Site icon Vistara News

ಪ್ರಿಯತಮೆಗೆ ಮದುವೆಯಾಗಿದ್ದರೂ ನಾ ನಿನ್ನ ಬಿಡಲಾರೆ ಎಂದ: ಕಡೆಗೆ ಕೊಲೆಯಾಗಿ ಹೋದ

murder

ಬೆಂಗಳೂರು: ಪ್ರೀತಿಸಿದ ಹುಡುಗಿಗೆ ಬೇರೆ ಹುಡುಗನ ಜತೆಗೆ ಮದುವೆಯಾಗಿದ್ದರೂ, ಅವಳೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ತನ್ನ ಪ್ರೀತಿಗೆ ಪ್ರಿಯತಮೆಯ ಪತಿಯೇ ಅಡ್ಡಿ ಎನಿಸಿದಾಗ ಆತನನ್ನು ಕೊಲೆ ಮಾಡಲು ಹೋಗಿ ತಾನೇ ಕೊಲೆಯಾದ ಘಟನೆ ಶಿವಾಜಿನಗರದಲ್ಲಿ ನಡೆದಿದೆ.

ಜೀಷಾನ್​ ಹಾಗೂ ಸಿಮ್ರಾನ್​ ಎಂಬುವವರಿಗೆ ಇತ್ತೀಚೆಗಷ್ಟೆ ಮದುವೆಯಾಗಿತ್ತು. ಸಿಮ್ರಾನ್​ಗೆ ಈ ಮದುವೆ ಇಷ್ಟವಿಲ್ಲದೇ ಮನೆಯವರ ಬಲವಂತಕ್ಕೆ ಒಪ್ಪಿಗೆ ನೀಡಿದ್ದಳು. ಇಷ್ಟ-ಕಷ್ಟಗಳ ನಡುವೆ ಹೇಗೋ ಪತಿ ಜೀಷಾನ್‌ ಜತೆಗೆ ಸಂಸಾರ ಮಾಡಿಕೊಂಡಿದ್ದಳು.

ಈ ಮಧ್ಯೆ ಪ್ರಿಯಕರ ಜವಾದ್‌ ಗಂಟು ಬಿದ್ದು ಮತ್ತೆ ಹಳೇ ಪ್ರೀತಿ ಚಿಗುರೊಡೆದಿತ್ತು. ಸಿಮ್ರಾನ್‌ ಮದುವೆಯ ನಂತರ ದೂರವಿದ್ದ ಜವಾದ್‌ ಮತ್ತೆ ಪ್ರೀತಿ-ಪ್ರೇಮ ಎಂದು ಆಕೆಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತ ಸಿಮ್ರಾನ್‌ ಪತಿ ಜೀಷಾನ್‌ ಇಲ್ಲದೇ ಇರುವಾಗ ಮನೆಗೆ ಜವಾದ್‌ ಬಂದು ಹೋಗುವುದು ನಡೆದಿತ್ತು.

ಇದನ್ನೂ ಓದಿ | ದೈಹಿಕ ಸಂಬಂಧ, ಬ್ಲ್ಯಾಕ್‌ಮೇಲ್ ಮಾಡಿದ ಶಿಕ್ಷಕಿಯ ಕೊಲೆ ಮಾಡಿದ ವಿದ್ಯಾರ್ಥಿ

ಆದರೆ ಇದು ಹೆಚ್ಚು ಸಮಯ ಗುಟ್ಟಾಗಿ ಉಳಿದಿರಲಿಲ್ಲ ಈ ವಿಚಾರ ಜಿಷಾನ್‌ಗೆ ತಿಳಿದು ಜವಾದ್‌ ನಡುವೆ ಗಲಾಟೆ ನಡೆದು ಸಾಕಷ್ಟು ಬಾರಿ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಕುಟುಂಬದ ವಿಚಾರವೆಂದು ಪೊಲೀಸರು ಇಬ್ಬರನ್ನೂ ಕರೆದು ಬುದ್ದಿ ಹೇಳಿ ರಾಜಿ ಮಾಡಿಸಿ ಕಳಿಸಿದ್ದರು. ಆದರೆ ಪ್ರಿಯತಮೆ ಸಿಮ್ರಾನ್‌ಳನ್ನು ಬಿಟ್ಟು ಇರಲಾಗದ ಜವಾದ್‌, ಜೀಷಾನ್‌ನನ್ನು ಕೊಲೆ ಮಾಡಲು ಪ್ಲಾನ್‌ ಮಾಡಿದ.

ಅದರಂತೆ ಶನಿವಾರ ಬೆಳಗ್ಗೆ 9.30ಕ್ಕೆ ಹರಿತವಾದ ಕತ್ತರಿಯನ್ನು ಕೈಯಲ್ಲಿ ಹಿಡಿದು ಶಿವಾಜಿನಗರದಲ್ಲಿರುವ ಸಿಮ್ರಾನ್‌ ಮನೆಗೆ ನುಗ್ಗಿದ್ದಾನೆ. ಜವಾದ್‌ನನ್ನು ತಡೆಯಲು ಜೀಷಾನ್‌ ಪ್ರಯತ್ನಪಟ್ಟಿದ್ದಾನೆ. ಈ ಗಲಾಟೆ ನಡುವೆ ಕತ್ತರಿಯನ್ನು ಜೀಷಾನ್‌ ಕಿತ್ತುಕೊಂಡು ನೇರವಾಗಿ ಜವಾದ್‌ ಕುತ್ತಿಗೆಗೆ ಇರಿದುಬಿಟ್ಟಿದ್ದಾನೆ.

ಕುತ್ತಿಗೆ ಇರಿದ ಕೂಡಲೇ ಆ ನೋವಿನಿಂದ ಹೊರಗೆ ಓಡಿ ಬಂದ ಜವಾದ್‌ ಹತ್ತಿರದ ಹೆಚ್‌ಬಿಎಸ್​ ಆಸ್ಪತ್ರೆಗೆ ಹೋಗಿದ್ದಾನೆ. ಆದರೆ ಜೋರಾಗಿ ಇರಿದಿದ್ದ ಪರಿಣಾಮ ಆಸ್ಪತ್ರೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಕೂಡಲೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಜವಾದ್​ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿ ಜಿಷಾನ್​ನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದು ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ | ಶಹಬಾದ್‌ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್‌ ಕಂಬನೂರ್‌ ಬರ್ಬರ ಹತ್ಯೆ

Exit mobile version