ಬೆಂಗಳೂರು: ಸಂಚಾರಿ ಪೊಲೀಸರು ಅದೆಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ, ವಾಹನ ಸವಾರರಿಂದ ವೈಲೆನ್ಸ್ ನಡೆಯುತ್ತಲೇ (Traffic violations) ಇದೆ. ಸದ್ಯ ಬೆಂಗಳೂರಿನಲ್ಲಿ ಒಬ್ಬ ಸವಾರ ಸಂಚಾರಿ ನಿಯಮ ಉಲ್ಲಂಘಿಸಿ ನಗರಕ್ಕೆ ನಂಬರ್ ಒನ್ ಎನ್ನಿಸಿಕೊಂಡಿದ್ದಾನೆ.
ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದಾಗ ದಂಡ ಹಾಕುವುದು ಕಾಮನ್. ಆದರೆ ದಂಡ ಹಾಕಿಸಿಕೊಂಡವರ ವಾಹನದ ಟ್ರಾವೆಲ್ ಹಿಸ್ಟರಿ ಕೇಳಿದರೆ ನಿಜಕ್ಕೂ ಭಯ ಬೀಳುತ್ತಿರಿ. ವೆಂಕಟ್ರಾಮನ್ ಎಂಬಾತನ ವಾಹನದ ಮೇಲಿರುವ ಕೇಸ್ ಬರೋಬ್ಬರಿ 300ಕ್ಕೂ ಹೆಚ್ಚು.
ಸಂಚಾರಿ ಆಯುಕ್ತ ಅನುಚೇತ್ ಅವರು ಈ ಹಿಂದೆ 50 ಸಾವಿರದವರೆಗೆ ದಂಡವಿದ್ದಲ್ಲಿ ಅದನ್ನು ಮನೆಗೆ ಹೋಗಿ ವಸೂಲಿ ಮಾಡಿಕೊಳ್ಳಿ ಎಂದು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೆಂಕಟರಾಮನ್ ಎಂಬಾತ ವಾಹನ ತಪಾಸಣೆ ಮಾಡಿದ್ದಾರೆ. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರಲ್ಲಿ ಈತನೇ ನಂಬರ್ ಒನ್ ಎನಿಸಿಕೊಂಡಿದ್ದಾನೆ.
ಈತನ ವಾಹನದ ಮೇಲೆ 300ಕ್ಕೂ ಹೆಚ್ಚು ಕೇಸ್‌ಗಳಿವೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ಗಾಡಿ ಓಡಿಸುತ್ತಾ ಮೊಬೈಲ್ ಬಳಕೆ, ಫುಟ್ ಪಾಥ್ ಮೇಲೆ ಸಂಚಾರ ಅಬ್ಬಾಬ್ಬ.. ಒಂದಾ ಎರಡಾ ಪೊಲೀಸ್ ಮ್ಯಾನ್ಯೂವಲ್‌ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಅನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿದ್ದಾನೆ.
ಎಸ್.ಆರ್ ನಗರ , ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ನಿಯಮ ಉಲ್ಲಂಘಿಸಿದ್ದಾನೆ. ಈತನ ವಾಹನದ ಮೇಲೆ 3,20,000 ರೂ. ದಂಡವಿದೆ. ಆದರೆ ಗಾಡಿಯ ಬೆಲೆ 20-25 ಸಾವಿರ ರೂ. ಇರಬಹುದು. ಹೀಗಾಗಿ ದಂಡದ ಮೊತ್ತ ಮೂರು ಲಕ್ಷ ಹೀಗಾಗಿ ಗಾಡಿಯನ್ನೇ ಸೀಜ್ ಮಾಡಿಕೊಳ್ಳಿ ಎಂದಿದ್ದಾನೆ. ಆದರೆ ಪೊಲೀಸರು ದಂಡ ಕಟ್ಟಬೇಕು ಇಲ್ಲದಿದ್ದರೆ ಕೇಸ್ ಹಾಕುತ್ತೀವಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ