Site icon Vistara News

Railway Exam | ರೈಲ್ವೆ ನೇಮಕಾತಿ ಬೋರ್ಡ್‌ ಎಕ್ಸಾಂ ಅಭ್ಯರ್ಥಿಗಳಿಗಾಗಿ ಸ್ಪೆಷಲ್‌ ರೈಲು

railway

ಬೆಂಗಳೂರು: ರೈಲ್ವೆ ನೇಮಕಾತಿ ಬೋರ್ಡ್‌ ಎಕ್ಸಾಂಗಾಗಿ ನೈರುತ್ಯ ರೈಲ್ವೆ ಇಲಾಖೆಯು ಅಭ್ಯರ್ಥಿಗಳಿಗಾಗಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಕಡಪಾ ಮತ್ತು ಬೆಂಗಳೂರು ನಡುವೆ ವಿಶೇಷ ರೈಲು ಓಡಾಡಲಿದ್ದು, ಅಭ್ಯರ್ಥಿಗಳ ಸಂಚಾರಕ್ಕಾಗಿ 12 ಕಾರುಗಳ ಮೆಮು ವಿಶೇಷ ರೈಲು ಸೇವೆ ಇರಲಿದೆ. ಜೂನ್‌ 11 ರಂದು ಕಡಪದಿಂದ ಬೆಂಗಳೂರಿಗೆ ಮತ್ತು ಜೂನ್ 12 ರಂದು ಕೆಎಸ್ಆರ್ ಬೆಂಗಳೂರಿನಿಂದ ಕಡಪಗೆ ಸಂಚರಿಸಲಿದೆ..

ಯಾವ ಸಮಯಕ್ಕೆ ಓಡಾಟ?

ರೈಲು ಸಂಖ್ಯೆ.07582 ಕಡಪ – ಕೆಎಸ್ಆರ್ ಬೆಂಗಳೂರು  ಪರೀಕ್ಷಾ ವಿಶೇಷ ರೈಲು ಜೂನ್‌ 11ರಂದು 09.00 ಗಂಟೆಗೆ ಕಡಪದಿಂದ ಹೊರಟು 05.30 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.

ಪುನಃ, ರೈಲು ಸಂಖ್ಯೆ.07585 ಕೆಎಸ್ಆರ್ ಬೆಂಗಳೂರು – ಕಡಪ ಪರೀಕ್ಷಾ ವಿಶೇಷ ರೈಲು ಕೆಎಸ್ಆರ್ ಬೆಂಗಳೂರಿನಿಂದ ಜೂನ್‌ 12 ರಂದು 07.15 ಗಂಟೆಗೆ ಹೊರಟು ಜೂನ್‌ 13ರಂದು ಬೆಳಿಗ್ಗೆ 05.00 ಗಂಟೆಗೆ ಕಡಪ ತಲುಪುತ್ತದೆ.

ಇದನ್ನೂ ಓದಿ | George Fernandes Bday: ಕೊಂಕಣ ರೈಲ್ವೆ ಹಳಿ ಮೇಲೆ ಮೊದಲ ರೈಲು ಓಡಿದಾಗ ಅವರು ಮಗುವಿನಂತೆ ಬಿಕ್ಕಳಿಸಿದ್ದರು!

ಎಲ್ಲೆಲ್ಲಿ ನಿಲುಗಡೆ?

ಈ ವಿಶೇಷ ರೈಲಿಗೆ ರಾಜಂಪೇಟ, ಕೋಡೂರು, ರೇಣಿಗುಂಟ (ಮೇಲ್ಪಾಕ್ಕಂ ಮೂಲಕ) ಕಟ್ಪಾಡಿ, ಜೋಲಾರ್‌ಪೇಟ್ಟೈ  ಮತ್ತು ಬೆಂಗಳೂರು ಪೂರ್ವ ನಿಲ್ದಾಣಗಳಲ್ಲಿ  ನಿಲುಗಡೆ ಇರಲಿದೆ. ವಿಶೇಷ ರೈಲಿನ ದರವು ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲಿನಂತೆಯೇ  ಇರಲಿದೆ ಅಂತ ಇಲಾಖೆ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ | ನಿಮಗಿದು ಗೊತ್ತೇ?: ರೈಲ್ವೆ ಸಂಕೇತಗಳ ಅರ್ಥವೇನು?

Exit mobile version