ಬೆಂಗಳೂರು: ರೋಡ್‌ನಲ್ಲಿ ಟ್ರಾಫಿಕ್ ಪೊಲೀಸರು ನಿಂತಿಲ್ಲ ಎಂದು ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಹಾಕದೆ ಬೈಕ್ ಓಡಿಸುವುದು, ಸೀಟ್ ಬೆಲ್ಟ್ ಹಾಕದೇ ಕಾರು ಚಲಾಯಿಸುವುದು ಸೇರಿದಂತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಇನ್ನು ಮುಂದೆ ಕಂಟಕ (Traffic violation) ಕಾದಿದೆ.
ಪದೇಪದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ಎಚ್ಚರವಾಗಿ ಇರಬೇಕು. ಯಾಕೆಂದರೆ ಉಲ್ಲಂಘನಾ ಪ್ರಕರಣಗಳು ಹೆಚ್ಚಾದಂತೆ ನಿಮ್ಮ ವಾಹನ ಸೀಜ್ ಆಗಿ ಗುಜರಿ ಸೇರುವ ಕಾಲ ಸನಿಹವಿದೆ. ಇಂಥಹದ್ದು ಪ್ರಸ್ತಾವನೆಯನ್ನು ಸಾರಿಗೆ ಇಲಾಖೆಯ ಸಾರಿಗೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಸರ್ಕಾರಕ್ಕೆ ಸಲ್ಲಿಸಿದೆ.
ಒಂದು ವೇಳೆ ಈ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದರೆ ನಿಮ್ಮ ವಾಹನವನ್ನು ಸಂಚಾರಿ ಪೊಲೀಸರು ಜಪ್ತಿ ಮಾಡುತ್ತಾರೆ. ಇತ್ತೀಚಿಗೆ ಸವಾರರು ನಿರಂತರವಾಗಿ ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಸತತ ಅರಿವು ಮೂಡಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಶೇ.50 ರಷ್ಟು ದಂಡ ವಿನಾಯಿತಿಯನ್ನು ಎರಡು ಬಾರಿ ಅವಕಾಶ ನೀಡಿದರೂ ಪರಿಣಾಮಕಾರಿಯಾಗಿಲ್ಲ.
ಇದನ್ನೂ ಓದಿ: Assault Case : ದಾರಿ ಬಿಡು ಎಂದಿದ್ದಕ್ಕೆ ಬಸ್‌ಗೆ ಕಲ್ಲೆಸೆದ ಕುಡುಕ; ಕಾರ್ ಪಾರ್ಕಿಂಗ್ ವಿಷ್ಯಕ್ಕೆ ಹೊಡಿಬಡಿ
ಈ ಮಧ್ಯೆ ಸಂಚಾರಿ ಪೊಲೀಸರು 50 ಸಾವಿರಕ್ಕಿಂತ ಹೆಚ್ಚು ದಂಡವಿರುವ ವಾಹನಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಹೀಗಾದರೂ ಪದೆಪದೇ ಸಂಚಾರ ನಿಯಮ ಉಲ್ಲಂಘಿಸುವ ಪ್ರಮಾಣ ದಿನೇದಿನೆ ಅಧಿಕಗೊಳ್ಳುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ಇಲಾಖೆಯೇ ಅತೀ ಹೆಚ್ಚು ನಿಮಯ ಉಲ್ಲಂಘಿಸಿದ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾವನೆ ಸಲ್ಲಿಸಿದೆ.
ಸದ್ಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗಿದ್ದು, ಸರ್ಕಾರ ಈ ಕಠಿಣ ನಿಯಮಕ್ಕೆ ಓಕೆ ಎಂದರೆ ವಾಹನಗಳು ಗುಜರಿ ಸೇರುವುದು ಗ್ಯಾರಂಟಿ. ಹೆಚ್ಚೆಚ್ಚು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಕೆಲವೊಮ್ಮೆ ದಂಡ ಪಾವತಿಸುವವರೆಗೂ ವಾಹನಗಳನ್ನು ಜಪ್ತಿ ಮಾಡಿಕೊಳ್ಳುತ್ತಾರೆ. ಇದೀಗ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಅಧಿಕಾರ ನೀಡುವಂತೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ವಿಭಾಗವು ಮನವಿ ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ