ಬೆಂಗಳೂರು: ಬೆಂಗಳೂರಿನ ಮಳೆ ಪೀಡಿತ ಪ್ರದೇಶಗಳಲ್ಲಿನ (Rain news) ಜನತೆಗೆ ಅಗತ್ಯ ವಸ್ತುಗಳನ್ನು ನಿರಂತರವಾಗಿ ಪೂರೈಸಲು ನೆರವಾಗುವ ನಿಟ್ಟಿನಲ್ಲಿ ಎಫ್‌ಟಿಎಚ್ ಡೈಲಿ (FreshToHome) ಹಲವು ಉಪಕ್ರಮಗಳನ್ನು ಕೈಗೊಂಡಿದೆ.
ಫ್ರೆಶ್‌ಟು ಹೋಮ್‌ನ ಎಫ್‌ಟಿಎಚ್ ಡೈಲಿ ಉಪಕ್ರಮದ ಅಡಿಯಲ್ಲಿ, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಸಂಚರಿಸದ ಕಡೆಗಳಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ದಿನ ಬಳಕೆಯ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗುವುದು. ಬೆಳಗ್ಗೆಯೇ ಬಳಕೆದಾರರಿಗೆ ಬೇಕಾದ ವಸ್ತುಗಳನ್ನು ವಿತರಿಸಲಾಗುವುದು. ಪೂರ್ವ ಬೆಂಗಳೂರಿನ ನಾನಾ ಕಡೆಗಳಲ್ಲಿ ಜನತೆಗೆ ಸಮಸ್ಯೆಯಾಗಿದ್ದು, ಈ ಭಾಗದಲ್ಲಿ ಎಫ್‌ಟಿಎಚ್ ಡೈಲಿ ತನ್ನ ಡೆಲಿವರಿ ಸಿಬ್ಬಂದಿ ನೆಟ್ ವರ್ಕ್ ಅನ್ನು ಬಲಪಡಿಸಿದೆ. ಸಾವಿರಾರು ಮಂದಿಯನ್ನು ಹೆಚ್ಚುವರಿಯಾಗಿ ನೇಮಿಸಿದೆ.
ಎಫ್‌ಟಿಎಚ್ ಡೈಲಿ ಪೂರ್ವ ಬೆಂಗಳೂರಿನ ನಾನಾ ಕಡೆಗಳಲ್ಲಿ ದಿನಕ್ಕೆ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸುತ್ತದೆ. ಬೆಳ್ಳಂದೂರು, ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಎಫ್‌ಟಿಎಚ್ ಡೈಲಿ ತನ್ನ ಸೇವೆಯನ್ನು ವ್ಯಾಪಕವಾಗಿ ವಿಸ್ತರಿಸಿದೆ.
ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಲ್ಲಿ 2014ರಿಂದೀಚೆಗೆ ಅತಿ ಹೆಚ್ಚು ಮಳೆಯಾಗಿದೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಆದ್ದರಿಂದ ತಗ್ಗುಪ್ರದೇಶಗಳಲ್ಲಿ ಸಮಸ್ಯೆಗೀಡಾಗಿರುವವರಿಗೆ ಎಫ್‌ಟಿಎಚ್ ಡೈಲಿ ತನ್ನ ಸೇವೆ ನೀಡಲಿದೆ. ಹಾಲು, ಮೊಸರು, ತರಕಾರಿ, ಹಣ್ಣು ಹಂಪಲು, ದಿನಸಿ ವಸ್ತುಗಳನ್ನು ತಲುಪಿಸಲಿದೆ ಎಂದು ಫ್ರೆಶ್‌ಟುಹೋಮ್‌ನ ಸಹ ಸಂಸ್ಥಾಪಕ ಶಾನ್ ಕಡಾವಿಲ್ ತಿಳಿಸಿದ್ದಾರೆ.
ಎಫ್‌ಟಿಎಚ್ ಡೈಲಿ ಸಂಸ್ಥೆಯು ಹೊಸಕೋಟೆ, ನಂಜನಗೂಡು, ರಾಮನಗರ, ಕನಕಪುರ, ಎಚ್‌ಡಿ ಕೋಟೆ ಮತ್ತು ಇತರ ಪ್ರದೇಶಗಳಲ್ಲಿ ರೈತರಿಂದ ತಾಜಾ ತರಕಾರಿ, ಹಣ್ಣು ಹಂಪಲುಗಳನ್ನು ನೇರವಾಗಿ ಖರೀದಿಸಿ ಬೆಳಗ್ಗೆ 7.30 ಗಂಟೆಯೊಳಗೆ ಗ್ರಾಹಕರಿಗೆ ತಲುಪಿಸುತ್ತದೆ.
ನೆರೆಪೀಡಿತ ಪ್ರದೇಶಗಳಲ್ಲಿ ಸಕಾಲಕ್ಕೆ ಅಗತ್ಯ ವಸ್ತುಗಳನ್ನು ತಲುಪಿಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆ ಶ್ರಮಿಸುತ್ತದೆ ಎಂದು ಎಫ್‌ಟಿಎಚ್ ಡೈಲಿಯ ಡೆಲಿವರಿ ಎಕ್ಸಿಕ್ಯುಟಿವ್ ಶರತ್ ಕೆ.ಎನ್ ತಿಳಿಸಿದ್ದಾರೆ.