Site icon Vistara News

ನಾಲ್ಕು ವರ್ಷ ಹಿಂದಿನ ಸಾವಿನ ಪ್ರಕರಣ: ಆದಿಕೇಶವುಲು ಪುತ್ರನಿಗೆ ಸಿಬಿಐ ಉರುಳು

Rakshit Shetty Richard Anthony Produce By Hombale

ಬೆಂಗಳೂರು: ನಾಲ್ಕು ವರ್ಷಗಳ ಹಿಂದಿನ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿರುವುದರಿಂದ ದಿವಂಗತ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್‌ಗೆ ಕಂಟಕ ಎದುರಾಗಿದೆ. ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಶ್ರೀನಿವಾಸ್ ಸೇರಿ ನಾಲ್ವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಏಕಸದಸ್ಯ ಪೀಠ, 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ. ಈ ಪ್ರಕರಣದಲ್ಲಿ ಮೂರು ಆಯಾಮಗಳಲ್ಲಿ ತನಿಖೆ ನಡೆಸುವಂತೆ ನ್ಯಾಯಪೀಠ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಿರುವ ಬಿ. ರಿಪೋರ್ಟ್‌ನ ಯಾವುದೇ ಅಂಶಗಳನ್ನು ಸಿಬಿಐ ಪರಿಗಣಿಸಬಾರದು. ಇದೀಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ತನಿಖೆ ಮುಗಿಯುವ ತನಕ ಸ್ಥಗಿತಗೊಳಿಸಬೇಕು ನ್ಯಾಯಪೀಠ ಆದೇಶಿಸಿದೆ. ಹೀಗಾಗಿ ಪ್ರಕರಣದಲ್ಲಿ ಆದಿಕೇಶವುಲು ಪುತ್ರ ಶ್ರೀನಿವಾಸ್, ಪುತ್ರಿ ಕಲ್ಪಜ ಹಾಗೂ ದಾಮೋದರ್ ಸೇರಿ ನಾಲ್ವರು ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ | Car Accident | ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಏಳು ಜನರಿಗೆ ಗಾಯ

ಘಟನೆಯ ಹಿನ್ನೆಲೆ
2019ರ ಮೇನಲ್ಲಿ ವೈಟ್‌ ಫೀಲ್ಡ್ ಬಳಿಯ ಶ್ರೀನಿವಾಸ್ ಒಡೆತನದ ಫ್ಲ್ಯಾಟ್‌ನಲ್ಲಿ ಆದಿಕೇಶವುಲು ಆಪ್ತನಾಗಿದ್ದ ರಘುನಾಥ್ ಮೃತಪಟ್ಟಿದ್ದರು. ರಘುನಾಥ್ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದರು. ರಘುನಾಥ್ ಅವರು ಮೃತಪಟ್ಟ ನಂತರ ಆದಿಕೇಶವುಲು ಪುತ್ರ ಡಿ.ಎ ಶ್ರೀನಿವಾಸ್ ಅವರು, ನಕಲಿ ಛಾಪಾ ಕಾಗದ ಬಳಸಿದ್ದರು. ಬಳಿಕ ರಘುನಾಥ್ ಹೆಸರಿನಲ್ಲಿ ನಕಲಿ ವಿಲ್ ತಯಾರಿಸಿ ಅವರ ಬಳಿ ಇರುವ ಆಸ್ತಿ ತಮಗೆ ಸೇರಬೇಕು ಎಂದು ಹೇಳಿದ್ದರು.

ಆದರೆ, ಶ್ರೀನಿವಾಸ್ ಅಕ್ರಮವಾಗಿ ರಘುನಾಥ್‌ನನ್ನು ಕೂಡಿಟ್ಟು ಹಿಂಸೆ ಕೊಟ್ಟು ಸಾಯಿಸಿದ್ದಾರೆಂದು ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿತ್ತು. ತನಿಖೆ ನಡೆಸಿದ್ದ ಎಸ್‌ಐಟಿ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿತ್ತು. ಆದರೆ ರಘುನಾಥ್‌ ಕುಟುಂಬಸ್ಥರು ಬಿ ರಿಪೋರ್ಟ್‌ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿ, ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಬೇನಾಮಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಘುನಾಥ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ | ಎಣ್ಣೆ ಕಿಕ್ಕಲ್ಲಿ ಟೀಚರ್‌ ಕಿರಿಕ್ಕು: ಕುಡಿದೇ ಪಾಠ ಮಾಡುವ ಶಿಕ್ಷಕಿ ಅಮಾನತು, ಟೇಬಲ್‌ ಒಳಗೇ ಸಿಕ್ತು ಮದ್ಯದ ಬಾಟಲ್!

Exit mobile version