ಬೆಂಗಳೂರು: ಅವನದು ಒಳ್ಳೆಯ ಫ್ಯಾಮಿಲಿ (He belongs to good Family) . ತಂದೆ ಸರ್ಕಾರಿ ಉದ್ಯೋಗಿ. ಹೆಂಡತಿ ಡಯಟೀಷಿಯನ್. ಮೂವರು ಮಕ್ಕಳು. ಅವನೂ ಸಾಮಾನ್ಯದವನೇನೂ ಅಲ್ಲ. ಓದಿದ್ದು ಐಐಟಿಯಲ್ಲಿ (He Graduated from IIT). ದೊಡ್ಡ ಕಂಪನಿಯಲ್ಲಿ ಕೆಲಸ ಇತ್ತು, ವರ್ಷಕ್ಕೆ ಕೋಟಿ ರೂ. ಸಂಬಳ (He had 1 crore salary per year). ಆದರೆ, ಅವನಿಗೆ ಇದ್ದಿದ್ದು ಮಾತ್ರ ಉಗ್ರ ಬುದ್ಧಿ, ದುಷ್ಟಬುದ್ಧಿ. ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎನ್‌ಐಎ ದಾಳಿಯ (NIA Raid) ವೇಳೆ ಅರೆಸ್ಟ್ ಆದ ಶಂಕಿತ ಉಗ್ರ, ಡಾಟಾ ಸೈನ್ಸ್ ಕನ್ಸಲ್ಟೆಂಟ್ (Data science Consultant) ಅಲಿ ಅಬ್ಬಾಸ್ ಪೇಟಿವಾಲಾನ (Ali Abbas Petiwala) ಕಥೆ. ಅವನು ಮೂಲತಃ ಮುಂಬಯಿಯವನು ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ.
ಕಳೆದ ಡಿಸೆಂಬರ್ 10ರಂದು ದೇಶಾದ್ಯಂತ ಎನ್‌ಐಎ ದಾಳಿ ನಡೆದಿತ್ತು. ಬೆಂಗಳೂರಿನ ಆರು ಕಡೆಗಳಲ್ಲಿ ಪೊಲೀಸರು ಏಕಕಾಲದಲ್ಲಿ ನುಗ್ಗಿದ್ದರು. 2008ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ರೂವಾರಿ ಟಿ. ನಸೀರ್ ಜತೆ ಸಂಪರ್ಕದಲ್ಲಿದ್ದ ಶಂಕಿತ ಉಗ್ರರಾದ ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹಮ್ಮದ್, ಮೊಹಮ್ಮದ್ ಫಾರೂಕ್, ತಲೆಮರೆಸಿಕೊಂಡಿರುವ ಮತ್ತೊಬ್ಬ ಶಂಕಿತ ಉಗ್ರ ಜುನೈದ್ ಅಹಮ್ಮದ್ ಹಾಗೂ ಮತ್ತಿಬ್ಬರ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು. ಶಂಕಿತ ಉಗ್ರರ ಮನೆಗಳಲ್ಲಿ ಸಿಕ್ಕಿರುವ ಮಹತ್ವದ ದಾಖಲೆಪತ್ರಗಳು, ಶಸ್ತ್ರಾಸ್ತ್ರ, ಸಂವಹನಕ್ಕೆ ಬಳಸುತ್ತಿದ್ದ ಡಿಜಿಟಲ್ ಸಾಧನಗಳು, 7.30 ಲಕ್ಷ ರೂ. ನಗದು ಜಪ್ತಿ ಮಾಡಿದ್ದರು. ಇದೇ ವೇಳೆ ದಾಳಿ ನಡೆದ ಇನ್ನೊಂದು ಮನೆಯಗೇ ಅಲಿ ಅಬ್ಬಾಸ್‌ಗೆ ಸೇರಿದ್ದು.
ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ ಎಂಬಾತನ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿ ತೀವ್ರ ಶೋಧ ನಡೆಸಿದ್ದರು. ಬಳಿಕ ಮರುದಿನ ಮತ್ತೆ ಅಬ್ಬಾಸ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿ 16,42,000 ಹಣ ಸೀಜ್ ಮಾಡಿದ್ದರು. ಮೊಬೈಲ್, ಲ್ಯಾಪ್ಟಾಪ್ ಪರಿಶೀಲನೆ ನಡೆಸಿ ಐಸಿಸ್ ಶಂಕಿತ ಉಗ್ರ ಅಬ್ಬಾಸ್ನನ್ನ ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದರು. ನಂತರ ದಾಖಲೆಗಳ ಪರಿಶೀಲನೆ ನಡೆಸಿ ಮತ್ತೆ ವಶಕ್ಕೆ ಪಡೆದು ವಿಚಾರಣೆಗೆ ಪಡೆದು ಈಗ ಅರೆಸ್ಟ್ ಮಾಡಲಾಗಿದೆ.
ಒಳ್ಳೆಯ ಹಿನ್ನೆಲೆ ಹೊಂದಿದ್ದರೂ ಅಲಿ ಅಬ್ಬಾಸ್ ತನ್ನ ಕಿರಾತಕ ಬುದ್ಧಿಯನ್ನು ಪೋಷಿಸುತ್ತಲೇ ಬಂದಿದ್ದ. ಆತ ಕಳೆದ ಹಲವು ವರ್ಷಗಳಿಂದ ಐಸಿಸ್ ಕಾಂಟ್ಯಾಕ್ಟ್ ಹೊಂದಿೃುವುದು ಬೆಳಕಿಗೆ ಬಂದಿದೆ. ಆತನಿಗೆ ಮುಂಬಯಿಯಲ್ಲಿದ್ದಾಗಲೇ ದೊಡ್ಡ ಮಟ್ಟದಲ್ಲಿ ಐಸಿಸ್ ಸಂಪರ್ಕವಿತ್ತು.
ಇದನ್ನೂ ಓದಿ: NIA Raid: ಶಂಕಿತ ಉಗ್ರ ಅಲಿ ಅಬ್ಬಾಸ್ ಮತ್ತೆ ಎನ್‌ಐಎ ವಶಕ್ಕೆ
ಐಸಿಸ್ ಸಂಪರ್ಕ ಬಿಡಿಸಲು ಯತ್ನಿಸಿದ ಪತ್ನಿ
ನಿಜವೆಂದರೆ, ಅಲಿ ಅಬ್ಬಾಸ್‌ಗೆ ಐಸಿಎಸ್ ಸಂಪರ್ಕ ಇರುವುದು ಮೊದಲ ಬಾರಿಗೆ ಗೊತ್ತಾಗಿದ್ದು ಆತನ ಹೆಂಡ್ತಿಗೆ. ಇಷ್ಟೊಳ್ಳೆಯ ಕೆಲಸ, ಸಂಸಾರ ಇರುವಾಗ ಯಾಕಿಂತ ಬುದ್ಧಿ ಎಂದು ಆಕೆ ಪ್ರಶ್ನಿಸಿದ್ದಳು. ಆತ ಆಕೆಗಾಗಿ ಸಂಪರ್ಕ ಬಿಟ್ಟಂತೆ ಮಾಡಿದ್ದರೂ ಒಳಗೊಳಗೆ ಸಂವಹನ ಇಟ್ಟುಕೊಂಡಿದ್ದ. ಇದರಿಂದ ಬೇಸತ್ತ ಪತ್ನಿ ಆತನನ್ನು ಹೇಗಾದರೂ ಬದಲಾವಣೆ ಮಾಡಬೇಕು ಎಂದು ಬಯಸಿ ಮುಂಬಯಿ ಬಿಡಿಸಿದಳು.
ಅಲಿ ಅಬ್ಬಾಸ್‌ನನ್ನು ಬೆಂಗಳೂರಿಗೆ ಕರೆತಂದ ಪತ್ನಿ ಐಸಿಸ್ ಕಾಂಟ್ಯಾಕ್ಟ್ ಬಿಡಿಸಿ ಒಳ್ಳೆಯ ಜೀವನ ನಡೆಸುವ ಕನಸು ಕಂಡಿದ್ದಳು. ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಅಲಿ ಅಬ್ಬಾಸ್ ಪೇಟಿವಾಲಾ ಡಾಟಾ ಸೈನ್ಸ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಒಂದು ಉರ್ದು ಶಾಲೆಯನ್ನು ಕೂಡಾ ಹೆಂಡತಿ ತೆರೆಸಿದ್ದಾಳೆ. ಡಯಟೀಷಿಯನ್ ಆಗಿರುವ ಪತ್ನಿ ಒಂದು ಆಸ್ಪತ್ರೆ ನಡೆಸುತ್ತಿದ್ದಾಳೆ.
ಇಷ್ಟೆಲ್ಲ ಇದ್ದರೂ ಅಬ್ಬಾಸ್ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ. ಹೆಂಡತಿಗೆ ಗೊತ್ತಿಲ್ಲದಂತೆಯೇ ಮಹಾರಾಷ್ಟ್ರದ ತನ್ನ ಹಳೆ ಸಂಬಂಧಗಳನ್ನು ಮುಂದುವರಿಸಿದ್ದ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕೆಲವರನ್ನು ಎನ್‌ಐಎ ಬಂಧಿಸಿದಾಗ ಅವರಿಗೆಲ್ಲ ಅಬ್ಬಾಸ್ ಜತೆ ಸಂಬಂಧವಿರುವುದು ಬಯಲಿಗೆ ಬಂದಿತ್ತು. ಇವರೆಲ್ಲ ನಿರಂತರವಾಗಿ ಐಸಿಸ್ ಕಾಂಟ್ಯಾಕ್ಟ್, ಗ್ರೂಪ್‌ಗಳಲ್ಲಿ ಅಕ್ರಮ ಚಟುವಟಿಗಳ ಬಗ್ಗೆ ಸಂಭಾಷಣೆ ಮಾಡುತ್ತಿದ್ದರು ಎನ್ನಲಾಗಿದೆ.
ವಾಟ್ಸ್ ಆಪ್ ಗ್ರೂಪಿಗೆ ಅವನೇ ಎಡ್ಮಿನ್
ಅಲಿ ಅಬ್ಬಾಸ್ ಪೇಟಿವಾಲಾ ಉಗ್ರ ಚಟುವಟಿಕೆಗಳ ಚರ್ಚೆಗೆ ಒಂದು ವಾಟ್ಸ್ ಆಪ್ ಗ್ರೂಪ್ ಕ್ರಿಯೇಟ್ ಮಾಡಿದ್ದ. ಅದರ ಅಡ್ಮಿನ್ ಕೂಡಾ ಆಗಿದ್ದ. ತನ್ನದೇ ಮನಸ್ಥಿತಿಯ ನೂರಾರು ಜನರನ್ನು ಸೇರಿಸಿದ್ದ. ಅಬ್ಬಾಸ್ ಮನೆ ದಾಳಿ ವೇಳೆ ಈ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಪತ್ತೆಯಾಗಿವೆ.
ಉಗ್ರ ಸಂಘಟನೆಗಳಿಗೆ ಡೊನೇಷನ್
ಅಲಿ ಅಬ್ಬಾಸ್ ಪೇಟಿವಾಲಾ ಮನೆಯಲ್ಲೇ ಕಂತೆ ಕಂತೆ ಹಣ ಇಟ್ಟುಕೊಂಡಿದ್ದ. ಅಲ್ಲದೇ ಕೆಲ ಸಂಘಟನೆಗಳಿಗೆ ಡೊನೇಷನ್ ನೀಡಿದ್ದ ರಶೀದಿಗಳು ಪತ್ತೆಯಾಗಿವೆ. 30 ಸಾವಿರ, 16 ಸಾವಿರ ಹೀಗೆ ಒಂದೊಂದು ಕಂತು ಹಣ ಹಾಕ್ತಿದ್ದ ಅಬ್ಬಾಸ್ ಉಗ್ರರಿಗೆ ನೆರವಾಗುತ್ತಿದ್ದ. ಸದ್ಯ ಮನೆಯಲ್ಲಿ ಸಿಕ್ಕಿರೋ ಎಲ್ಲಾ ವಸ್ತುಗಳನ್ನು ಸೀಜ್ ಮಾಡಿರುವ ಎನ್ಐಎ, ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಎಫ್ ಎಸ್ ಎಲ್ ಗೆ ರವಾನೆ ಮಾಡಿದೆ.