Site icon Vistara News

SSLC Students Fight: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹೊಡಿಬಡಿ; ಮೂವರಿಗೆ ಚಾಕು ಇರಿತ

SSLC Students Fighting

ಬೆಂಗಳೂರು: ಎಸ್ಎಸ್ಎಲ್‌ಸಿ ಹುಡುಗರ ಮಾರಾಮಾರಿ ನಡೆದಿದ್ದು, ಮೂವರು ವಿದ್ಯಾರ್ಥಿಗಳು ಚಾಕು (SSLC Students Fight) ಇರಿತಕ್ಕೊಳಗಾಗಿದ್ದಾರೆ. ಪರೀಕ್ಷಾ ಕೊಠಡಿಯ ಹೊರಗೆ ಬ್ಯಾಗ್ ಇಡುವ ವಿಚಾರಕ್ಕೆ ರಾಗಿ ಗುಡ್ಡ ಹಾಗೂ ಸಾರಕ್ಕಿ ಬಳಿ ಇರುವ ಶಾಲಾ ವಿದ್ಯಾರ್ಥಿಗಳ ನಡುವೆ ಕಿರಿಕ್ ನಡೆದಿದೆ. ಪರೀಕ್ಷೆ ಮಗಿಸಿ ಮನೆಗೆ ಹೋಗುವಾಗ ಎರಡು ಶಾಲೆಗಳ ಮಕ್ಕಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಖಾಸಗಿ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಎರಡು ಶಾಲೆಯ ಮಕ್ಕಳು, ಪರೀಕ್ಷಾ ಕೇಂದ್ರದಲ್ಲಿ ಜಗಳ ನಡೆಸಿದ್ದಾರೆ. ಒಳಗೆ ಜಗಳವಾಡಿ ಅದೇ ದ್ವೇಷದಿಂದ ಹಿಂಬಾಲಿಸಿ ಬಂದಿದ್ದ ರಾಗಿ ಗುಡ್ಡ ಬಳಿ ಇರುವ ಶಾಲಾ ಬಾಲಕರು, ನಂತರ ಸಾರಕ್ಕಿ ಬಳಿ ಇರುವ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದು ಪರಾರಿ ಆಗಿದ್ದಾರೆ.

ನಿನ್ನೆ ಬುಧವಾರ ಮಧ್ಯಾಹ್ನ 1-45ಕ್ಕೆ ಘಟನೆ ನಡೆದಿದ್ದು, ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಎಲ್ಲ ಬಾಲಕರ ಮೇಲೂ ಕೊಲೆ ಯತ್ನ ಪ್ರಕರಣದಡಿ ಪ್ರಕರಣ ದಾಖಲಿಸಿದ್ದಾರೆ. ಪುಸ್ತಕ ಹಿಡಿಯಬೇಕಿದ್ದ ಕೈಗಳಿಗೆ ಈಗ ಕೋಳ ಬಿದ್ದಿದೆ.

ಇದನ್ನೂ ಓದಿ:Toll Hike: ಮತ್ತೆ ಟೋಲ್‌ ಬರೆ; ಬೆಂಗಳೂರು-ಮೈಸೂರು ಓಡಾಟ ಇನ್ನಷ್ಟು ದುಬಾರಿ

ಕುಡಿಯುವ ನೀರಿಗಾಗಿ ಚಿಮ್ಮಿತು ರಕ್ತ; ಚಾಕು ಇರಿದು ಯುವಕನ ಕೊಲೆ

ಯಾದಗಿರಿ: ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕರ (Water Crisis) ಶುರುವಾಗಿದೆ. ಗಂಟೆಗಟ್ಟಲೇ ಕಾಯುತ್ತಾ, ಹಗಲಿರುಳು ಎನ್ನದೇ ನಲ್ಲಿ ಮುಂದೆ ಕೂರುವಂತಾಗಿದೆ. ಬರಗಾಲವು ತೀವ್ರವಾಗಿ ಆವರಿಸಿದೆ. ಈ ಮಧ್ಯೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಂಬಂಧಿಕರೇ ಕಿತ್ತಾಡಿಕೊಂಡಿದ್ದು, ರಕ್ತವನ್ನೇ (Murder Case) ಹರಿಸಿದ್ದಾರೆ.

ಕುಡಿಯುವ ನೀರಿಗಾಗಿ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ನಂದಕುಮಾರ ಕಟ್ಟಿಮನಿ (21)ಕೊಲೆಯಾದವನು. ಹಣಮಂತ ಹಾಗೂ ಹಣಮವ್ವ ಕೊಲೆ ಆರೋಪಿಗಳಾಗಿದ್ದಾರೆ. ನೀರಿನ ವಿಚಾರವಾಗಿ ನಂದಕುಮಾರನ ಅಜ್ಜಿ ಜತೆ ಆರೋಪಿಗಳು ಜಗಳವಾಡಿದ್ದರು.

ಹೊರಹೋಗಿ ಮನೆಗೆ ವಾಪಸ್‌ ಬಂದ ನಂದಕುಮಾರಗೆ ಗಲಾಟೆ ವಿಚಾರವನ್ನು ಅಜ್ಜಿ ತಿಳಿಸಿದ್ದರು. ಹೀಗಾಗಿ ಅಜ್ಜಿ ಜತೆ ನೀವೂ ಯಾಕೆ ಜಗಳ ಮಾಡಿದ್ದೀರಿ ಎಂದು ಮೊಮ್ಮಗ ನಂದಕುಮಾರ್‌ ಸಂಬಂಧಿಗಳಾದ ಹಣಮಂತ ಮತ್ತು ಹಣಮವ್ವರಿಗೆ ಪ್ರಶ್ನೆ ಮಾಡಿದ್ದ. ಇದೇ ವೇಳೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಜಗಳವು ವಿಕೋಪಕ್ಕೆ ತಿರುಗಿದ್ದು, ನಂದಕುಮಾರ್‌ಗೆ ಹಾಗೂ ಈತನ ತಾಯಿಗೂ ಹಲ್ಲೆ ನಡೆಸಿದ್ದಾರೆ.

ಕೊಲೆಯಾದ ನಂದಕುಮಾರ ಕಟ್ಟಿಮನಿ

ಇಷ್ಟಕ್ಕೆ ಸುಮ್ಮನಾಗದೆ ಹಣಮಂತ ಹಾಗೂ ಹಣಮವ್ವ ಎಂಬುವವರು ನಂದಕುಮಾರಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಸಂಬಂಧ ಹುಣಸಗಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹಣಮಂತ ಹಾಗೂ ಹಣಮವ್ಬ ಇಬ್ಬರನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version