ಬೆಂಗಳೂರು: ಈಗೀನ ಕಾಲದಲ್ಲಿ ಯಾರನ್ನಾ ನಂಬಬೇಕು ಬಿಡಬೇಕು ಎನ್ನುವುದೇ ತಿಳಿಯದಂತಾಗಿದೆ. ಚಿನ್ನದ ಆಸೆಗೆ ಮಹಿಳೆಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ (Theft Case) ಮಾಡಿದ್ದಾಳೆ. ಕದ್ದಿದ್ದು ನಾನಲ್ಲ ಎಂದವಳು, ಕದ್ದ ಚಿನ್ನವನ್ನು ವಾಟ್ಸ್‌ಆ್ಯಪ್ ಡಿಪಿ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಎಚ್‌ಎಎಲ್ ಪೊಲೀಸರು ಹೊಸಪೇಟೆ ಮೂಲದ ರೇಣುಕಾ (38) ಎಂಬಾಕೆಯನ್ನು ಬಂಧಿಸಿದ್ದಾರೆ.
ಈ ರೇಣುಕಾ ಅಪಾರ್ಟ್‌ಮೆಂಟ್‌ಗಳ ಬಳಿ ತೆರಳಿ ಮನೆಕೆಲಸ ಇದ್ಯಾ ಎಂದು ಕೇಳುತ್ತಿದ್ದಳು. ನನಗೆ ಸೌತ್ ಹಾಗೂ ನಾರ್ಥ್ ಎಲ್ಲಾ ಅಡಿಗೆಯೂ ಬರುತ್ತೆ ಎನ್ನುತ್ತಿದ್ದಳು. ಇತ್ತ ಸೆಕ್ಯೂರಿಟಿಗಳು ಅವಶ್ಯಕತೆ ಇದ್ದ ಅಪಾರ್ಟ್‌ಮಾಲೀಕರ ಪರಿಚಯ ಮಾಡುತ್ತಿದ್ದರು. ಇದೇ ರೀತಿ ಮಾರತ್‌ಹಳ್ಳಿ ಪೂರ್ವ ಪೌಂಟೇನ್ ಅಪಾರ್ಟ್‌ಮೆಂಟ್‌ನ ಎರಡು ಪ್ಲಾಟ್‌ಗಳಲ್ಲಿ ರೇಣುಕಾ ಕೆಲಸ ಗಿಟ್ಟಿಸಿದ್ದಳು.
ದಿನ ಕಳೆದಂತೆ ಎರಡೂ ಮನೆಗಳಲ್ಲಿ ಕೈಚಳಕ ತೋರಿ ಸುಮಾರು 100 ಗ್ರಾಂ ಚಿನ್ನಾಭರಣ ಕದ್ದಿದ್ದಳು. ಮನೆ ಮಾಲಕಿಯ ತಾಳಿಯನ್ನೂ ಕದ್ದಿದ್ದಳು. ಪೊಲೀಸರು ಕರೆಸಿ ವಿಚಾರಣೆ ಮಾಡಿದಾಗ ತನಗೇನು ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಬಳಿಕ ಪೊಲೀಸರ ವಿಚಾರಣೆ ಮಾಡಿ ಬಿಟ್ಟು ಕಳುಹಿಸಿದ್ದರು.
ಪೊಲೀಸರು ಏನು ಮಾಡುವುದಿಲ್ಲ, ಯಾವುದು ಗೊತ್ತಾಗಲ್ಲ ಅಂತ ಕದ್ದ ನೆಕ್ಲೆಸ್‌ವೊಂದನ್ನು ಧರಿಸಿ ಫೋಟೊ ತೆಗೆದುಕೊಂಡಿದ್ದಳು. ಮಾತ್ರವಲ್ಲ ಆ ಫೋಟೊವನ್ನು ವಾಟ್ಸ್‌ಆ್ಯಪ್ ಡಿಪಿ ಹಾಕಿದ್ದಳು. ಡಿಪಿ ನೋಡಿ ರೇಣುಕಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಒಡವೆಗಳ ಫೋಟೊ ತೆಗೆದುಕೊಂಡಿದ್ದು ಪತ್ತೆಯಾಗಿದೆ. ಸದ್ಯ ಬಂಧಿತ ರೇಣುಕಾಳಿಂದ 80 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ; ರೈಲುಗಳ ಪುನರ್ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ
ಪಾರ್ಟ್ ಟೈಂ ಕ್ಯಾಬ್ ಡೈವರ್; ಫುಲ್ ಟೈಂ ಕಳ್ಳತನ
ಬೆಂಗಳೂರು: ಪಾರ್ಟ್ ಟೈಂ ಕ್ಯಾಬ್ ಡ್ರೈವರ್ ಆಗಿದ್ದುಕೊಂಡು ಫುಲ್ ಟೈಮ್ ಕಳ್ಳನಕ್ಕೆ ಇಳಿದಿದ್ದ ಕಳ್ಳನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈ ಮೂಲದ 34 ವರ್ಷದ ಸತೀಶ್ ಬಂಧಿತ ಆರೋಪಿಯಾಗಿದ್ದಾನೆ.
ಬೆಂಗಳೂರಿನ ಕಲ್ಯಾಣ ನಗರದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣವನ್ನು ದೋಚಿದ್ದ. ಜತೆಗೆ ಈ ಚಾಲಾಕಿ ಕಳ್ಳತನಕ್ಕೆ ಬಳಸಿದ್ದ ಬೈಕ್ ಅನ್ನು ಸಕೆಂಡ್ ಹ್ಯಾಂಡ್ ಶೂ ರೂಂನಲ್ಲಿ ಮಾರಾಟ ಮಾಡಿದ್ದ.
ಚೆನ್ನೈ ಮೂಲದ ಸತೀಶ್ ಬೆಂಗಳೂರಿನ ಕಾವಲಬೈರಸಂದ್ರದಲ್ಲಿ ಯುವತಿಯನ್ನು ಮದುವೆಯಾಗಿದ್ದ. ಆ್ಯಪ್ ಮೂಲಕ ಬುಕ್ಕಿಂಗ್ ಬಂದರೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕ್ಯಾಬ್ ಚಾಲಕನಾಗಿದ್ದಾಗಲೇ ರಸ್ತೆಯಲ್ಲಿದ್ದ ಮನೆಗಳನ್ನು ಗಮನಿಸುತ್ತಿದ್ದ. ನಂತರ ತನ್ನ ಬೈಕ್‌ನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ.
ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್ ಕಾರ್ ಡ್ರೈವಿಂಗ್‌ಗೆ ಬುಕ್ಕಿಂಗ್ ಬಂದಿತ್ತು. ಏಪ್ರಿಲ್ 16ರಂದು ಕೆಲಸ ಮುಗಿಸಿ ಬರುವಾಗ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಪ್ರಮೋದ್ ಭಟ್ ಅವರ ಮನೆಗೆ ಕನ್ನ ಹಾಕಿದ್ದ. ಬಾಣಸವಾಡಿ ಪೊಲೀಸರಿಗೆ ಮನೆ ಮಾಲೀಕ ಪ್ರಮೋದ್ ಭಟ್ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ, ಬ್ಲ್ಯಾಕ್ ಕಲರ್ ಪಲ್ಸರ್‌ನಲ್ಲಿ ಬಂದಿದ್ದ ವ್ಯಕ್ತಿಯಿಂದ ಕಳ್ಳವಾಗಿದೆ ಎಂಬುದು ತಿಳಿದು ಬಂದಿತ್ತು. ನಂಬರ್ ಪ್ಲೇಟ್ ಸರಿಯಾಗಿ ಕಾಣದ ಕಾರಣ ಪೊಲೀಸರು ಆರ್.ಟಿ.ಒ ಸಹಾಯ ಪಡೆದಿದ್ದರು.
ಆರ್‌ಟಿಓದಿಂದ ಬರೋಬ್ಬರಿ ಹನ್ನೂಂದು ಸಾವಿರ ನಂಬರ್ ಸಿಕ್ಕಿತ್ತು. ಅಷ್ಟೂ ನಂಬರ್‌ಗಳನ್ನ ಟ್ಯಾಲಿ ಮಾಡಿ ಬೈಕ್ ಟ್ರ್ಯಾಕ್ ಮಾಡಿದ್ದರು. ಈ ವೇಳೆ ಕಳ್ಳತನಕ್ಕೆ ಬಳಸಿದ್ದ ಬ್ಲ್ಯಾಕ್ ಪಲ್ಸರ್ ಬೈಕ್ ಟ್ರ್ಯಾಕ್ ಆಗಿತ್ತು. ಆದರೆ ಕಳ್ಳ ಸತೀಶ್ ಬೈಕ್ ಸಕೆಂಡ್ ಹ್ಯಾಂಡ್ ಶೂರೂಮ್‌ಗೆ ಮಾರಿಬಿಟ್ಟಿದ್ದ. ಸಕೆಂಡ್ ಹ್ಯಾಂಡ್ ಶೂರೂಂನಿಂದ ಮತ್ತೊಬ್ಬ ಖರೀದಿ ಮಾಡಿ ತನ್ನ ಹೆಸರಿಗೆ ರಿಜಿಸ್ಟರ್ ಮಾಡಿದ್ದ. ಕೊನೆಗೆ ಸತೀಶ್ ವಿವರ ಶೂರೂಮ್‌ನಲ್ಲಿ ಪಡೆದಾಗ ಆತ ತಮಿಳುನಾಡನಲ್ಲಿರುವುದು ಪತ್ತೆಯಾಗಿತ್ತು. ಸದ್ಯ ತಮಿಳುನಾಡಿಗೆ ಹೋಗಿ ಆರೋಪಿ ಬಂಧಿಸಿ ಬಾಣಸವಾಡಿ ಪೊಲೀಸರು ಕರೆತಂದಿದ್ದಾರೆ. ಆರೋಪಿಯಿಂದ 90 ಗ್ರಾಂ ಚಿನ್ನ ಹಾಗೂ ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ