕಾಗಿರುತ್ತದೆ. - ಪ್ರಕರಣವು ಇನ್ನೂ ತನಿಖಾ ಹಂತದಲ್ಲಿ ಆರೋಪಿಗಳ ಈ ಕೃತ್ಯದ ಹಿಂದೆ ಯಾರಾದರೂ ಬಾಗಿಯಾಗಿರುವ ಹಾಗೂ ಆರೋಪಿಗಳ ಮಾಹಿತಿ ಮೇರೆಗೆ ಕುಮ್ಮಕ್ಕು ನೀಡಿದ ಆರೋಪಿಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬೇಕಾಗಿರುತ್ತದೆ.
ವಿಚಾರಣೆಯ ವೇಳೆ ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿಸ್ಟರಿ ಕಂಡುಬಂದಿಲ್ಲ. ನಾವು ಜಿಂದಾಬಾದ್ ಅಂದೆವು. ಪಾಕಿಸ್ತಾನ ಅಂದಿಲ್ಲ ಎಂದು ಹೇಳುತ್ತಿದ್ದಾರಂತೆ. ಈಗ ನಶಿಪುಡಿಯ ಹೆಚ್ಚುವರಿ ವಿಚಾರಣೆ ಏನು ಮಾಹಿತಿ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.