Site icon Vistara News

Self Harm: ಲಿವ್ ಇನ್ ರಿಲೇಷನ್‌ನಲ್ಲಿದ್ದ ವಿವಾಹಿತೆ ಪ್ರೇಮಿ ಜತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

live in couple self harm

ಬೆಂಗಳೂರು: ಗಂಡನಿಗೆ ಗೊತ್ತಿಲ್ಲದಂತೆ ಬೇರೊಬ್ಬನೊಂದಿಗೆ ಲಿವ್‌ ಇನ್‌ ರಿಲೇಷನ್‌ನಲ್ಲಿದ್ದ (live in relationship) ವಿವಾಹಿತೆ ಹಾಗೂ ಆಕೆಯ ಪ್ರೇಮಿ ಇಬ್ಬರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (self harm, suicide case) ಮಾಡಿಕೊಂಡಿದ್ದಾರೆ.

ಸೌಮಿನಿ ದಾಸ್(20) ಹಾಗೂ ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಕೊತ್ತನೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಬಂಗಾಳದ ಸೌಮಿನಿ ದಾಸ್ ನರ್ಸಿಂಗ್‌ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಈಕೆಗೆ ಬೇರೊಬ್ಬನೊಂದಿಗೆ ವಿವಾಹವಾಗಿತ್ತು. ಗಂಡನನ್ನು ಊರಿನಲ್ಲಿ ಬಿಟ್ಟು ಬೆಂಗಳೂರಿಗೆ ಬಂದವಳು ನರ್ಸಿಂಗ್‌ ವೇಳೆ ಪರಿಚಯವಾಗಿದ್ದ ಕೇರಳ ಮೂಲದ ಅಬಿಲ್ ಅಬ್ರಾಹಂ ಎಂಬಾತನ ಜತೆಗೆ ಸಹಜೀವನ ನಡೆಸುತ್ತಿದ್ದಳು.

ಮೂರು ತಿಂಗಳ ಹಿಂದಷ್ಟೇ ಊರಿಗೆ ತೆರಳಿದ್ದ ಸೌಮಿನಿ ದಾಸ್, ಗಂಡನೊಂದಿಗೆ ಜಗಳ ಮಾಡಿದ್ದಳು. ಮದುವೆಯಾದಾಗಿನಿಂದಲೂ ಆತ ಕಿರುಕುಳ ನೀಡುತ್ತಿರುವುದಾಗಿ ಇತರರ ಜತೆಗೆ ಹೇಳಿದ್ದಳು. ʼನಿನ್ನ ಜೊತೆ ನಾನು ಇರುವುದಿಲ್ಲ. ನನ್ನ ತಂಟೆಗೆ ಬರಬೇಡ, ನಾನು ಮತ್ತೆ ನಿನ್ನ ಬಳಿ ಬರುವುದಿಲ್ಲʼ ಎಂದು ಗಂಡನಿಗೆ ಹೇಳಿ ಬೆಂಗಳೂರಿಗೆ ಬಂದಿದ್ದಳು.

ಪತ್ನಿಯ ನಡೆಯಿಂದ ಅನುಮಾನಗೊಂಡ ಪತಿ ಈ ಬಗ್ಗೆ ಇನ್ನಷ್ಟು ವಿಚಾರಿಸಿದಾಗ ಆಕೆಯ ಲಿವ್ ಇನ್ ರಿಲೇಷನ್‌ಶಿಪ್ ಸಂಗತಿ ತಿಳಿದು ಬಂದಿತ್ತು. ಆತ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಇದಾದ ಬಳಿಕ ಸೌಮಿನಿ ದಾಸ್‌ ಹಾಗೂ ಆಕೆಯ ಪ್ರೇಮಿ ಅಬಿಲ್‌ ಇಬ್ರಾಹಿಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Self Harming: 8ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ

Exit mobile version