Site icon Vistara News

ಲವ್‌ ಮ್ಯಾರೇಜ್:‌ ವರನ ಮನೆಗೆ ನುಗ್ಗಿ ವಧುವಿನ ಕಿಡ್ನ್ಯಾಪ್

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸೆಂದು ಹೇಳಿಕೊಂಡ 20 ಜನರ ಗ್ಯಾಂಗ್‌, ವರನ ಅಕ್ಕನ ಮನೆಯಲ್ಲಿದ್ದ ನವವಧುವರರ ಮೇಲೆ ದಾಳಿ ಮಾಡಿ ವಧುವನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರ ಲೇಔಟ್ ನಲ್ಲಿ ಈ ಕೃತ್ಯ ನಡೆಸಲಾಗಿದೆ.

ಯುವತಿಯ ತಂದೆ ದೇವರಾಜು, ಮಹೇಶ್ ಮತ್ತಿತರರು ವರನ ಮನೆಗೆ ನುಗ್ಗಿ, ಮನೆಯಲ್ಲಿರುವವರ ಮೇಲೆ ಹಲ್ಲೆ ನಡೆಸಿದೆ. ಬಳಿಕ ವಧು ಜಲಜಾಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಮೇ 25ರಂದು ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಮೇ 30ರಂದು ನೆಲಮಂಗಲದ  ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆಯ ನೋಂದಣಿ ಮಾಡಿಸಿದ್ದರು.

ಇದನ್ನೂ ಓದಿ | ಜಮೀನು ಮಾರಾಟ ವಿಚಾರಕ್ಕೆ ಉದ್ಯಮಿಯ ಕಿಡ್ನಾಪ್‌

ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳಾದ ಗಂಗಾಧರ್ ಹಾಗೂ ಜಲಜಾ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ವರ ಹಾಗೂ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Sorry (Karma Returns): ಬರಲಿದೆ ರಾಗಿಣಿ ದ್ವಿವೇದಿಯ ಹೊಸ ಚಿತ್ರ…ಕರ್ಮ!

Exit mobile version