ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಿಂದ ನವೆಂಬರ್ 23 ಮತ್ತು 24ರಂದು ದಕ್ಷಿಣ ಭಾರತ ವಿಜ್ಞಾನ ನಾಟಕೋತ್ಸವವನ್ನು (Southern India Science Drama Festival) ನಗರದ ವಿಐಟಿಎಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ನ.23ರಂದು ಬೆಳಗ್ಗೆ 9.30ಕ್ಕೆ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಬೆಂಗಳೂರಿನ ಕಲೆ ಮತ್ತು ಛಾಯಾಗ್ರಹಣ ವಸ್ತುಸಂಗ್ರಹಾಲಯದ ನಿರ್ದೇಶಕಿ ಕಾಮಿನಿ ಸಾಹ್ನಿ, ಆಗಮಿಸಲಿದ್ದಾರೆ.
ಇದನ್ನೂ ಓದಿ | KSOU Mysuru: ಕೆಎಸ್‌ಒಯುನಿಂದ ಕೆಎಎಸ್, ಐಎಎಸ್ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ನ. 24ರಂದು ಮಧ್ಯಾಹ್ನ 2 ಗಂಟೆಗೆ ನಾಟಕ ರಚನೆ ಮತ್ತು ಪ್ರದರ್ಶನ ಕಾರ್ಯಾಗಾರವಿರಲಿದೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಾಟಕಕಾರ, ಚಲನಚಿತ್ರ ನಿರ್ಮಾಪಕ ಬಿ.ಸುರೇಶ ಆಗಮಿಸಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ