ಬೆಂಗಳೂರು: ಪಾರ್ಟ್ ಟೈಂ ಕ್ಯಾಬ್ ಡ್ರೈವರ್ ಆಗಿದ್ದುಕೊಂಡು ಫುಲ್ ಟೈಮ್ ಕಳ್ಳತನಕ್ಕೆ (Theft Case) ಇಳಿದಿದ್ದ ಕಳ್ಳನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈ ಮೂಲದ 34 ವರ್ಷದ ಸತೀಶ್ ಬಂಧಿತ ಆರೋಪಿಯಾಗಿದ್ದಾನೆ.
ಬೆಂಗಳೂರಿನ ಕಲ್ಯಾಣ ನಗರದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣವನ್ನು ದೋಚಿದ್ದ. ಜತೆಗೆ ಈ ಚಾಲಾಕಿ ಕಳ್ಳತನಕ್ಕೆ ಬಳಸಿದ್ದ ಬೈಕ್ ಅನ್ನು ಸಕೆಂಡ್ ಹ್ಯಾಂಡ್ ಶೂ ರೂಂನಲ್ಲಿ ಮಾರಾಟ ಮಾಡಿದ್ದ.
ಚೆನ್ನೈ ಮೂಲದ ಸತೀಶ್ ಬೆಂಗಳೂರಿನ ಕಾವಲಬೈರಸಂದ್ರದಲ್ಲಿ ಯುವತಿಯನ್ನು ಮದುವೆಯಾಗಿದ್ದ. ಆ್ಯಪ್ ಮೂಲಕ ಬುಕ್ಕಿಂಗ್ ಬಂದರೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕ್ಯಾಬ್ ಚಾಲಕನಾಗಿದ್ದಾಗಲೇ ರಸ್ತೆಯಲ್ಲಿದ್ದ ಮನೆಗಳನ್ನು ಗಮನಿಸುತ್ತಿದ್ದ. ನಂತರ ತನ್ನ ಬೈಕ್‌ನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ.
ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್ ಕಾರ್ ಡ್ರೈವಿಂಗ್‌ಗೆ ಬುಕ್ಕಿಂಗ್ ಬಂದಿತ್ತು. ಏಪ್ರಿಲ್ 16ರಂದು ಕೆಲಸ ಮುಗಿಸಿ ಬರುವಾಗ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಪ್ರಮೋದ್ ಭಟ್ ಅವರ ಮನೆಗೆ ಕನ್ನ ಹಾಕಿದ್ದ. ಬಾಣಸವಾಡಿ ಪೊಲೀಸರಿಗೆ ಮನೆ ಮಾಲೀಕ ಪ್ರಮೋದ್ ಭಟ್ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ, ಬ್ಲ್ಯಾಕ್ ಕಲರ್ ಪಲ್ಸರ್‌ನಲ್ಲಿ ಬಂದಿದ್ದ ವ್ಯಕ್ತಿಯಿಂದ ಕಳ್ಳವಾಗಿದೆ ಎಂಬುದು ತಿಳಿದು ಬಂದಿತ್ತು. ನಂಬರ್ ಪ್ಲೇಟ್ ಸರಿಯಾಗಿ ಕಾಣದ ಕಾರಣ ಪೊಲೀಸರು ಆರ್.ಟಿ.ಒ ಸಹಾಯ ಪಡೆದಿದ್ದರು.
ಆರ್‌ಟಿಓದಿಂದ ಬರೋಬ್ಬರಿ ಹನ್ನೂಂದು ಸಾವಿರ ನಂಬರ್ ಸಿಕ್ಕಿತ್ತು. ಅಷ್ಟೂ ನಂಬರ್‌ಗಳನ್ನ ಟ್ಯಾಲಿ ಮಾಡಿ ಬೈಕ್ ಟ್ರ್ಯಾಕ್ ಮಾಡಿದ್ದರು. ಈ ವೇಳೆ ಕಳ್ಳತನಕ್ಕೆ ಬಳಸಿದ್ದ ಬ್ಲ್ಯಾಕ್ ಪಲ್ಸರ್ ಬೈಕ್ ಟ್ರ್ಯಾಕ್ ಆಗಿತ್ತು. ಆದರೆ ಕಳ್ಳ ಸತೀಶ್ ಬೈಕ್ ಸಕೆಂಡ್ ಹ್ಯಾಂಡ್ ಶೂರೂಮ್‌ಗೆ ಮಾರಿಬಿಟ್ಟಿದ್ದ. ಸಕೆಂಡ್ ಹ್ಯಾಂಡ್ ಶೂರೂಂನಿಂದ ಮತ್ತೊಬ್ಬ ಖರೀದಿ ಮಾಡಿ ತನ್ನ ಹೆಸರಿಗೆ ರಿಜಿಸ್ಟರ್ ಮಾಡಿದ್ದ. ಕೊನೆಗೆ ಸತೀಶ್ ವಿವರ ಶೂರೂಮ್‌ನಲ್ಲಿ ಪಡೆದಾಗ ಆತ ತಮಿಳುನಾಡನಲ್ಲಿರುವುದು ಪತ್ತೆಯಾಗಿತ್ತು. ಸದ್ಯ ತಮಿಳುನಾಡಿಗೆ ಹೋಗಿ ಆರೋಪಿ ಬಂಧಿಸಿ ಬಾಣಸವಾಡಿ ಪೊಲೀಸರು ಕರೆತಂದಿದ್ದಾರೆ. ಆರೋಪಿಯಿಂದ 90 ಗ್ರಾಂ ಚಿನ್ನ ಹಾಗೂ ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:Theft Case : ಮನೆಗೆಲಸ ಮಾಡುತ್ತಾ ಚಿನ್ನ ಕದ್ದಳು ಕಳ್ಳಿ; ವಾಟ್ಸ್‌ಆ್ಯಪ್ ಡಿಪಿ ಹಾಕಿ ಸಿಕ್ಕಿಬಿದ್ದಳು ಮಳ್ಳಿ
ತಾಳಿ ಸರ ಎಗರಿಸಿದ ಕಳ್ಳ
ಮನೆ ಬಾಗಿಲು ರಾತ್ರಿ ಲಾಕ್ ಮಾಡೋದು ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಮಹಿಳೆಯೊಬ್ಬರು ಮನೆ ಬಾಗಿಲು ಲಾಕ್ ಮಾಡೋದು ಮರೆತು ಮಲಗುವಾಗ ತಾಳಿ ಸರ ಬಿಚ್ಚಿಟ್ಟಿದ್ದರು. ಸಮಯ ನೋಡಿ ಮನೆಗೆ ನುಗ್ಗಿದ ಕಳ್ಳ ತಾಳಿ ಸರ ಎಗರಿಸಿದ್ದಾನೆ. ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯ ಲಿಂಗರಾಜಪುರ ನಲ್ಲಿ ಘಟನೆ ನಡೆದಿದೆ. ಇಮ್ರಾನ್ (27) ಬಂಧಿತ ಆರೋಪಿ. ದೂರುದಾರರು ಬೆಳಗ್ಗೆ 8 ಗಂಟೆ ವೇಳೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿ 2 ಗಂಟೆಯೊಳಗೆ ಆರೋಪಿಯ ಬಂಧನವಾಗಿದೆ. ಆರೋಪಿಯನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು 50 ಗ್ರಾಂ ಆಭರಣ ವಶಕ್ಕೆ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ