Site icon Vistara News

Swadeshi Mela | ಸ್ವದೇಶಿ ವಸ್ತುಗಳ ಕುರಿತು ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

swadeshi-mela-people more interested in desi products now a days says cm bommai

ನೆಲಮಂಗಲ(ಬೆಂಗಳೂರು): ಭಾರತಿಯತೆ, ನಮ್ಮತನ ಸಂಸ್ಕೃತಿ ಯಾವುದನ್ನೂ ಸ್ವದೇಶಿ ಜಾಗರಣ ಮಂಚ್ ಬಿಟ್ಟುಕೊಟ್ಟಿಲ್ಲ. ಕಳೆದ ಬಾರಿ ಜಯನಗರದಲ್ಲಿ ಮೇಳ ಆಯೋಜನೆ ಮಾಡಲಾಗಿತ್ತು, ಕಳೆದ ಬಾರಿ 220 ಮಳಿಗೆ ಇದ್ದರೆ ಈ ಬಾರಿ 300 ಮಳಿಗೆ ಸ್ಥಾಪಿಸಲಾಗಿದೆ. ಜನರಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ಹೆಚ್ಚಿನ ಆಸಕ್ತಿ ಬಂದಿದೆ ಎಂಬುದು ಇದರಿಂದ ತಿಳಿಯುತ್ತದೆ.

ದೇಶ ಅಭಿವೃದ್ಧಿಯಾಗಿದೆ. ಗುಡಿಸಲಿನಿಂದ ದೊಡ್ಡ ಬಿಲ್ಡಿಂಗ್ ಗಳು, ವಿಮಾನ್‌ಗಳು ಬಂದಿವೆ. ಸೈಕಲ್‌ ಸ್ಕೂಟರ್‌ನಿಂದ 3 ಕೋಟಿ ರೂಪಾಯಿಯ ಕಾರುಗಳು ಬಂದಿವೆ, ಇದು ನಾಗರಿಕತೆ. ನಮ್ಮ ಹತ್ತಿರ ಎನಿದೆ ಅದು ನಾಗರಿಕತೆ. ನಾವು ಹೇಗಿದ್ದೇವೊ ಅದು ಸಂಸ್ಕೃತಿ. ವಿದೇಶಿ ವ್ಯಾಮೋಹ ಬೇಕೊ ಅಥವಾ ಸಂಸ್ಕೃತಿ ಆಧಾರಿತ ಜೀವನ ಬೋಕೋ ಎನ್ನುವುದನ್ನು ನಾವು ತಿರ್ಮಾನ ಮಾಡಬೇಕು. ಬೀಸುವಕಲ್ಲು ತಿರುಗಿಸಬೇಕಾದರೆ ಹಾಡು ಹಾಡುತ್ತಿದ್ದರು. ಬೀಸುಕಲ್ಲು ಜಾಗದಲ್ಲಿ ಮಿಕ್ಸರ್ ಬಂದಿದೆ. ಒಳ್ಳು ಒನಕೆ ಇತ್ತು ಈಗ ಅದು ಇಲ್ಲ. ಎತ್ತುಗಳಿದ್ದಾಗ ರೈತ ಹಾಡು ಹಾಡುತ್ತಿದ್ದ, ಈಗ ಎತ್ತುಗಳಿಲ್ಲ.

ಯಾವ ದೇಶಕ್ಕೆ ಸಂಸ್ಕೃತಿಯಿಲ್ಲವೋ ಆ ದೇಶ ಬೇಗ ನಾಶ ಆಗುತ್ತದೆ. ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಯನ್ನು ಸ್ವದೇಶಿ ಜಾಗರಣ ಮಂಚ್ ಉಳಿಸುತ್ತಿದೆ. ಖಾಸಗಿರಣ, ಜಾಗತೀಕರಣ, ಔದಾರೀಕರಣದಲ್ಲಿ ನಮ್ಮತನ ಮರೆತಿದ್ದೇವೆ. ಬೆಳಗ್ಗೆ ಹಲ್ಲು ಉಜ್ಜುವುದರಿಂದ ಹಿಡಿದು ಹೊರದೇಶದ ವಸ್ತು ಬಳಕೆ ಮಾಡುತ್ತಿದ್ದೆವು. ಈಗ ಪತಂಜಲಿ ಮೂಲಕ ಸ್ವದೇಶಿ ಜಾಗರಣೆ ಆಗುತ್ತಿದೆ. ಆತ್ಮ ನಿರ್ಭರ ಭಾರತ, ಮೆಕ್‌ಇನ್‌ಇಂಡಿಯಾ ಮೂಲಕ ನರೇಂದ್ರ ಮೋದಿಯವರು ಅನೇಕ ಕಾರ್ಯ ಮಾಡಿದ್ದಾರೆ.

ಭಾರತದಿಂದ ಗಾರ್ಮೆಂಟ್ಸ್‌ನಲ್ಲಿ ತಯಾರಾಗುವ ವಸ್ತು ಹೊರದೇಶಕ್ಕೆ ರಫ್ತು ಆಗುತ್ತಿದೆ. ಯುನಿಲಿವರ್‌ ಎನ್ನುವುದು ರಷ್ಯನ್‌ ಆರ್ಮಿಗಿಂತ ದೊಡ್ಡ ಸಂಸ್ಥೆ. ನಮ್ಮ ಸ್ವದೇಶಿ ನಿರ್ಮಾ ಕಂಪನಿ ಅದಕ್ಕೆ ಪೈಪೋಟಿ ಕೊಟ್ಟಿತು. ಎಲ್ಲರಿಗೂ ಪೈಪೋಟಿ ಕೊಡುವಷ್ಟು ಸಾಮರ್ಥ್ಯ ನಮ್ಮಲ್ಲಿ ಇದೆ. 130 ಕೋಟಿ ಜನರ ಮಾರುಕಟ್ಟೆ ಬೇರೆ ಯಾವ ದೇಶದಲ್ಲೂ ಇಲ್ಲ.

ಸ್ವದೇಶ ಜಾಗರಣ ವೇದಿಕೆ 90ರ ಶತಕದಲ್ಲಿ ಆರಂಭವಾಯಿತು. ದುಡಿಯುವ ವರ್ಗ ಬದಲಾವಣೆ ಆಗಬೇಕು. ಅದಕ್ಕಾಗಿ ನಮ್ಮ ಸರ್ಕಾರ ಯೋಜನೆ ಮಾಡಿದೆ. ಬೀದಿ ಬದಿ ವ್ಯಾಪಾರಿಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧನ ನೀಡಿದೆ. ಕೇವಲ ಮೇಳಗಳಲ್ಲಿ ಮಾತ್ರ ಸ್ವದೇಶಿ ವಸ್ತು ತಗೆದುಕೊಳ್ಳಬೇಡಿ. ಹಳ್ಳಿ, ಶಹರಗಳಲ್ಲಿ ಕಸಬುದಾರರಿದ್ದಾರೆ, ಕಾಯಕ ಯೋಜನೆ ಮೂಲಕ ಸಹಾಯ ಮಾಡುತ್ತಿದ್ದೇವೆ. ನಮ್ಮ ಸ್ವದೇಶಿ ಬಳಕೆ ಸಂಕಲ್ಪ ಮೂಲಕ ನಮ್ಮ ದೇಶದ ಅಭಿವೃದ್ಧಿ ಆಗಲು ಸಾಧ್ಯ ಎಂದು ಹೇಳಿದರು.

ಸಂಸದರಾದ ಡಿ.ವಿ. ಸದಾನಂದಗೌಡ, ಜಗ್ಗೇಶ್, ಮಾಜಿ ಶಾಸಕ ಮುನಿರಾಜು, ಆರ್ಥಿಕ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಮತ್ತಿತರರಿದ್ದರು.

ಇದನ್ನೂ ಓದಿ | Swadeshi Jagaran Manch | ಜ.4ರಿಂದ ಬೆಂಸ್ಗಳೂರಿನ ಬಾಗಲಗುಂಟೆಯಲ್ಲಿ ʼಸ್ವದೇಶಿ ಮೇಳʼ

Exit mobile version