Site icon Vistara News

ಮಳೆಯಿಂದ ಬೆಂಗಳೂರಿನ 3,453 ಮನೆಗಳಿಗೆ ಹಾನಿ: 60% ಪರಿಹಾರ ಬಾಕಿ

ಶೇ.೬೦ರಷ್ಟು

ಬೆಂಗಳೂರು: ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ 3,453 ಮನೆಗಳಿಗೆ ಹಾನಿಯಾಗಿದೆ. ಈಗಾಗಲೆ 40% ಪರಿಹಾರ ವಿತರಣೆ ಮಾಡಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಎಸ್‌. ರಂಗಪ್ಪ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಪ್ಪ, ಮಳೆಯಿಂದಾಗಿ ಮನೆಗಳಿಗೆ ನೀರು ಹರಿದ ಪ್ರಕರಣದಲ್ಲಿ ಬಿಬಿಎಂಪಿ ಈಗಾಗಲೇ ಸರ್ವೆ ಮಾಡಿದೆ. ನಿಯಮದ ಪ್ರಕಾರ ನೆಲಮಹಡಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಮೊದಲನೆ ಮಹಡಿಯಲ್ಲಿರುವವರಿಗೆ ಹೆಚ್ಚು ಅನಾಹುತವಾಗಿಲ್ಲ. ನೆಲಮಹಡಿಯಲ್ಲಿ ಇದ್ದಮನೆಗಳಲ್ಲಿನ ವಸ್ತುಗಳು ಹಾನಿಗೊಳಗಾಗಿವೆ.

ಇದನ್ನೂ ಓದಿ | 24 ಗಂಟೆಯಲ್ಲಿ ಸರಾಸರಿ 27 ಮಿ.ಮೀ. ಮಳೆ: ರಾಜ್ಯಾದ್ಯಂತ ಅಪಾರ ಹಾನಿ

ನಗರದ 8 ವಲಯಗಳಲ್ಲಿ 3,453 ಮನೆಗಳಿಗೆ ಹಾನಿಯಾಗಿದೆ. ಒಟ್ಟು ಹಾನಿಯಾಗಿರುವ ಮನೆಗಳ ಪೈಕಿ 40% ಮನೆಗಳಿಗೆ ಪರಿಹಾರ ವಿತರಿಸಲಾಗಿದೆ. ಶೀಘ್ರದಲ್ಲೆ ಉಳಿದ 60% ಪರಿಹಾರವನ್ನೂ ವಿತರಣೆ ಮಾಡಲಾಗುತ್ತದೆ ಎಂದರು. ಭವಿಷ್ಯದಲ್ಲಿ ಮಳೆ ಬಂದಾಗ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದರು.

ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತದೆ. ಈ ಸಂಬಂಧ 696 ಪ್ರಕರಣಗಳು ಈಗಾಗಲೇ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಆದಷ್ಟು ಬೇಗ ಪ್ರಕರಣ ಇತ್ಯರ್ಥ ಬಗೆಹರಿಸಿ ತೆರವು ಮಾಡಲಾಗುವುದು ಎಂದು ಹೇಳಿದರು.

ಬ್ರಿಗೇಡ್ ರಸ್ತೆಯ ಶಾಪಿಂಗ್‌ ಮಾಲ್‌ನಿಂದ ಯುವತಿ ಬಿದ್ದು ಸಾವನ್ನಪ್ಪಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರಂಗಪ್ಪ, ನಗರದಲ್ಲಿರುವ ಎಲ್ಲ ಮಾಲ್‌ಗಳ ಸುರಕ್ಷತೆ ಕುರಿತಂತೆ ಬಿಬಿಎಂಪಿ ನಿಗಾ ವಹಿಸುತ್ತದೆ. ಒಂದು ವೇಳೆ ಮಾಲ್‌ನವರು ನಿಯಮ ಪಾಲನೆ ಮಾಡದೇ ಇದ್ದರೆ ಅವರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.

ಇದ್ದನೂ ಓದಿ: ಶಿವಮೊಗ್ಗ,ಬೆಂಗಳೂರು,ಮೈಸೂರನ್ನು ತೊಯ್ದ ಭಾರೀ ಮಳೆ

Exit mobile version