Site icon Vistara News

Theft Case : ಡ್ರಾಪ್‌ ಪಡೆದು ರ‍್ಯಾಪಿಡೋ ಬೈಕ್​ ಚಾಲಕನಿಂದ ಹಣ ದೋಚಿದ ಕಿರಾತಕರು

Theft Case

ಬೆಂಗಳೂರು: ಇತ್ತೀಚೆಗೆ ಕಿಡಿಗೇಡಿಗಳು ಹೇಗಲ್ಲ ಸುಲಿಗೆ (Theft Case) ಮಾಡುತ್ತಾರೆ ಎಂದು ಅಂದಾಜು ಮಾಡುವುದು ಕಷ್ಟವಾಗಿದೆ. ರ‍್ಯಾಪಿಡೋ ಬೈಕ್‌ (Rapido Bike) ಬುಕ್‌ ಮಾಡಿ ಡ್ರಾಪ್‌ ಪಡೆದು ನಂತರ ಚಾಲಕನಿಂದ ಹಣ ಸುಲಿಗೆ ಮಾಡಿದ ಘಟನೆ ಬೆಂಗಳೂರಲ್ಲಿ (Bengaluru News) ನಡೆದಿದೆ. ರ‍್ಯಾಪಿಡೋ ಬೈಕ್‌ ಓಡಿಸುತ್ತಿದ್ದ ಹುಡುಗನಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಭಾತ್ ಮತ್ತು ಪುನೀತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಉತ್ತರ ಭಾರತದ ದೀನಬಂದು ನಾಯಕ್ ಎಂಬಾತ ಬೆಂಗಳೂರಲ್ಲಿ ರ‍್ಯಾಪಿಡೋ ಬೈಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆ ಆರೋಪಿ ಪ್ರಭಾತ್ ರ‍್ಯಾಪಿಡೋ ಬೈಕ್‌ ಬುಕ್ ಮಾಡಿ ದೀನಬಂದುನಿಂದ ಡ್ರಾಪ್ ತೆಗೆದುಕೊಂಡಿದ್ದ. ಮರುದಿನ ನೇರವಾಗಿ ದೀನಬಂದುಗೆ ಕರೆ ಮಾಡಿ ಸುಂಕದಕಟ್ಟೆಯಿಂದ ನೆಲಮಂಗಲಕ್ಕೆ ಡ್ರಾಪ್ ಕೊಡಲು ಕೇಳಿದ್ದ.

ಅದರಂತೆ ರಾತ್ರಿ 11 ಗಂಟೆ ಸುಮಾರಿಗೆ ದೀನಬಂಧು ನೆಲಮಂಗಲಕ್ಕೆ ಆರೋಪಿಯನ್ನು ಡ್ರಾಪ್ ಮಾಡಿದ್ದ. ಈ ವೇಳೆ ಪ್ರಭಾತ್‌ ನೆಲಮಂಗಲದಲ್ಲಿ ತನ್ನ ಸ್ನೇಹಿತನನ್ನು ಕರೆಯಿಸಿಕೊಂಡಿದ್ದ. ಬಳಿಕ ಪ್ರಭಾತ್‌ ಹಾಗೂ ಪುನನೀತ್‌ ಅಸಲಿ ಆಟ ಶುರು ಮಾಡಿದ್ದರು. ದೀನಬಂದು ಬೈಕ್ ಕಸಿದು, ಆಟೋದಲ್ಲಿ ಆತನನ್ನು ತುಮಕೂರು ಕಡೆ ಕರೆದುಕೊಂಡು ಹೋಗಿದ್ದರು. ದಾರಿಯುದ್ದಕ್ಕೂ ಆರೋಪಿಗಳು ಹಣ ಕೊಡುವಂತೆ ದೀನಬಂದು ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಫೋನ್ ಪೇ ಮತ್ತು ಕ್ಯಾಶ್ ರೂಪದಲ್ಲಿ 85,000 ರೂ. ಹಣ ಸುಲಿಗೆ ಮಾಡಿದ್ದರು.

ಇದನ್ನೂ ಓದಿ: Road Accident : ಕೆಕೆಆರ್‌ಟಿಸಿ ಬಸ್‌ ಹತ್ತುವಾಗ ಜಾರಿ ಬಿದ್ದ ವೃದ್ಧನ ಕಾಲು ಕಟ್‌

ಕೊನೆಗೆ ಆತನನ್ನು ನೆಲಮಂಗಲದಲ್ಲಿ ಬಿಟ್ಟು ರ‍್ಯಾಪಿಡೋ ಬೈಕ್‌ನೊಂದಿಗೆ ಎಸ್ಕೇಪ್ ಆಗಿದ್ದರು. ಅಲ್ಲಿಂದ ಬಂದ ದೀನಬಂದು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಡೆದ ಎಲ್ಲ ಘಟನೆಯ ಕುರಿತು ವಿವರಿಸಿ ದೂರು ದಾಖಲಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ನೆಲಮಂಗಲ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹೋಂಡಾ ಆ್ಯಕ್ಟಿವಾ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋವನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version