ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಕುಖ್ಯಾತ ಮನೆಗಳ್ಳರನ್ನು (Theft Case) ಬಂಧಿಸಿದ್ದಾರೆ. ಮಿರ್ಜಾ ಸೈಯದ್ ಬೇಗ್ ಅಲಿಯಾಸ್ ಎಂಎಸ್ ಬೇಗ್ ಹಾಗೂ ಮಿರ್ಜಾ ನೂರುದ್ದಿನ್ ಬೇಗ್ ಬಂಧಿತರು. ಕಳ್ಳತನವನ್ನೇ ಕೆಲಸ ಮಾಡಿಕೊಂಡಿದ್ದ ಅಪ್ಪ-ಮಗನಿಂದ ಪೊಲೀಸರು ಸುಮಾರು 1 ಕೋಟಿ ಮೌಲ್ಯದ 1.25 ಕೆಜಿ ತೂಕದ ಡೈಮಂಡ್ ಹಾಗೂ ಚಿನ್ನಾಭರಣ, 2 ಕೆಜಿ ಬೆಳ್ಳಿ, 21 ಲಕ್ಷ ರೂ. ನಗದು ಸೇರಿದಂತೆ ಪೂಜೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇವರಿಬ್ಬರು ರಿಹ್ಯಾಬಿಲೇಷನ್ ಸೆಂಟರ್‌ನಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ ನಗದು ಕದ್ದಿದ್ದರು. ಮಿರ್ಜಾ ಸೈಯದ್ ಬೇಗ್ ಕ್ಲೀನಿಂಗ್ ಕೆಲಸಕ್ಕೆಂದು 15 ದಿನಕ್ಕೊಮ್ಮೆ ಓಲ್ಡ್ ಏಜ್ ಹೋಮ್‌ಗೆ ಬರುತ್ತಿದ್ದಾಗ, ಚಿನ್ನಾಭರಣಗಳು ಇರುವುದನ್ನು ಕಂಡಿದ್ದ. ದುರಾಸೆಗೆ ಬಿದ್ದ ಬೇಗ್ ಓಲ್ಡ್ ಏಜ್ ಹೋಮ್ ಮಾಲೀಕರ ಮನೆಗೆ ಕನ್ನ ಹಾಕಲು ಸ್ಕೆಚ್ ಹಾಕಿದ್ದ.
ಮಾತ್ರವಲ್ಲ ಕಳ್ಳತನಕ್ಕೆ ತಂದೆಯನ್ನೇ ಪಾರ್ಟ್ನರ್ ಆಗಿ ಮಾಡಿಕೊಂಡು, ಕಳ್ಳತನಕ್ಕೆ ಸ್ಕೆಚ್ ಹಾಕಿರುವುದಾಗಿ ಹೇಳಿದ್ದ. ಇದಕ್ಕೆ ಒಪ್ಪಿ ಕಳ್ಳತನಕ್ಕೆ ಸಾಥ್ ನೀಡಿದ ತಂದೆ ಮಿರ್ಜಾ ನೂರುದ್ದಿನ್ ಬೇಗ್, ಮನೆ ಮಾಲೀಕರು ಇಲ್ಲದ ಸಮಯದಲ್ಲಿ ಬಂದು ಇಡೀ ಮನೆಯನ್ನೇ ದೋಚಿದ್ದರು. ಸಿಕ್ಕಿ ಬೀಳಬಾರದೆಂದು ನಂತರ ಖಾರದಪುಡಿ ಹಾಕಿ ಸಾಕ್ಷಿ ನಾಶಕ್ಕೆ ಮುಂದಾಗಿದ್ದರು.
ಇನ್ನು ಮಿರ್ಜಾ ಸೈಯದ್ ಬೇಗ್ ತಂದೆಗೆ ಹೃದಯ ಸಂಬಂಧಿ ಖಾಯಿಲೆ ಜತೆಗೆ ಮೂರು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು. ಹೀಗಾಗಿ ಚಿನ್ನಾಭರಣವನ್ನೆಲ್ಲ ಕದ್ದು ಅದನ್ನು ಮಾರಾಟ ಮಾಡಿದರೆ, ಅದರಿಂದ ಬಂದ ಹಣದಲ್ಲಿ ಆರಾಮವಾಗಿ ಇರಬಹುದು ಎಂದು ಕಳ್ಳತನದ ದಾರಿ ತುಳಿದಿದ್ದರು. ಆದರೆ ಕರ್ಮ ರಿರ್ಟನ್ಸ್ ಎಂಬಂತೆ ಅಪ್ಪ-ಮಗ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಈ ಸಂಬಂಧ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನವಾಗಿದೆ. ಮತ್ತಷ್ಟು ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಇದನ್ನೂ ಓದಿ: Fire Accident : ಶಾರ್ಟ್ ಸಕ್ಯೂರ್ಟ್‌ನಿಂದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ; 4 ವರ್ಷದ ಮಗು ಉಸಿರುಗಟ್ಟಿ ಸಾವು
ಕಳ್ಳತನಕ್ಕೆ ದೇವರೇ ಪಾರ್ಟ್ನರ್; ಕದ್ದ ಚಿನ್ನದಲ್ಲಿ ಮಲೆ ಮಹದೇಶ್ವರನಿಗೂ ಪಾಲು
ಬೆಂಗಳೂರು: ಅಕ್ಕ-ಪಕ್ಕದವರು, ನೆರೆ ಮನೆಯವರು ಹತ್ತಿರದ ನೆಟ್ಟರು ಎನ್ನುವ ಮಾತಿದೆ. ಆದರೆ ಅದೇ ನೆರೆಯವರು ಕಳ್ಳತನಕ್ಕೆ ಇಳಿದು ಜೈಲುಪಾಲಾಗಿದ್ದಾರೆ. ಇನ್ನೂ ಕಳ್ಳತನಕ್ಕೆ (Theft Case) ದೇವರನ್ನೇ ಪಾರ್ಟ್ನರ್ ಮಾಡಿಕೊಂಡಿದ್ದ ಈ ಖದೀಮರು, ಪೊಲೀಸರಿಗೆ ಸಿಗಬಾರದೆಂದು ಕದ್ದ ಹಣ-ಚಿನ್ನಾಭರಣದಲ್ಲಿ ಮಲೆ ಮಹದೇಶ್ವರನಿಗೂ (Male Mahadeshwara Temple) ಪಾಲು ನೀಡುತ್ತಿದ್ದರು. ಕಿರಣ್, ಆನಂದ್, ನಾನಿ ಬಂಧಿತ ಆರೋಪಿಗಳು.
ನೆರೆ ಮನೆಗೆ ಬೀಗ ಹಾಕಿದ್ದು ಕಂಡರೆ ಸಾಕು, ಆ ದಿನವೇ ನಕಲಿ ಕೀಯೊಂದಿಗೆ ಹಾಜರಾಗುತ್ತಿದ್ದರು. ಹಗಲು ಹೊತ್ತು ಮನೆಯ ಸುತ್ತ-ಮುತ್ತ ಓಡಾಡಿ ಪ್ಲ್ಯಾನ್ ಮಾಡುತ್ತಿದ್ದ ಈ ಕಳ್ಳರು ಎಲ್ಲರೂ ನಿದ್ದೆಗೆ ಜಾರಿದಾಗ ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿಯುತ್ತಿದ್ದರು.
ಯಾರಿಗೂ ತಿಳಿಯದಂತೆ ನಕಲಿ ಕೀ ಬಳಸಿ ಮನೆಯೊಳಗೆ ನುಗ್ಗುತ್ತಿದ್ದ ಈ ಕಳ್ಳರು ಹಣ ಹಾಗೂ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗುತ್ತಿದ್ದರು. ಹೀಗೆ ಕಳೆದ ಮಾರ್ಚ್ 29 ರಂದು ಮನೆ ಕಳವು ಮಾಡಿದ್ದರು. ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿರುವ ಉಮಾ ಎಂಬುವವರು ಮನೆಯಲ್ಲಿ ಕಳವು ಮಾಡಿದ್ದರು. ಉಮಾ ಮನೆಯಲ್ಲಿ ಇಲ್ಲದೆ ಇದ್ದಾಗ, ನಕಲಿ ಕೀ ಬಳಸಿ 6 ಲಕ್ಷ ನಗದು ಹಾಗೂ 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದಿದ್ದರು.
ಮಲೆ ಮಹದೇಶ್ವರನಿಗೆ ತಪ್ಪು ಕಾಣಿಕೆ
ಚಿನ್ನಾಭರಣ ಕದ್ದು ಮಲೆ ಮಹದೇಶ್ವರನಿಗೆ ತಪ್ಪು ಕಾಣಿಕೆಯನ್ನು ನೀಡುತ್ತಿದ್ದರು. ನೆರೆಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ದೋಚಿದ ಈ ಮೂವರು ಕದ್ದ ಹಣದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಹುಂಡಿಗೆ ಹಣ ಹಾಕಿದ್ದರು. ಕಳವು ಪ್ರಕರಣ ಸಂಬಂಧ ಮೂವರು ಆರೋಪಿಗಳಾದ ಕಿರಣ್, ಆನಂದ್, ನಾನಿ ಎಂಬುವವರನ್ನು ಬಂಧಿಸಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಉಮಾ ಅವರ ನೆರೆ ಮನೆಯ ನಿವಾಸಿಗಳಾಗಿದ್ದರು ಎಂದು ತಿಳಿದು ಬಂದಿದೆ. ಸದ್ಯ ಕೆ.ಜಿ.ನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ