Site icon Vistara News

Suicide Case: ಪತಿಯ ಅನೈತಿಕ ಸಂಬಂಧದಿಂದ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪತ್ನಿ

pavitra Suicide Case

ಬೆಂಗಳೂರು: ಪತಿ ಹಾಗೂ ಆತನ ಗರ್ಲ್‌ಫ್ರೆಂಡ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಅದನ್ನು ವಾಟ್ಸಾಪ್‌ ಸ್ಟೇಟಸ್‌ ಹಾಕಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೆಗ್ಗನಹಳ್ಳಿ‌ ನಿವಾಸಿ ಪವಿತ್ರಾ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಜುಲೈ 2ರ ಬೆಳಗಿನ ಜಾವ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಪವಿತ್ರಾ ಎರಡನೇ ಮದುವೆಯಾಗಿದ್ದರು. ಚೇತನ್‌ ಗೌಡ, ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕನಾಗಿದ್ದು, ಪವಿತ್ರ ಈತನ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ಮತ್ತೊಬ್ಬ ಯುವತಿಯ ವಿಚಾರವಾಗಿ ಪತಿ ಪತ್ನಿ ಮಧ್ಯೆ ಜಗಳವಾಗುತ್ತಿತ್ತು. ಈ ಬಗ್ಗೆ ತಮ್ಮ ತಾಯಿ ಪದ್ಮಮ್ಮ ಬಳಿ ಪವಿತ್ರ ತಿಳಿಸಿದ್ದರು. ಕೊನೆಗೆ ಮನನೊಂದು ಡೆತ್ ನೋಟ್ ಬರೆದು ಅದನ್ನು ವಾಟ್ಸ್ಯಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾರೆ.

ಮಗಳ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ನೋಡಿ ಗಾಬರಿಯಾದ ತಾಯಿ ಮಗಳ ಮನೆ ಬಳಿ ಬಂದಾಗ ಪವಿತ್ರಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯ ಕೆಂಗೇರಿ ಠಾಣೆಯಲ್ಲಿ ಚೇತನ್ ಗೌಡ ಹಾಗೂ ಮತ್ತೊಬ್ಬ ಯುವತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತರ ತಾಯಿ ಪದ್ಮಮ್ಮರ ದೂರಿನನ್ವಯ ಐಪಿಸಿ 306- ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಿಸಲಾಗಿದೆ. ಮೃತರ ಡೆತ್ ನೋಟ್ ಹಾಗೂ ಎರಡು ಪೋನ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Suicide Case: ಸಂಗಾತಿ ನೀನು ದೂರಾದ ಮೇಲೆ… ಪತ್ನಿ ಓಡಿ ಹೋದಳು ಎಂದು ತಾಯಿ ಸಮಾಧಿ ಬಳಿ ವ್ಯಕ್ತಿ ಆತ್ಮಹತ್ಯೆ

Exit mobile version