Site icon Vistara News

Terrorist arrested in Bangalore: ಉಗ್ರ ಬಂಧನ: ʼಬಾ ನಲ್ಲೆ ಮಧುಚಂದ್ರಕೆʼ ಸಿನಿಮಾ ನಾಯಕನಂಥ ಎಡವಟ್ಟಿನಿಂದ ಸಿಕ್ಕಿಬಿದ್ದ ಉಗ್ರ!

Terrorist Arif Bangalore

ಬೆಂಗಳೂರು: ಬೆಂಗಳೂರಿನಲ್ಲಿ ಶಂಕಿತ ಉಗ್ರ ಆರೀಫ್‌ ಬಂಧನಕ್ಕೆ ಕಾರಣವಾದುದು ಒಂದು ವಿಮಾನ ಟಿಕೆಟ್‌. ಹೌದು, ʼಬಾ ನಲ್ಲೆ ಮಧುಚಂದ್ರಕೆʼ ಸಿನಿಮಾದ (ಖಳ)ನಾಯಕನಂತೆ ಮಾಡಿದ ಎಡವಟ್ಟೇ ಈ ಉಗ್ರನನ್ನು ಈಗ ಪೊಲೀಸರಿಗೆ ಹಿಡಿದುಕೊಟ್ಟಿದೆ.

ಸಿರಿಯಾಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದ ಆರೀಫ್, ಅಲ್ಲಿಗೆ ವಿಮಾನದ ಒನ್‌ಸೈಡ್‌ ಟಿಕೆಟ್‌ ಬುಕ್‌ ಮಾಡಿದ್ದ. ರಿಟರ್ನ್‌ ಬುಕ್‌ ಮಾಡಿರಲಿಲ್ಲ. ಇದರಿಂದ ಐಎಸ್‌ಡಿ ಹಾಗೂ ಎನ್‌ಐಎ ಅಧಿಕಾರಿಗಳಿಗೆ ಬಲವಾದ ಅನುಮಾನ ಮೂಡಿದ್ದು, ಇನ್ನು ಮೈ ಮರೆತರೆ ಆರೀಫ್ ಕೈಗೆ ಸಿಗದೆ ಎಸ್ಕೇಪ್ ಆಗುತ್ತಾನೆ ಎಂದು ತಿಳಿದ ಪೊಲೀಸರು ನಿನ್ನೆ ಮುಂಜಾನೆಯೇ ಜಂಟಿ ಕಾರ್ಯಾಚರಣೆ ನಡೆಸಿ ಆರೀಫ್‌ನನ್ನು ಬಂಧಿಸಿದ್ದಾರೆ.

ಶಂಕಿತ ಉಗ್ರ ಆಲ್ ಖೈದಾ ಸೇರುವ ಪ್ಲಾನ್ ನಡೆಸಿದ ವಿವರವೂ ಬಯಲಾಗಿದೆ. ಹೆಂಡತಿ‌ ಮಕ್ಕಳನ್ನು ಬಿಟ್ಟು ಟೆರರಿಸ್ಟ್‌ಗಳ ಜೊತೆ ಸೇರಲು ಈತ ಎಲ್ಲಾ ತಯಾರಿ ನಡೆಸಿದ್ದ. ಮಾರ್ಚ್‌ 10ನೇ ತಾರೀಕಿನಂದು ಇರಾನ್‌ಗೆ ಟಿಕೆಟ್ ಬುಕ್ ಮಾಡಿದ್ದ. ಜೊತೆಗೆ ದೆಹಲಿಯಿಂದ ಒಬ್ಬರು, ಉತ್ತರಪ್ರದೇಶದಿಂದ ಇಬ್ಬರು, ಬಿಹಾರದಿಂದ ಒಬ್ಬರು ರೆಡಿಯಾಗಿದ್ದರು. ಆದರೆ ಆದ್ರೆ ಒನ್ ಸೈಡ್ ಟಿಕೇಟ್ ಆಗಿದ್ದ ಕಾರಣಕ್ಕೆ ಎಂಬೆಸಿ ಇವರ ವೀಸಾ ಕ್ಯಾನ್ಸಲ್ ಮಾಡಿತ್ತು. ಆದರೂ ಹೋಗಲು ಆರೀಫ್ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದ.

ತನ್ನ ಕುಟುಂಬವನ್ನು ಉತ್ತರಪ್ರದೇಶದ ಅಲಿಘಡ್‌ಗೆ ಮುಂದಿನ ವಾರ ಕಳುಹಿಸಲು ಎಲ್ಲಾ ರೀತಿ ತಯಾರಿ ನಡೆಸಿದ್ದ ಈತ ಮನೆಯಲ್ಲಿರುವ ಪೀಠೋಪಕರಣಗಳನ್ನು ಒಎಲ್ಎಕ್ಸ್‌ನಲ್ಲಿ ಮಾರಾಟಕ್ಕೆ ಪೋಸ್ಟ್ ಹಾಕಿದ್ದ. ಫ್ರಿಡ್ಜ್‌, ವಾಷಿಂಗ್ ಮಿಷನ್, ಸೋಫಾ ಸೇರಿ ಹಲವು ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದ. ಕುಟುಂಬಸ್ಥರಿಗೆ ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಬರುತ್ತೇನೆ, ನೀವು ಮೊದಲು ಹೋಗಿ ನಂತರ ನಾನು ಬರುತ್ತೇನೆ ಎಂದಿದ್ದ. ಇನ್ನು ಮೇಲೆ ವರ್ಕ್ ಫ್ರಂ ಹೋಂ, ಹಾಗಾಗಿ ಊರಿನಿಂದಲೆ ಮಾಡೋಣ ಎಂದಿದ್ದ. ಇದನ್ನು ಹೆಂಡತಿ ನಂಬಿದ್ದಳು.

ಇದನ್ನೂ ಓದಿ: Terrorist arrested in Bangalore : ಮನೆ ಖಾಲಿ ಮಾಡಿ ಉ.ಪ್ರದೇಶಕ್ಕೆ ಹಾರಲು ರೆಡಿಯಾಗಿದ್ದ ಉಗ್ರನಿಗೆ ಶಾಕ್‌!

ಹೆಂಡತಿ ಮಕ್ಕಳನ್ನು ಅತ್ತ ಕಳುಹಿಸಿ ತಾನು ಯಾರಿಗೂ ಹೇಳದೆ ಸಿರಿಯಾಗೆ ಹೋಗುವ ಪ್ಲಾನ್ ಮಾಡಿದ್ದ ಈತ ಮನೆ ಮಾಲೀಕರಿಗೂ ಈ ತಿಂಗಳು ಮನೆ ಖಾಲಿ ಮಾಡುವುದಾಗಿ ಹೇಳಿದ್ದ. ಆದರೆ ಎಂಬೆಸಿ ವೀಸಾ ಕ್ಯಾನ್ಸಲ್ ಮಾಡಿದ್ದರಿಂದ ತಲೆ ಕೆಡಿಸಿಕೊಂಡಿದ್ದ. ಈತ ಮನೆ ಖಾಲಿ ಮಾಡಲು ತಯಾರಾದಾಗಲೇ ದಾಳಿ ಮಾಡಲು ಎನ್‌ಐಎ ನಿರ್ಧಾರ ಮಾಡಿತ್ತು.

ಮೂರು ವರ್ಷಗಳಿಂದ ಆರೀಫ್ ಮೇಲೆ ಎನ್ಐಎ ಹಾಗೂ ಐಎಸ್‌ಡಿ ಕಣ್ಣಿಟ್ಟಿತ್ತು. ಈತ ಕೋವಿಡ್ ಸಂದರ್ಭದಲ್ಲಿ ಟೆರರಿಸಂ ಬಗ್ಗೆ ಪೋಸ್ಟ್ ಮಾಡುತ್ತಿದ್ದ. ಈತನ ಪೋಸ್ಟ್‌ಗಳ ಜೊತೆಗೆ ಈತನ ಮೇಲೂ ಎನ್‌ಐಎ ಕಣ್ಣಿಟ್ಟಿತ್ತು. ನಂತರ ಆತನ ಪೋಸ್ಟ್‌ಗಳು ಟ್ವಿಟರ್ ಖಾತೆಯಿಂದ ಡಿಲೀಟ್ ಆಗಿದ್ದವು. ಯಾವಾಗ ಡಿಲೀಟ್ ಆಯಿತೋ ಆಗಲೇ ಆತ ಅಲರ್ಟ್ ಆಗಿದ್ದ. ಇದಾದ ಬಳಿಕ ಸುಮಾರು ಒಂದು ವರ್ಷ ಏನೂ ಆಕ್ಟಿವಿಟಿ ಮಾಡಿರಲಿಲ್ಲ. ಕಳೆದ ಒಂದು ವರ್ಷದಿಂದ ಮತ್ತೆ ಆಲ್ ಖೈದಾ ಜೊತೆ ಸಂಪರ್ಕ ಬೆಳೆಸಿದ್ದ ಈತ ಮೂರು ತಿಂಗಳಿಂದ ಸಿರಿಯಾಗೆ ಹೋಗೋ ಪ್ಲಾನ್‌ನಲ್ಲಿದ್ದ.

ಇದನ್ನೂ ಓದಿ: Terrorist arrested in Bangalore : ಬೆಂಗಳೂರಲ್ಲಿ ಶಂಕಿತ ಉಗ್ರ ಸೆರೆ; ಅಲ್‌ ಖೈದಾ ಜತೆ ಸಂಪರ್ಕ ಹೊಂದಿದ್ದ ಟೆಕ್ಕಿ ಆರಿಫ್‌

Exit mobile version