Site icon Vistara News

Self Harming: ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ನೇಣು ಬಿಗಿದುಕೊಂಡ ಅಪರಿಚಿತ ಮಹಿಳೆ

Self Harming

ಬೆಂಗಳೂರು: ನೇಣು ಬಿಗಿದುಕೊಂಡು (Self Harming) ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಮಾರ್ಗೊಸಾ ರಸ್ತೆಯ ಸಾಯಿ ರೆಸಿಡೆನ್ಸಿ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದೆ.

ಸುಮಾರು 45 ವರ್ಷದ ಮಹಿಳೆ ಅಪಾರ್ಟ್ಮೆಂಟ್‌ನ ಬಾಲ್ಕನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಲೇಶ್ವರ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಮಹಿಳೆ ಯಾರು ಎಂಬುದು ಗೊತ್ತಿಲ್ಲ, ಬೆಳಗ್ಗೆ 7.30ಕ್ಕೆ ನೋಡಿದಾಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಕೂಡಲೇ ನಾವು ಪೊಲೀಸರಿಗೆ ಕಾಲ್ ಮಾಡಿದ್ದವಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಹಿಳೆ ಫೋಟೊವನ್ನು ತೆಗೆದುಕೊಂಡಿದ್ದಾರೆ. 6.15ಕ್ಕೆ ಮೆಜೆಸ್ಟಿಕ್‌ನಿಂದ ಬಸ್ ಮೂಲಕ ಇಲ್ಲಿಗೆ ಬಂದಿದ್ದಾರೆ. ಒಂದು ಬ್ಯಾಗ್, ಬಸ್ ಟಿಕೆಟ್ ಇತ್ತು. ಇನ್ನೂ ನವರಂಗ್ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಬಂದಿದ್ದಾರೆ. ಸದ್ಯ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ. ಯಾರು ಏನು ಎನ್ನುವುದು ತನಿಖೆ ನಂತರ ತಿಳಿಯಲಿದೆ. ನಮ್ಮ ಅಪಾರ್ಟ್ಮೆಂಟ್‌ಗೆ ಯಾಕೆ ಬಂದಿದ್ದರೂ ಎಂದು ಗೊತ್ತಿಲ್ಲ ಎಂದು ಅಪಾರ್ಟ್ಮೆಂಟ್ ನಿವಾಸಿ ಎನ್ ಕೆ ರಾವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sheikh Hasina : ಶೇಖ್ ಹಸೀನಾ ಸೀರೆಗಳ ಜತೆ ಬ್ರಾಗಳನ್ನೂ ಬಿಡದೆ ದೋಚಿದ ಬಾಂಗ್ಲಾ ಜನ!

ಕೊಲೆ ಶಂಕೆ

ಇನ್ನೂ ಮಹಿಳೆ ನವರಂಗ್ ಚಿತ್ರಮಂದಿರಲ್ಲಿ ರಾಯನ್ ಸಿನಿಮಾ ನೋಡಿ ಬಂದಿದ್ದಾರೆ. ಎರಡು ಸಿನಿಮಾ ಟಿಕೆಟ್ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಮಹಿಳೆಯ ಜತೆ ಮತ್ತೊಬ್ಬ ವ್ಯಕ್ತಿ ಇರುವುದು ಖಚಿತವಾಗಿದೆ. ಹೀಗಾಗಿ ಇದು ಕೊಲೆ ಇರಬಹುದಾ ಎಂಬ ಶಂಕೆಯೂ ಇದೆ. ಮಹಿಳೆಯ ಯಾವುದೇ ಗುರುತು ಪತ್ತೆಗೆ ಬೇಕಾದ ಸಾಕ್ಷಿಗಳಿಲ್ಲ. ಮೊಬೈಲ್ ಸೇರಿ ಯಾವುದೇ ಕ್ಲೂ ಇಲ್ಲ. ಹೀಗಾಗಿ ಸುತ್ತಮುತ್ತಲ್ಲ ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ.

ಸಾಯಿ ರೆಸಿಡೆನ್ಸಿಯಲ್ಲಿ ಅಪರಿಚಿತ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ನೈಟಿಯ ಜೇಬಿನಲ್ಲಿ ಬಸ್ ಟಿಕೆಟ್ ಮತ್ತು ಸಿನಿಮಾ ಟಿಕೆಟ್ ಪತ್ತೆಯಾಗಿದೆ. ನವರಂಗ್ ಥಿಯೇಟರ್‌ನಲ್ಲಿ ನಿನ್ನೆ ಸೋಮವಾರ ರಾಯನ್ ಸಿನಿಮಾ ನೋಡಿದ್ದಾರೆ. ಇಂದು ಮಂಗಳವಾರ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂಗೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದಾರೆ. ಬೆಳಿಗ್ಗೆ 7:20ಕ್ಕೆ ಅಪಾರ್ಟ್ಮೆಂಟ್ ಬಳಿ ಬಂದಿದ್ದ ಮಹಿಳೆ‌ ನೇಣು ಹಾಕಿಕೊಳ್ಳಲು ಹೊಸ ಹಗ್ಗ ಖರೀದಿ ಮಾಡಿ ತಂದಿದ್ದಾರೆ. ಬಿಲ್ಡಿಂಗ್‌ನಲ್ಲಿ ಸಿಸಿ ಕ್ಯಾಮೆರಾ ಮತ್ತು ಸೆಕ್ಯೂರಿಟಿ ಇಲ್ಲದನ್ನು ಗಮನಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೆಸಿ ಜನರಲ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಹಿಳೆ ಯಾರು, ಯಾರ ಜತೆಗೆ ಈ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ ಎಂಬುದರ ಕುರಿತಾಗಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version