ಬೆಂಗಳೂರು: ಒಬ್ಬಳು ನರ್ಸ್ ಕೆಲಸ, ಮತ್ತೊಬ್ಬಳು ಮನೆ ಕೆಲಸ ಆದರೆ ಇವರಿಬ್ಬರು ಸೇರಿ ಮಾಡಿದ್ದು ಮಾತ್ರ ಮನೆಹಾಳು ಮಾಡುವ ಕೆಲಸ. ಉಂಡ ಮನೆಗೆ ಕನ್ನ ಹಾಕಿ ಕಂಬಿ ಏಣಿಸುತ್ತಿದ್ದಾರೆ. ಮಾರ್ಚ್ 7ರಂದು ಜೆ.ಪಿ.ನಗರದ ಹಿರಿಯ ಆಲ್ ಇಂಡಿಯಾ ರೇಡಿಯೋ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ ಎಂಬವರ ಮನೆಯಲ್ಲಿ ಚಿನ್ನಾಭರಣ (Theft Case) ಕಳ್ಳತನವಾಗಿತ್ತು.
ಮೊದಮೊದಲು ಮುನಿಕೃಷ್ಣಪ್ಪನವರು ತಾವೇ ಮರೆತು ಬೇರೆ ಎಲ್ಲಿಯಾದರೂ ಇಟ್ಟಿದ್ದನ್ನಾ ಎಂದು ಹುಡುಕಾಡಿದ್ದರು. ಆದರೆ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಾಯ ಆಗಿತ್ತು. 87 ವರ್ಷದ ಮುನಿಕೃಷ್ಣಪ್ಪ ಹಾಗೂ ಪತ್ನಿ ಅಣ್ಣಮ್ಮ ದಂಪತಿ ವಯಸ್ಸಾದ ಕಾರಣ ನೋಡಿಕೊಳ್ಳಲೆಂದು ಮನೆಯಲ್ಲಿ ನರ್ಸ್ ಹಾಗೂ ಕ್ಲಿನರ್‌ಗಾಗಿ ಇನ್ನೊಬ್ಬ ಮಹಿಳೆಯನ್ನು ನೇಮಿಸಿಕೊಂಡಿದ್ದರು.
ಈ ವೇಳೆ ನರ್ಸ್ ಮಂಜುಳಾ ಎಂಬಾಕೆ ದಿನವು ಕೊರಳಲ್ಲಿ ಮಾಂಗಲ್ಯ ಸರ ಹಾಕಬೇಡಿ ಅಮ್ಮಾ, ತಿಜೋರಿಯಲ್ಲಿ ಇಟ್ಟುಬಿಡಿ. ವಾಕಿಂಗ್ ಹೋಗುವಾಗ ಏನಾದರೂ ಆದರೆ ಏನು ಮಾಡೋದು ಎಂದು ಅಣ್ಣಮ್ಮ ಅವರಿಗೆ ಹೇಳಿದ್ದಾಳೆ. ಇತ್ತ ಮಹಾದೇವಿ ಎಂಬಾಕೆ ಸುಮಾರು ಒಂದು ತಿಂಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಳು. ಇವರಿಬ್ಬರು ಮಾಲೀಕರ ಚಿನ್ನಾಭರಣ ಇದ್ದ ಬೀರುವಿನ ಮೇಲೆ ಕಣ್ಣು ಬಿದ್ದಿತ್ತು.
ಇದನ್ನೂ ಓದಿ: Honeybee Attack: ಹಾಸನದಲ್ಲಿ ಹೆಜ್ಜೇನು ದಾಳಿಗೆ ನರಳಾಡಿ ಪ್ರಾಣಬಿಟ್ಟ ರೈತ
ಕೀ ಕದ್ದ ಮಹಾದೇವಿ ಮತ್ತು ಚಿನ್ನ ದೋಚಿದ ನರ್ಸ್ ಮಂಜುಳಾ
ಸುಮಾರು 20 ಲಕ್ಷ ರೂ. ಮೌಲ್ಯದ ಒಡವೆಯನ್ನು ಅದ್ಹೇಗೋ ವೃದ್ಧ ದಂಪತಿಯನ್ನು ಯಮಾರಿಸಿ ಎಗರಿಸಿದ್ದಾರೆ. ಈ ಮಹಾದೇವಿ ನಿತ್ಯವು ವೃದ್ಧ ದಂಪತಿ ಮಲಗುವ ಮಂಚದ ಕೆಳಗೆ ಮಲಗುತ್ತಿದ್ದಳು. ವೃದ್ಧ ದಂಪತಿ ಬೀರುವಿನ ಕೀ ಇಡುತ್ತಿದ್ದ ಜಾಗವನ್ನು ನೋಡಿಕೊಂಡಿದ್ದರು. ಮಹಾದೇವಿ ಹಾಗೂ ಮಂಜುಳಾ ಹೊಂಚು ಹಾಕಿ ಕಾಯ್ದುತ್ತಿದ್ದರು. ವೃದ್ದರು ಹಾಲ್‌ನಲ್ಲಿ ನಿದ್ದೆ ಮಾಡುತ್ತಿದ್ದಾಗ, ಇವರಿಬ್ಬರು ಸೇರಿ ಚಿನ್ನಾಭರಣವನ್ನೆಲ್ಲ ದೋಚಿ ಗುಡಿಸಿ ಗುಂಡಾಂತರ ಮಾಡಿದ್ದರು.
ಮರುದಿನ ಪತ್ನಿಗೆ ಕೊರಳಲ್ಲಿ ಒಡವೆ ಇಲ್ಲದನ್ನು ಗಮನಿಸಿದ ಕೃಷ್ಣಪ್ಪ, ಯಾಕಾಗಿ ಹಾಕಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅಣ್ಣಮ್ಮ ಒಡವೆ ಧರಿಸಲು ಅಲ್ಮೇರಾದಲ್ಲಿ ತೆಗೆದುನೋಡಿದರೆ ಚಿನ್ನ ಎಲ್ಲ ಮಾಯವಾಗಿದೆ. ನಂತರ ಎಲ್ಲ ಕಡೆ ಹುಡುಕಾಡಿದರೂ ಸಿಗದಿದ್ದಾಗ ಪೊಲೀಸರಿಗೆ ಕರೆ ಮಾಡಿದ ಕೃಷ್ಣಪ್ಪ ಅವರು ನಡೆದಿದ್ದೆಲ್ಲಾ ಹೇಳಿದ್ದಾರೆ.
ಮನೆಗೆ ಬಂದ ಪೊಲೀಸರು ಮನೆಯಲ್ಲಿ ಯಾರ್ಯಾರು ಇರುತ್ತಾರೆಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮಹಾದೇವಿಯನ್ನು ವಿಚಾರಣೆ ಮಾಡಿದ್ದಾರೆ. ಮೊದಮೊದಲು ತನಗೆ ಏನು ಗೊತ್ತಿಲ್ಲ ಎಂದವಳು, ಪೊಲೀಸರು ಆತಿಥ್ಯ ಕೊಟ್ಟಾಗ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಚಿನ್ನಾಭರಣವನ್ನೆಲ್ಲ ಕದ್ದು, ಮಹಾದೇವಿ ಅದೇ ಮನೆಯ ಬಾತ್ ರೂಮ್‌ನ ಬಕೆಟ್‌ವೊಂದರಲ್ಲಿ ಬಚ್ಚಿಟ್ಟಿದ್ದಳು. ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇತ್ತ ವೃದ್ಧ ದಂಪತಿ ಯಾರನ್ನಾ ನಂಬೋದು ಬಿಡೋದು ಶಿವನೇ ಎಂದು ಪರಿತಪ್ಪಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ