ಬೆಂಗಳೂರು: ಎಸ್‌ಸಿಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಬಿಜೆಪಿ ನಡೆ ಕೇವಲ ಕಣ್ಣೊರೆಸುವ ತಂತ್ರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ದೆಹಲಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ನ್ಯಾ. ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದು ಯಾರು..? ನಮ್ಮ ಸರ್ಕಾರ. ಅವರು ವರದಿ ಕೊಟ್ಟ ಮೇಲೆ ಎಷ್ಟು ದಿನ ಪೆಂಡಿಂಗ್ ಇತ್ತು? ಸ್ವಾಮೀಜಿ 250 ದಿನ ಪ್ರತಿಭಟನೆ ಏಕೆ ಮಾಡಿದರು? ಧರಣಿ ಮಾಡಿದರೂ ಇವರ ಸರ್ಕಾರದ ಕೊಡಿಗೆಯಾದರೆ ತಕ್ಷಣ ಮಾಡಬೇಕಾಗಿತ್ತು. ನಾವು ಒತ್ತಾಯ ಮಾಡಿ 3-4 ಬಾರಿ ಸದನದ ಬಾವಿಗಳಿದು ನಮ್ಮ ಶಾಸಕರು ಧರಣಿ ಮಾಡಿದ ಮೇಲೆ ಅತ್ತು ಕರೆದು ಈಗ ಮಾಡಿದ್ದಾರೆ.
ಸುಗ್ರೀವಾಜ್ಞೆ ಹೊರಡಿಸುವ ಬದಲು ಸದನ ಕರೆದು ಬಿಲ್ ಪಾಸ್ ಮಾಡೋಣ ಎಂದು ಹೇಳಿದ್ದೆವು. ಅಧಿವೇಶನ ಕರೆದು
ಕಾನೂನು ಮಾಡಬೇಕಾಗಿತ್ತು. ಅವರದ್ದೇ ಸರ್ಕಾರ ಇದೆ ಯಾವಾಗಲೂ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಾರೆ. ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಬೇಕಾಗಿತ್ತು. ಸುಗ್ರೀವಾಜ್ಞೆ ಹೊರಡಿಸಿ ಕಳುಹಿಸಿ ಬಿಟ್ಟರೆ 9ನೇ ಶೆಡ್ಯೂಲ್ ಗೆ ಸೇರಿಸಲು ಆಗುತ್ತಾ?
ಇದಕ್ಕಾಗಿಯೇ ಎರಡು ದಿನ ವಿಶೇಷ ಅಧಿವೇಶನ ಕರೆಯಬೇಕಾಗಿತ್ತು. ಸುಗ್ರೀವಾಜ್ಞೆ ಮಾಡುವ ಬದಲು, ಪ್ರಧಾನಿ ಹತ್ತಿರ ಕುಳಿತುಕೊಂಡು 9ನೇ ಷೆಡ್ಯೂಲ್‌ಗೆ ಸೇರಿಸುವ ಕೆಲಸ ಮಾಡಬೇಕಾಗಿತ್ತು. ಅದನ್ನು ಇವರು ಮಾಡಿಲ್ಲ. ಇದರ ಅರ್ಥ ಕೇವಲ ಕಣ್ಣು ಒರೆಸುವ ತಂತ್ರ ಅಷ್ಟೇ. ಬಿಜೆಪಿಯವರು ಯಾವಾಗಲೂ ಮೀಸಲಾತಿ ಪರ ಇಲ್ಲ. ವಿಧಿ ಇಲ್ಲದೇ ಸುಗ್ರೀವಾಜ್ಞೆ ಹೊರಡಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | SCST ಮೀಸಲು | ಸುಗ್ರೀವಾಜ್ಞೆಗೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಸಿಎಂ ಬೊಮ್ಮಾಯಿ ಭರವಸೆ