ಬೆಂಗಳೂರು: ಪ್ರಿನ್ಸಿಪಾಲ್ ಬೈದದ್ದರಿಂದ ವಿದ್ಯಾರ್ಥಿಯೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಜಿ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಲ್ ಅಮೀನ್ ಕಾಲೇಜು ವಿದ್ಯಾರ್ಥಿ ರಿಜ್ವಾನ್ @ ಜೈದ್ (25) ಆತ್ಮಹತ್ಯೆ ಮಾಡಿಕೊಂಡಾತ. ಎಲ್‌ಎಲ್‌ಬಿ ಫೈನಲ್ ಇಯರ್ ಓದುತ್ತಿದ್ದ ರಿಜ್ವಾನ್, ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ. ನಿನ್ನೆ ಪ್ರಿನ್ಸಿಪಾಲ್ ಬೈದಿದ್ದಾರೆಂಬ ಕಾರಣಕ್ಕೆ ಮನನೊಂದಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | Crime news | ಫೇಸ್‌ಬುಕ್ ಸುಂದರಿಗಾಗಿ ಪತ್ನಿಗೆ ವಿಷ ಹಾಕಿದ ಪತಿರಾಯ