Site icon Vistara News

Loan Mela: ಮೇ 31ರವರೆಗೆ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ‘ಸಾಲಮೇಳ ಮಾಸ’

Sree Thyagaraja Co-operative Bank Limited

Sree Thyagaraja Co-operative Bank Limited

ಬೆಂಗಳೂರು: ನಗರದ ಎನ್‌.ಆರ್‌.ಕಾಲೋನಿಯ ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌ ವತಿಯಿಂದ ಸದಸ್ಯರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಮೇ 31 ರವರೆಗೆ ʼಸಾಲಮೇಳ ಮಾಸʼ (Loan Mela) ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಸಾಲ ಕೋರಿ ಬರುವ ಅರ್ಜಿಗಳಿಗೆ ಯಾವುದೇ ಸೇವಾಶುಲ್ಕವಿಲ್ಲದೆ ಸಾಲ ಸಿಗಲಿದೆ.

ಬ್ಯಾಂಕಿನಲ್ಲಿ ವಿವಿಧ ರೀತಿಯ ಗೃಹ ಸಾಲ, ಅಡಮಾನ ಸಾಲ, ವ್ಯಾಪಾರಾಭಿವೃದ್ಧಿ ಸಾಲ, ಎಂಎಸ್‌ಎಂಇ ವಲಯ ಹಾಗೂ ಗುಡಿ ಕೈಗಾರಿಕೆಗಳಿಗೆ ನೆರವಾಗುವಂತಹ ಸಾಲಗಳನ್ನು ಆಕರ್ಷಕ ಬಡ್ಡಿದರಗಳಲ್ಲಿ ನೀಡಲಾಗುತ್ತದೆ. ಇನ್ನು ಸದಸ್ಯರು, ಗ್ರಾಹಕರ ದಿನ ನಿತ್ಯದ ನಗದುರಹಿತ ವ್ಯಾವಹಾರಿಕ ವಹಿವಾಟಿಗೆ ಅನುಕೂಲವಾಗುವಂತೆ QR Code Scanner ಗಳನ್ನೂ ಸಹ ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌ ತಿಳಿಸಿದ್ದಾರೆ.

ಇದನ್ನೂ ಓದಿ | Book Release: ಮೇ 21ರಂದು ಸಾವರ್ಕರ್‌ ಸಮಗ್ರ ಸಂಪುಟ 6 ಪುಸ್ತಕ ಲೋಕಾರ್ಪಣೆ; ಸಾತ್ಯಕಿ ಸಾವರ್ಕರ್‌ ಭಾಗಿ

ಅದೇ ರೀತಿ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನೂ ಒದಗಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಸದಸ್ಯರ ಹಿತದೃಷ್ಟಿಯಿಂದ ಬ್ಯಾಂಕಿನ ಒಟ್ಟು ವಹಿವಾಟನ್ನು ವಿಸ್ತರಿಸುವ ಗುರಿಯೊಂದಿಗೆ ಬೆಂಗಳೂರು ಹೊರ ವಲಯದಲ್ಲಿ ಐದು ಹೊಸ ಶಾಖೆಗಳನ್ನು ಆದಷ್ಟು ಶೀಘ್ರವಾಗಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಆಕರ್ಷಕ ಬಡ್ಡಿದರಗಳಲ್ಲಿ ಚಿನ್ನಾಭರಣ ಸಾಲಗಳನ್ನೂ ಸಹ ವಿತರಿಸಲಾಗುತ್ತಿದೆ. ಬ್ಯಾಂಕಿನಲ್ಲಿ ಒದಗಿಸುತ್ತಿರುವ ಈ ಸೌಲಭ್ಯಗಳನ್ನು ಗ್ರಾಹಕರು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

Exit mobile version