ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹೀಗಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ದಕ್ಷಿಣ ವಲಯ -1ರ ಜೆ.ಪಿ. ನಗರದ ಮಾರೇನಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ “ಪ್ರಜಾಪ್ರಭುತ್ವದ ಹಬ್ಬ” ಆಚರಿಸಲಾಯಿತು.
ಜೆ.ಪಿ.ನಗರ ವಾರ್ಡ್ ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಮತಗಟ್ಟೆ ಕೇಂದ್ರದವರೆಗೆ ಜಾಥಾವನ್ನು ಹಮ್ಮಿಕೊಂಡು “ನಮ್ಮ ನಡೆ ಮತಗಟ್ಟೆಯ ಕಡೆ” ಎಂಬ ಚುನಾವಣಾ ಘೋಷವಾಕ್ಯಗಳನ್ನು ಮೊಳಗಿಸಿ ಜನರ ಚಿತ್ತವನ್ನು ಆಕರ್ಷಿಸಲಾಯಿತು. ನಂತರ 8 ಗಂಟೆಗೆ ‘ಪ್ರಜಾಪ್ರಭುತ್ವ ಹಬ್ಬದ ಧ್ವಜ’ ವನ್ನು ಹಾರಿಸಿ ,”ಮೈ ಭಾರತ್ ಹುಂ ” ಚುನಾವಣಾ ಗೀತೆಯನ್ನು ಹಾಡಲಾಯಿತು.
ಇದನ್ನೂ ಓದಿ | Karnataka Election 2023: ಬೆಂಗಳೂರಿನಲ್ಲಿ 3,773 ಮಂದಿ 80 ವರ್ಷ ಮೇಲ್ಪಟ್ಟ, ವಿಶೇಷ ಚೇತನರಿಂದ ಮತದಾನ
ಒಟ್ಟಾರೆ ಈ ಕಾರ್ಯಕ್ರಮದ ಮೂಲಕ ಮತದಾನವು ನಿರ್ವಹಿಸುವ ಮಹತ್ವವಾದ ಪಾತ್ರವನ್ನು ತಿಳಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಮತಗಟ್ಟೆ ಮಟ್ಟದ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿ , ಪೌರಕಾರ್ಮಿಕರು ಮತ್ತು ಮಾರೇನಹಳ್ಳಿಯ ಮತದಾರರು ಭಾಗವಹಿಸಿದ್ದರು.