ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಸಂಚಾರಿ ಪೊಲೀಸರ (Traffic Violation) ಸರ್ಕಸ್ ಮುಂದುವರಿದಿದೆ. ಸದ್ಯ ಗಾಡಿ ಓಡಿಸುವಾಗ ಪೆಟ್ರೋಲ್ ಇಲ್ಲದೆ ರಸ್ತೆ ಮಧ್ಯೆ ಏನಾದರೂ ನಿಂತರೆ ಕೇಸ್ ಬೀಳುವುದು ಗ್ಯಾರಂಟಿ.. ಹೌದು ಅತಿ ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳಲ್ಲಿ ಏನಾದರೂ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ, ಚಾಲಕನ ಮೇಲೆ ಕೇಸ್ ಹಾಕಲಾಗುತ್ತದೆ.
ಸೆಕ್ಷನ್ 283ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್ ಖಾಲಿಯಾಗಿ ಗಾಡಿಗಳು ನಿಂತು ಹೋದರೆ, ಇದರಿಂದ ಇನ್ನಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಹೀಗಾಗಿ ಟ್ರಾಫಿಕ್ ಸಮಸ್ಯೆಯನ್ನು ಸೃಷ್ಟಿಸಿದ ಗಾಡಿ ಚಾಲಕನ ಮೇಲೆ ಕೇಸ್ ದಾಖಲು ಮಾಡಲು ಮುಂದಾಗಿದ್ದಾರೆ.
ಪ್ರಮುಖವಾಗಿ ಹೆಬ್ಬಾಳ, ಏರ್‌ಪೋಟ್ ರೋಡ್, ಗೋರಗುಂಟೆ ಪಾಳ್ಯ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೇಟ್ರೋಲ್ ಇಲ್ಲದೆ ನಿಂತು ಹೋದಲ್ಲಿ ಪ್ರಕರಣ ದಾಖಲಿಸಿವುದಾಗಿ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ
ಮಕ್ಕಳ ವ್ಹೀಲಿಂಗ್ ಶೋಕಿಗೆ ಪೋಷಕರಿಗೆ ದಂಡ
ವ್ಹೀಲಿಂಗ್ ಶೋಕಿಗೆ (Bike Wheeling) ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ (Wheeling Stunt) ಮಿತಿ ಮೀರಿದೆ. ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಮಾತ್ರವಲ್ಲ, ಅದೆಷ್ಟೋ ಅಮಾಯಕರು ಪ್ರಾಣಬಿಟ್ಟಿದ್ದಾರೆ.
ನಗರದಲ್ಲಿ ಪುಂಡರ ವ್ಹೀಲಿಂಗ್ ಶೋಕಿ ಇನ್ನೂ ನಿಲ್ಲುತ್ತಲೇ ಇಲ್ಲ. ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದು ಹೆಚ್ಚಾಗಿದೆ. ವ್ಹೀಲಿಂಗ್ ಮಾಡುವ ಸವಾರರ ವಿರುದ್ಧ ಪೊಲೀಸರು ಅದೆಷ್ಟೇ ಕಾರ್ಯಾಚರಣೆ ನಡೆಸಿದರೂ, ಪುಂಡರು ಡೋಂಟ್ ಕೇರ್ ಅಂತಿದ್ದರು.
ಬೈಕ್ ಜತೆ ಸರ್ಕಸ್ ಮಾಡುತ್ತಾ, ಜನಸಂದಣಿಯಿರುವ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡಾಟ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ಶಾಕ್ ಕೊಟ್ಟಿದ್ದಾರೆ.
ವ್ಹೀಲಿಂಗ್‌ಗೆ ಬ್ರೇಕ್ ಹಾಕಲು ಹೊಸ ಮಾರ್ಗವನ್ನು ಕಂಡು ಕೊಂಡಿರುವ ಸಂಚಾರಿ ಪೊಲೀಸರು, ವ್ಹೀಲಿಂಗ್ ಕೇಸ್‌ನಲ್ಲಿ ಅಪ್ರಾಪ್ತರು ಕಂಡು ಬಂದರೆ ಪೋಷಕರ ಮೇಲೆ ಕೇಸ್ ದಾಖಲಾಗುತ್ತದೆ. ಜೆಜೆ ಆಕ್ಟ್ ಅಡಿಯಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಬೆಂಗಳೂರು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ