ಬೆಂಗಳೂರು: ಹೊಸದಾಗಿ ನಿರ್ಮಾಣವಾಗಿದ್ದ ನಾಲ್ಕಂತಸ್ತಿನ ಕಟ್ಟಡವೇರಿದ ಯುವಕನೊರ್ವ ಆತ್ಮಹತ್ಯೆಗೆ (Self Harming) ಯತ್ನಿಸಲು ಮುಂದಾದ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಹಿಂಭಾಗದಲ್ಲಿ ನಡೆದಿದೆ.
ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ, ಆದರೆ ನನ್ನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ನಾನು ಈಗ ಇಲ್ಲಿಂದ ಹಾರಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದ. ಜತೆಗೆ ನನ್ನ ತಾಯಿ ಬೈದರು, ಯಾವುದೇ ಕಾರಣಕ್ಕೂ ನಾನು ವಾಪಾಸ್ ಬರುವುದಿಲ್ಲ ಎಂದು ಹಠ ಹಿಡಿದಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಕೆಳಗೆ ಇಳಿಸಲು ಎಷ್ಟೇ ಮನವೊಲಿಸಿದರೂ ಸಾಧ್ಯವಾಗಲಿಲ್ಲ.
ಏಣಿ ಹಾಕಲು ಹೋದರೆ, ತಳ್ಳುವ ಕೆಲಸ ಮಾಡಿದ್ದ. ಈ ವೇಳೆ ನನ್ನ ಪತ್ನಿಯನ್ನು ಕರೆಸಿ ಎಂದು ಪಟ್ಟು ಹಿಡಿದಿದ್ದ. ಈ ವೇಳೆ ಮನೆಯಿಂದ ಪದೆಪದೇ ಫೋನ್ ಕಾಲ್ ಬಂತು ಅಂತ ಸಿಟ್ಟಾಗಿ ಮೊಬೈಲ್ ಅನ್ನೇ ಮುರಿದು ಬಿಸಾಕಿದ್ದಾನೆ. ಬಳಿಕ ಅಗ್ನಿಶಾಮಕ ವಾಹನ ಆಗಮಿಸಿ ಏಣಿ , ಬಲೆಗಳನ್ನು ತಂದು ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ:Chetan Ahimsa: ಭ್ರಷ್ಟಾಚಾರ ಆರಂಭವಾದದ್ದೇ ಕಾಂಗ್ರೆಸ್‌ನಿಂದ: ನಟ ಚೇತನ್ ಅಹಿಂಸಾ ಆರೋಪ
ಸತತ ಮೂರು ಗಂಟೆಗಳ ಕಾಲ ಸತಾಯಿಸಿದ್ದ ಯುವಕನನ್ನು ಪೊಲೀಸರು ಕಟ್ಟಡದಿಂದ ಇಳಿಸಿ ಹೊಯ್ಸಳದಲ್ಲಿ ಕರೆದುಹೋದರು. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ, ನಾನು ಹೆಸರು ಮಂಜುನಾಥ್ ಎಂದು ಹುಣಸೆಮಾರನಹಳ್ಳಿಯವನು ಎಂದು ಯುವಕ ಮಾಹಿತಿ ನೀಡಿದ್ದಾನೆ.
ಆಸ್ತಿಯ ವಿಚಾರವಾಗಿ ನನಗೆ ಕಿರುಕುಳ ಕೊಡುತ್ತಿದ್ದಾರೆ. ಇದಕ್ಕಾಗಿ ಗಾಂಜಾ ಸೇವಿಸುತ್ತೀಯಾ ಎಂದು ಚಿಕಿತ್ಸೆ ಕೊಡಿಸಲು ಕೆ.ಜಿ ಹಳ್ಳಿಯ ಜನರಲ್ ಆಸ್ಪತ್ರೆಗೆ ಸೇರಿಸಿದ್ದರು. ಕುಟುಂಬಸ್ಥರು ನನ್ನ ಹೆಂಡತಿಯನ್ನು ನನ್ನಿಂದ ದೂರು ಮಾಡಿದ್ದರು. ವಿಷವಿಟ್ಟು ಕೊಲ್ಲಲು ಪ್ರಯತ್ನ ಪಟ್ಟರು. ಈಗ ನಾನು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದೀನಿ. ನನಗೆ ನ್ಯಾಯ ಬೇಕು ನನ್ನ ಮೊಬೈಲ್‌ನಲ್ಲಿ ಎಲ್ಲ ರಹಸ್ಯ ಇದೆ. ನಾನು ಕೆಳಗೆ ಬಂದರೆ ಹುಚ್ಚ ಅನ್ನೋ ಪಟ್ಟ ಕಟ್ಟುತ್ತಾರೆ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸುತ್ತಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ