ಬೆಂಗಳೂರು: ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣವನ್ನು ಕ್ಷಣಾರ್ಧದಲ್ಲೇ ಎಗರಿಸುತ್ತಿದ್ದ ಆರೋಪಿಯನ್ನು (Theft Case) ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಮಂಡಲ್ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯ ಕಳ್ಳತನದ ಸ್ಟೋರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಅಸ್ಸಾಂನಿಂದ ಬರಿಗೈಲಿ ಬಂದವನು ಕೆ.ಜಿ ಗಟ್ಟಲೆ ಚಿನ್ನಾಭರಣ ದೋಚಿದ್ದಾನೆ. ಪ್ರದೀಪ್ ಮಂಡಲ್ ಅಸ್ಸಾಂನಿಂದ ಆಗಾಗ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ. ಹೀಗೆ ಬಂದಾಗ ಕಳ್ಳತನಕ್ಕೆ ಟ್ರೈ ಮಾಡಿದ್ದ. ಆದರೆ ಇತ್ತೀಚಿಗೆ ಕಳ್ಳತನ ಮಾಡಲೆಬೇಕೆಂದು ನಿರ್ಧರಿಸಿದ್ದ. ಹೀಗಾಗಿ ಮೆಜೆಸ್ಟಿಕ್‌ನ ಲಾಡ್ಜ್‌ವೊಂದರಲ್ಲಿ ರೂಂ ಬುಕ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದ.
ಹಗಲಿನಲ್ಲಿ ಮಾರ್ವಾಡಿಗಳ ಮನೆಗಳ ಸುತ್ತ ರೌಂಡ್ಸ್ ಹಾಕುತ್ತಿದ್ದ. ನಂತರ ರಾತ್ರಿ ವೇಳೆ ಎಂಟ್ರಿ ಕೊಡುವ ಈತ ಕಿಟಕಿಯಿಂದ ಮನೆಯೊಳಗೆ ನುಗ್ಗಿ ಬರೋಬ್ಬರಿ 2.1 ಕೆ.ಜಿ ಚಿನ್ನಾಭರಣವನ್ನು ಕದ್ದಿದ್ದ. ಸಿಎಂ ಸಿದ್ದರಾಮಯ್ಯ ಮನೆಯ ಪಕ್ಕದಲ್ಲೇ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಮಾರ್ವಾಡಿ ಮನೆಯಲ್ಲಿ ಕಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಖತರ್ನಾಕ್ ಕಳ್ಳ ಪ್ರದೀಪ್ ಮಂಡಲ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Road Accident : ಬೈಕ್ ಡಿಕ್ಕಿಯಾಗಿ ಹಿರಿಯ ವಕೀಲ ಸಾವು; ಸವಾರ ಗಂಭೀರ
ಕದ್ದ ಚಿನ್ನ ಮಾರಿ ಕಾರು ಖರೀದಿಸಿದ್ದ ಕಳ್ಳ
ಈ ಪ್ರದೀಪ್ ಮಂಡಲ್ ಚಿನ್ನಾಭರಣ ಕದ್ದು ಅದನ್ನು ಮಾರಿ ನಂತರ ಆ ಹಣದಲ್ಲೇ ಅಸ್ಸಾಂಗೆ ಹೋಗಿ ಕಾರವೊಂದನ್ನು ಖರೀದಿಸಿದ್ದ. ಇನ್ನೂ ಶೇಷಾದ್ರಿಪುರಂನಲ್ಲಿ ಕಳ್ಳತನ ಮಾಡುವುದಕ್ಕೂ ಮೊದಲು ಸದಾಶಿವನಗರದಲ್ಲಿ ಸುತ್ತಾಡಿದ್ದಾನೆ. ಸದಾಶಿವನಗರ ಮನೆಯಲ್ಲಿ ಕಳ್ಳತನಕ್ಕೆ ಹೋದಾಗ ಏನು ಸಿಕ್ಕಿರಲಿಲ್ಲ. ಹೀಗಾಗಿ ಶೇಷಾದ್ರಿಪುರಂನ ಮನೆಯೊಂದನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದ.
ಈತನನ್ನು ಹಿಡಿಯಲು ಪೊಲೀಸರು 250ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಲಾಡ್ಜ್‌ವೊಂದರ ಲೆಡ್ಜರ್ ಬುಕ್‌ನಲ್ಲೂ ಯಾವ ಮಾಹಿತಿಯನ್ನು ನೀಡಿರಲಿಲ್ಲ. ಕೇವಲ ಒಂದು ನಂಬರ್ ಮೂಲಕ ಸವಾಲಾಗಿದ್ದ ಈ ಕೇಸ್ ಅನ್ನು ಪೊಲೀಸರು ಭೇದಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಶೇಷಾದ್ರಿಪುರಂ ಪೊಲೀಸರು ಹೆಚ್ಚಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ