Traffic violations : ಸ್ಕೂಟರ್‌ ವ್ಯಾಲ್ಯೂ 20 ಸಾವಿರ ರೂ. ಆದರೆ ದಂಡದ ಮೊತ್ತ 3 ಲಕ್ಷ ರೂ.! - Vistara News

ಬೆಂಗಳೂರು

Traffic violations : ಸ್ಕೂಟರ್‌ ವ್ಯಾಲ್ಯೂ 20 ಸಾವಿರ ರೂ. ಆದರೆ ದಂಡದ ಮೊತ್ತ 3 ಲಕ್ಷ ರೂ.!

Traffic violations : ಸ್ಕೂಟರ್‌ ವ್ಯಾಲ್ಯೂ 20 ಸಾವಿರ ರೂ. ಇದ್ದರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ದಂಡದ ಮೊತ್ತ 3 ಲಕ್ಷ ರೂ. ಆಗಿದೆ.

VISTARANEWS.COM


on

Man fined Rs 3 lakh for traffic violation
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಂಚಾರಿ ಪೊಲೀಸರು ಅದೆಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ, ವಾಹನ ಸವಾರರಿಂದ ವೈಲೆನ್ಸ್‌ ನಡೆಯುತ್ತಲೇ (Traffic violations) ಇದೆ. ಸದ್ಯ ಬೆಂಗಳೂರಿನಲ್ಲಿ ಒಬ್ಬ ಸವಾರ ಸಂಚಾರಿ ನಿಯಮ ಉಲ್ಲಂಘಿಸಿ ನಗರಕ್ಕೆ ನಂಬರ್ ಒನ್‌ ಎನ್ನಿಸಿಕೊಂಡಿದ್ದಾನೆ.

ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದಾಗ ದಂಡ ಹಾಕುವುದು ಕಾಮನ್‌. ಆದರೆ ದಂಡ ಹಾಕಿಸಿಕೊಂಡವರ ವಾಹನದ ಟ್ರಾವೆಲ್ ಹಿಸ್ಟರಿ ಕೇಳಿದರೆ ನಿಜಕ್ಕೂ ಭಯ ಬೀಳುತ್ತಿರಿ. ವೆಂಕಟ್ರಾಮನ್ ಎಂಬಾತನ ವಾಹನದ ಮೇಲಿರುವ ಕೇಸ್ ಬರೋಬ್ಬರಿ 300ಕ್ಕೂ ಹೆಚ್ಚು.

ಸಂಚಾರಿ ಆಯುಕ್ತ ಅನುಚೇತ್ ಅವರು ಈ ಹಿಂದೆ 50 ಸಾವಿರದವರೆಗೆ ದಂಡವಿದ್ದಲ್ಲಿ ಅದನ್ನು ಮನೆಗೆ ಹೋಗಿ ವಸೂಲಿ ಮಾಡಿಕೊಳ್ಳಿ ಎಂದು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೆಂಕಟರಾಮನ್ ಎಂಬಾತ ವಾಹನ ತಪಾಸಣೆ ಮಾಡಿದ್ದಾರೆ. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರಲ್ಲಿ ಈತನೇ ನಂಬರ್ ಒನ್‌ ಎನಿಸಿಕೊಂಡಿದ್ದಾನೆ.

ಈತನ ವಾಹನದ ಮೇಲೆ 300ಕ್ಕೂ ಹೆಚ್ಚು ಕೇಸ್‌ಗಳಿವೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ಗಾಡಿ ಓಡಿಸುತ್ತಾ ‌ಮೊಬೈಲ್‌ ಬಳಕೆ, ಫುಟ್ ಪಾಥ್‌ ಮೇಲೆ ಸಂಚಾರ ಅಬ್ಬಾಬ್ಬ.. ಒಂದಾ ಎರಡಾ ಪೊಲೀಸ್ ಮ್ಯಾನ್ಯೂವಲ್‌ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಅನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿದ್ದಾನೆ.

ಎಸ್‌.ಆರ್ ನಗರ , ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ನಿಯಮ ಉಲ್ಲಂಘಿಸಿದ್ದಾನೆ. ಈತನ ವಾಹನದ ಮೇಲೆ 3,20,000 ರೂ. ದಂಡವಿದೆ‌. ಆದರೆ ಗಾಡಿಯ ಬೆಲೆ 20-25 ಸಾವಿರ ರೂ. ಇರಬಹುದು. ಹೀಗಾಗಿ ದಂಡದ ಮೊತ್ತ ಮೂರು ಲಕ್ಷ ಹೀಗಾಗಿ ಗಾಡಿಯನ್ನೇ ಸೀಜ್ ಮಾಡಿಕೊಳ್ಳಿ ಎಂದಿದ್ದಾನೆ. ಆದರೆ ಪೊಲೀಸರು ದಂಡ ಕಟ್ಟಬೇಕು ಇಲ್ಲದಿದ್ದರೆ ಕೇಸ್ ಹಾಕುತ್ತೀವಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Caste Census : ಜಾತಿ ಗಣತಿ ವರದಿಗೆ ಭಾರಿ ಅಪಸ್ವರ; ಅವೈಜ್ಞಾನಿಕ ಎಂದ ಸಿದ್ದಗಂಗಾ ಶ್ರೀ

Caste Census : ಜಾತಿ ಗಣತಿ ವರದಿ ಮತ್ತೆ ಸುದ್ದಿ ಮಾಡುತ್ತಿದೆ. ಅದು ಮಂಡನೆಯಾಗುತ್ತಿದ್ದಂತೆಯೇ ಅದು ಅವೈಜ್ಞಾನಿಕ ಎಂಬ ಆಪಾದನೆಗಳಿಗೆ ಮತ್ತೆ ಚಾಲನೆ ಸಿಕ್ಕಿದೆ.

VISTARANEWS.COM


on

Caste Census siddalinga Swameeji
Koo

ಬೆಂಗಳೂರು: ಬಹು ವಿವಾದಿತ ಜಾತಿ ಗಣತಿ ವರದಿಯನ್ನು (Caste Census report) ಕೊನೆಗೂ ರಾಜ್ಯ ಸರ್ಕಾರ ಸ್ವೀಕಾರ ಮಾಡಿದೆ. ಇದರ ನಡುವೆಯೇ ಈ ವರದಿ ಅವೈಜ್ಞಾನಿಕ ಎಂಬ ಅಪಸ್ವರ ಮತ್ತೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅವರಿಂದ ಸ್ವೀಕಾರ ಮಾಡಿದ ಈ ವರದಿಯ ಬಗ್ಗೆ ಮೊದಲಿನಿಂದಲೂ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದಿಂದ ಆಕ್ಷೇಪವಿದೆ. ವರದಿ ಮಂಡನೆಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ (Siddalinga swameeji) ಅವರು, ಇದು ವೈಜ್ಞಾನಿಕವಾಗಿಲ್ಲ ಎಂಬ ಪರೋಕ್ಷ ಅಭಿಪ್ರಾಯ ವ್ಯಕ್ತಪಡಿಸಿದರು.

ʻʻಜಾತಿ ಗಣತಿ‌ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ಈ ವರದಿಯನ್ನು ವೈಜ್ಞಾನಿಕವಾಗಿ ರೂಪಿಸಲಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆʼʼ ಎಂದು ಶ್ರೀಗಳು ಹೇಳಿದರು.

ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ, ನನ್ನನ್ನಂತೂ ಯಾರೂ ಬಂದು ಸಂದರ್ಶನ ಮಾಡಿಲ್ಲ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ. ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತದೆ ಎಂದು ಶ್ರೀಗಳು ಹೇಳಿದರು.

ʻʻನಾನ್ಯಾವ ಜಾತಿ, ಏನು ಅಂತಾ ಯಾರೂ, ಯಾವ ಮಾಹಿತಿಯನ್ನೂ ಕೇಳಿಲ್ಲ. ಎಲ್ಲರ ಬಳಿಯೂ ಹೋಗಿದ್ವಿ ಅಂತಾ ಹೇಳ್ತಾರಲ್ವಾ? ನನ್ನ ಬಳಿಯೇ ಬಂದಿಲ್ಲʼʼ ಎಂದು ಹೇಳಿರುವ ಸಿದ್ದಗಂಗಾ ಶ್ರೀಗಳು ಪರೋಕ್ಷವಾಗಿ ವರದಿ ವೈಜ್ಞಾನಿಕವಾಗಿ ಆಗಿಲ್ಲ ಎಂದಿದ್ದಾರೆ.

ʻʻಪ್ರತಿಯೊಬ್ಬರನ್ನು ಕೇಳ್ತಾರಾ? ಅಥವಾ ಸಮಾಜದ ಮುಖಂಡರನ್ನ ಮಾತ್ರ ಕೇಳ್ತಾರಾ? ಏನು ಅಂತಾ ಗೊತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡೋಕೆ ಹೋಗಲ್ಲ. ಎಲ್ಲರನ್ನೂ ಒಳಗೊಂಡಂತ ವರದಿ ಸ್ವೀಕಾರ ಆಗಲಿ. ಮತ್ತು ಆಯಾ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯಗಳು ವಿತರಣೆ ಆಗಲಿʼʼ ಎನ್ನುವುದು ಶ್ರೀಗಳ ಅಭಿಮತ.

ಜಾತಿ ಗಣತಿಯಲ್ಲಿ ಕೆಲವು ದೋಷಗಳಿವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಈ ನಡುವೆ ರಾಮನಗರದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ ಎಂದು ಹೇಳಿದರು.

ʻʻನಾಲ್ಕು ಜನರ ಮನೆಗೆ ಹೋಗಿದ್ದರೆ, ಇನ್ನು ಕೆಲವರ ಮನೆಗೆ ಹೋಗಲೇ ಇಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಕೆಲ ಗೊಂದಲಗಳಿವೆ. ವೀರಶೈವ ಲಿಂಗಾಯತ ಜಾತಿಯಲ್ಲಿ ಅನೇಕ ಉಪಪಂಗಡಗಳಿವೆ‌. 103 ಉಪ ಪಂಗಡಳಿರುವುದರಿಂದ ಅಧ್ಯಯನ ಮಾಡಬೇಕು. ಇದರ ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು. ಇದರಲ್ಲಿ ನಾವು ರಾಜಕೀಯ ಮಾಡಲ್ಲ.ʼʼ ಎಂದು ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ Caste Census: ಬಹು ವಿವಾದಿತ ಜಾತಿ ಗಣತಿ ವರದಿ ಸ್ವೀಕರಿಸಿದ ಸಿದ್ದರಾಮಯ್ಯ; ಜೇನುಗೂಡಿಗೆ ಕೈ ಹಾಕಿತೇ ಸರ್ಕಾರ?

ಹಾಲಿ ವರದಿಯಲ್ಲೇನಿದೆ?

ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆ ಅನುಸಾರ ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಗ್ರ ವರದಿಯಾಗಿದೆ. ಅಲ್ಲದೆ, ಜಾತಿವಾರು ಜನಸಂಖ್ಯೆ ವಿವರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.

ವರದಿಯಲ್ಲಿನ ಪ್ರಮುಖ ಅಂಶಗಳು

 1. ಜಾತಿವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಸಿ, ಎಸ್‌ಟಿ ಹೊರತುಪಡಿಸಿ)
 2. ಜಾತಿವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಸಿ ಸಂಪುಟ ೧)
 3. ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಟಿ ಸಂಪುಟ ೧)
 4. ವಿಧಾನಸಭಾ ಕ್ಷೇತ್ರವಾರು ಜಾತಿವಾರು ಅಂಕಿ ಅಂಶಗಳು
 5. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶದ ವರದಿ 2024

ಒಟ್ಟು 13 ಪ್ರತಿಗಳ ಸಮಗ್ರ ಸಂಪುಟ ವರದಿ ಇದಾಗಿದೆ. ಶೀಲ್ಡ್‌ ಬ್ಯಾಕ್ಸ್‌ನಲ್ಲಿ ವರದಿ ಪ್ರತಿಯನ್ನು ತರಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಆಯೋಗದ ಸದಸ್ಯರು ವರದಿ ಸಲ್ಲಿಕೆ ಮಾಡಿದ್ದಾರೆ.

Continue Reading

ಮಳೆ

Karnataka Weather : ಬಿಸಿಲ ತಾಪಕ್ಕೆ ಕರಾವಳಿ, ಉತ್ತರ ಕರ್ನಾಟಕ ತತ್ತರ

Heat Summer : ಬಿಸಿಲ ತಾಪಕ್ಕೆ ಕರಾವಳಿ ಹಾಗೂ ಉತ್ತರ ಒಳನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ಮಾರ್ಚ್‌ ಮೊದಲ ವಾರದಿಂದ ಬಿಸಿಲ ಧಗೆಯು ಜನರನ್ನು (Karnataka Weather Forecast) ಮತ್ತಷ್ಟು ಹೈರಾಣಾಗಿಸಲಿದೆ.

VISTARANEWS.COM


on

By

Dry weather likely to prevail over the State
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದಲ್ಲಿ ಶುಷ್ಕ ವಾತಾವರಣವೇ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ಇರಲಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಆದರೆ ಬೆಂಗಳೂರು ವಿಮಾನ ನಿಲ್ದಾಣ ಸೇರಿ ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Murder Case : ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

ರಾಜ್ಯಾದ್ಯಂತ ಬುಧವಾರ ಒಣ ಹವೆ ಇತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಕನಿಷ್ಠ ಉಷ್ಣಾಂಶ 15.8 ಡಿ.ಸೆ. ಮಂಡ್ಯದಲ್ಲಿ ದಾಖಲಾಗಿತ್ತು. ಕೋಲಾರದಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ದಕ್ಷಿಣ ಕನ್ನಡದಲ್ಲಿ ಗರಿಷ್ಠ ಉಷ್ಣಾಂಶ 37.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ನಿಂದ 12 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಹಾವೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40ರಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Murder Case : ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಹೊಟ್ಟೆ ಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

ಕೆಲವೊಮ್ಮೆ ಯಾವುದೋ ಮದುವೆಯಲ್ಲೋ, ಹಬ್ಬದೂಟದ ಸಂದರ್ಭವೋ, ಅಥವಾ ಗೆಳೆಯರ ಜೊತೆಗೆ ರೆಸ್ಟೋರೆಂಟಿಗೆ ಹೋಗಿಯೋ ಅಗತ್ಯಕ್ಕಿಂತ ಹೆಚ್ಚೇ ಊಟ ಮಾಡಿ ಬಂದುಬಿಡುತ್ತೇವೆ. ಊಟ ಮಾಡುವ ಸಂದರ್ಭ ಮಾತುಕತೆಯಲ್ಲೋ, ಅಥವಾ ಊಟ ಬಹಳ ರುಚಿಯಾಗಿದೆಯೆಂದೋ, ತನ್ನ ಫೇವರಿಟ್‌ ಅಡುಗೆ ಬಹಳ ದಿನಗಳ ನಂತರ ಸಿಕ್ಕಿದೆಯೆಂದೋ ಹೊಟ್ಟೆ ಬಿರಿಯ ತಿಂದುಬಿಡುತ್ತೇವೆ. ಊಟ ಕುತ್ತಿಗೆವರೆಗೆ ಬಂದಿದೆ ಅನಿಸಿದರೂ, ಕೊನೆಯಲ್ಲಿ ಸಿಹಿತಿನಿಸನ್ನೋ, ಐಸ್‌ಕ್ರೀಮನ್ನೋ ಹೊಟ್ಟೆಗಿಳಿಸಿ ತೇಗುತ್ತೇವೆ. ಎಲ್ಲ ಮುಗಿದ ಮೇಲೆ ಹೊಟ್ಟೆ ಮೇಲೆ ಕೈಯಾಡಿಸುವಾಗಲೇ ಇಹಲೋಕಕ್ಕೆ ಮರಳಿ, ಅಗತ್ಯಕ್ಕಿಂತ ಹೆಚ್ಚೇ ತಿಂದೆ ಎಂಬ ಅನುಭವವಾಗುವುದು. ಕೆಲವೊಮ್ಮೆ ಇಂಥ ಊಟ ಮಾಡುವ ಸಂದರ್ಭ ಮನಸ್ಸಿಗೆ ಖುಷಿಯಾದರೂ, ಜ್ಞಾನೋದಯವಾಗುವ ಹೊತ್ತಿಗೆ ಹೊಟ್ಟೆ ಉಬ್ಬರಿಸಿದಂಥ ಭಾವ. ಇನ್ನೇನು ಮಾಡುವುದು, ಹೊಟ್ಟೆ ಹೊತ್ತುಕೊಂಡು ನಾಲ್ಕು ಹೆಜ್ಜೆ ನಡೆಯಲಾರದಷ್ಟು ಹೊಟ್ಟೆ ಭಾರ. ಅದಕ್ಕಾಗಿಯೇ ಯಾವಾಗಲೂ ನಾವು ತಿನ್ನುತ್ತಿರುವ ಆಹಾರ ಪೋಷಕಾಂಶಗಳಿಂದ ಸಮೃದ್ಧವಾಗಿದೆಯೇ ಎಂದು ಯೋಚಿಸಬೇಕು. ದೇಹದ ಪಚನಕ್ರಿಯೆಯನ್ನು ಚುರುಕಾಗಿಸಲು ಯಾವಾಗಲೂ ಸಮೃದ್ಧ ಆಹಾರಗಳಲ್ಲೇ ಹೆಚ್ಚು ತಾಕತ್ತಿದೆ. ಆದರೂ, ಕೆಲವೊಮ್ಮೆ ನಮ್ಮ ಮನೋಸಾಮರ್ಥ್ಯವನ್ನು ಮೀರಿ ನಾವು ತಿಂದು ಬಿಡುತ್ತೇವೆ. ಅಂಥ ಸಂದರ್ಭ ನಮ್ಮ ಪಚನಕ್ರಿಯೆಯನ್ನು ಚುರುಕಾಗಿಸಲು, ಕೊಂಚ ಬೇಗನೆ ಹೊಟ್ಟೆ ಹಗುರಾಗಿಸಲು ಯಾವ ಉತ್ತೇಜಕ ಆಹಾರಗಳನ್ನು ಕೊನೆಯಲ್ಲಿ ಊಟದ ನಂತರ ಸೇವಿಸಬಹುದು (health tips for digestion) ಎಂಬುದನ್ನು ನೋಡೋಣ.

ಸೋಂಪು ಹಾಗೂ ಜೀರಿಗೆ

ಸೋಂಪು ಹಾಗೂ ಜೀರಿಗೆಯಲ್ಲಿರುವ ಅಂಶಗಳು ನಮ್ಮ ದೇಹದಲ್ಲಿ ಜೀರ್ಣಕಾರಕ ಕಿಣ್ವಗಳನ್ನು ಪ್ರಚೋದಿಸುತ್ತವೆ. ಜೀರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಕೊಬ್ಬು ಕರಗಿಸುವಲ್ಲಿಯೂ ನೆರವಾಗುತ್ತದೆ. ತೂಕ ಇಳಿಸುವ ಮಂದಿಗೂ ಇದು ತೂಕ ಇಳಿಕೆಗೆ ನೆರವಾಗುತ್ತದೆ. ಆರೋಗ್ಯಕರ ಆಹಾರದ ಸೇವನೆಯೊಂದಿಗೆ ಇವುಗಳ ಸೇವನೆಯು ಈ ಎಲ್ಲ ಕ್ರಿಯೆಗಳನ್ನು ಇನ್ನಷ್ಟು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ.

Raw Brown Organic Ajwain Seed Benefits Of Omkalu Ajwain

ಅಜ್ವೈನ್‌ (ಓಂಕಾಳು)

ಓಂಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಸಾಕಷ್ಟು ಜೀರ್ಣ ಸಂಬಂಧೀ ಸಮಸ್ಯೆಗಳು ಪರಿಹಾರವಾಗುತ್ತವೆ. ತಿಂದಿದ್ದು ಅತಿಯಾದಾಗ ಅಥವಾ ರಾತ್ರಿ ಇದರ ನೀರನ್ನು ಕೊನೆಯಲ್ಲಿ ಕುಡಿದು ಮಲಗುವುದರಿಂದ ಸಮರ್ಪಕವಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ಅಜೀರ್ಣವಾದಾಗ, ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯದಾದಾಗ ಇದರ ನೀರನ್ನು ಕುಡಿಯುವುದರಿಂದ ಜೀರ್ಣಕಾರಕ ಕಿಣ್ವಗಳು ಬಿಡುಗಡೆಯಾಗಿ ಬೇಗನೆ ಜೀರ್ಣವಾಗಲು ನೆರವಾಗುತ್ತವೆ.

Do not stop using probiotics like yogurt buttermilk They keep the digestive system healthy Gastric Problem

ಮಜ್ಜಿಗೆ

ಮಜ್ಜಿಗೆ ನೀರೂ ಕೂಡ ಜೀರ್ಣಕ್ಕೆ ಒಳ್ಳೆಯದು. ಅತಿಯಾಗಿ ಉಂಡಾಗ, ಮದುವೆಯೂಟದಂತಹ ಹಬ್ಬದಡುಗೆ ಉಂಡಾಗ ಒಂದು ಮಜ್ಜಿಗೆ ನೀರು ಕುಡಿದು ಅಂತ್ಯಗೊಳಿಸಿದರೆ, ಜೀರ್ಣಕ್ರಿಯೆ ಚುರುಕಾಗುತ್ತದೆ.

Berries

ಬೆರ್ರಿ ಹಣ್ಣುಗಳು

ಆಂಟಿ ಆಕ್ಸಿಡೆಂಟ್‌ಗಳು ಹಾಗೂ ನಾರಿನಂಶ ಹೇರಳವಾಗಿರುವ ಬೆರ್ರಿ ಹಣ್ಣುಗಳು ಹುಳಿಸಿಹಿಯಾದ ಹಣ್ಣುಗಳು. ಇವುಗಳ ಸೇವನೆ ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತದೆ. ಊಟವಾದ ನಂತರ ಸ್ವಲ್ಪ ಹೊತ್ತಿನ ಮೇಲೆ ಇವುಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಪ್ರಚೋದನೆ ನೀಡಬಹುದು.

reen Tea Benefits Of Drinking Green Tea

ಗ್ರೀನ್‌ ಟೀ

ಗ್ರೀನ್‌ ಟೀಯಲ್ಲಿರುವ ಕೆಟಚಿನ್‌ ಎಂಬ ಅಂಶವು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಗುಣವನ್ನು ಹೊಂದಿದೆ. ಅಷ್ಟೇ ಅಲ್ಲ, ಇದಕ್ಕೆ ಕೊಬ್ಬು ಕರಗಿಸುವ ಗುಣವೂ ಇದೆ. ಹಾಗಾಗಿಯೇ ಗ್ರೀನ್‌ಟೀ ತೂಕ ಇಳಿಸುವವರ ಅತ್ಯಂತ ಪ್ರಿಯವಾದ ಪೇಯ. ಊಟದ ಸ್ವಲ್ಪ ಹೊತ್ತಿನ ನಂತರ ಗ್ರೀನ್‌ಟೀ ಕುಡಿಯುವ ಮೂಲಕ ಜೀರ್ಣಕ್ರಿಯೆಗೆ ಚುರುಕು ಮುಟ್ಟಿಸಬಹುದು.

Lettuce

ಸೊಪ್ಪು

ನಾರಿನಂಶ ಹೆಚ್ಚಿರುವ, ಪೋಷಕಾಂಶಗಳಿಂದ ಸಂಪದ್ಭರಿತವಾಗಿರುವ ಪಾಲಕ್‌, ಬಸಳೆ, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಸೊಪ್ಪುಗಳೂ ಕೂಡಾ, ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವಂಥವುಗಳು. ಹೆಚ್ಚು ಉಂಡ ಸಂದರ್ಭಗಳಲ್ಲಿ, ನಂತರದ ಊಟವನ್ನು ಮಿತವಾಗಿ ಇಟ್ಟುಕೊಳ್ಳುವ ಮೂಲಕ ಅಥವಾ ಸೊಪ್ಪಿನ ಸೂಪ್‌ ಅಥವಾ ಸೊಪ್ಪಿನ ಆಹಾರ ಪದಾರ್ಥಗಳ ಸೇವನೆಯ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗವಂತೆ ನೋಡಿಕೊಳ್ಳಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Continue Reading

ಪ್ರಮುಖ ಸುದ್ದಿ

Caste Census report: ಜಾತಿಗಣತಿ ವರದಿಯಲ್ಲಿ ಜನಸಂಖ್ಯೆ ಬಹಿರಂಗ; ಎಸ್ಸಿಗಳು ಫಸ್ಟ್‌, 2ನೇ ಸ್ಥಾನದಲ್ಲಿ ಮುಸ್ಲಿಮರು!

Caste Census report: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಒಟ್ಟು 200 ಪುಟ ಹಾಗೂ 48 ಸಂಪುಟಗಳ ವರದಿಯನ್ನು ಹಸ್ತಾಂತರ ಮಾಡಿದ್ದಾರೆ. ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ (ಅಹಿಂದ ವರ್ಗ) ಜನಸಂಖ್ಯೆಯೇ ಅಧಿಕವಾಗಿರುವುದು ಈ ವರದಿಯ ಸಾರವಾಗಿದೆ.

VISTARANEWS.COM


on

Population revealed in caste census report SCs first and Muslims second place
Koo

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ವರದಿಯನ್ನು (Caste Census report) ರಾಜ್ಯ ಸರ್ಕಾರ ಅಧಿಕೃತವಾಗಿ ಸ್ವೀಕಾರ ಮಾಡಿದೆ. ಅಲ್ಲದೆ, ಈ ವರದಿಯನ್ನು ಬಾಕ್ಸ್‌ಗಳಲ್ಲಿ ಸೀಲ್‌ ಮಾಡಲಾಗಿದ್ದರೂ ಕೆಲವು ಅಂಶಗಳು ಸೋರಿಕೆಯಾಗಿವೆ. ಇದರ ಅನ್ವಯ ಒಟ್ಟು 6 ಕೋಟಿ ಕನ್ನಡಿಗರಲ್ಲಿ ಯಾವ ಜಾತಿ ಹಾಗೂ ಧರ್ಮದವರು ಎಷ್ಟು ಮಂದಿ ಇದ್ದಾರೆ ಎಂಬ ಅಂಕಿ-ಸಂಖ್ಯೆಯೂ ಬಹಿರಂಗಗೊಂಡಿದೆ. ಇದರ ಅನ್ವಯ ಪರಿಶಿಷ್ಟ ಜಾತಿ (ಎಸ್‌ಸಿ – Scheduled Castes) ಸಮುದಾಯದವರು ಅತಿ ಹೆಚ್ಚು (1.08 ಕೋಟಿ) ಇದ್ದರೆ, ನಂತರದ ಸ್ಥಾನದಲ್ಲಿ ಮುಸ್ಲಿಂ ಸಮುದಾಯದವರು (Muslim Community) ಇದ್ದಾರೆ. ಲಿಂಗಾಯತ (Lingayat Community) ಮತ್ತು ಒಕ್ಕಲಿಗ ಸಮುದಾಯದವರು (Okkaliga Community) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಒಟ್ಟು 200 ಪುಟ ಹಾಗೂ 48 ಸಂಪುಟಗಳ ವರದಿಯನ್ನು ಹಸ್ತಾಂತರ ಮಾಡಿದ್ದಾರೆ. ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ (ಅಹಿಂದ ವರ್ಗ) ಜನಸಂಖ್ಯೆಯೇ ಅಧಿಕವಾಗಿರುವುದು ಈ ವರದಿಯ ಸಾರವಾಗಿದೆ. ಹೀಗಾಗಿ ಇದು ರಾಜಕೀಯವಾಗಿ ಇನ್ನು ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅತಿ ಹಿಂದುಳಿದ ಸಮುದಾಯ ಯಾವುದು?

ಒಟ್ಟು 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆ 5.98 ಕೋಟಿ. ಈ ಪೈಕಿ ಅಹಿಂದ ವರ್ಗದವರು 3.96 ಕೋಟಿಯಷ್ಟಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರರ ಸಂಖ್ಯೆ 1.87 ಕೋಟಿಯಷ್ಟಿದೆ.

192 ಹೊಸ ಜಾತಿ ದಾಖಲು

ಒಟ್ಟು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ, ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ. ಒಟ್ಟು 816 ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ. ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನು ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ.

ಜಾತಿವಾರು ಜನಸಂಖ್ಯೆಯ ವಿವರ

 • ಪರಿಶಿಷ್ಟ ಜಾತಿ(ಎಸ್’ಸಿ)- 1.08 ಕೋಟಿ
 • ಪರಿಶಿಷ್ಟ ಪಂಗಡ (ಎಸ್‌ಟಿ)- 40.45 ಲಕ್ಷ
 • ಮುಸ್ಲಿಮರು- 70 ಲಕ್ಷ
 • ಲಿಂಗಾಯತ- 65 ಲಕ್ಷ
 • ಒಕ್ಕಲಿಗ- 60 ಲಕ್ಷ
 • ಕುರುಬರು- 45 ಲಕ್ಷ
 • ಈಡಿಗ- 15 ಲಕ್ಷ
 • ವಿಶ್ವಕರ್ಮ- 15
 • ಬೆಸ್ತ- 15 ಲಕ್ಷ
 • ಬ್ರಾಹ್ಮಣ- 14 ಲಕ್ಷ
 • ಗೊಲ್ಲ (ಯಾದವ) – 10 ಲಕ್ಷ
 • ಮಡಿವಾಳ ಸಮಾಜ – 6
 • ಅರೆ ಅಲೆಮಾರಿ – 6 ಲಕ್ಷ
 • ಕುಂಬಾರ – 5 ಲಕ್ಷ
 • ಸವಿತಾ ಸಮಾಜ – 5 ಲಕ್ಷ

ವರದಿಯ ಸಾರಾಂಶ ಏನು?

 • ಒಟ್ಟು 5.98 ಕೋಟಿ ಮಂದಿಯ ಸಮೀಕ್ಷೆ
 • ಸಮೀಕ್ಷೆಯಿಂದ ಹೊರಗುಳಿದವರ ಪ್ರಮಾಣ 32 ಲಕ್ಷ
 • ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ
 • ಕರ್ನಾಟಕದಲ್ಲಿ ದಲಿತರ ಪ್ರಮಾಣವೇ ಹೆಚ್ಚು
 • ಕುರುಬರೇ ಅತ್ಯಂತ ಹಿಂದುಳಿದ ವರ್ಗ
 • ಸಮೀಕ್ಷೆಗೊಳಪಟ್ಟ ಜಾತಿಗಳ ಸಂಖ್ಯೆ 1,351
 • ಹೊಸದಾಗಿ ದಾಖಲಾದ ಜಾತಿಗಳ ಸಂಖ್ಯೆ 192
 • ಸರ್ಕಾರ ಗುರುತಿಸಿರುವ ಇತರೆ ಹಿಂದುಳಿದ ಜಾತಿಗಳು‌ (ಒಬಿಸಿ) 816

ಇದನ್ನೂ ಓದಿ: Sedition case: ರಾಜ್ಯಪಾಲರ ಅಂಗಳಕ್ಕೆ ‘ಪಾಕಿಸ್ತಾನ್‌ ಜಿಂದಾಬಾದ್‌’ ಕದನ; ಸರ್ಕಾರ ವಜಾಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು ಜಿಲ್ಲಾಧಿಕಾರಿ ಸುಪರ್ದಿಗೆ ವರದಿ

ಜಯಪ್ರಕಾಶ್ ಹೆಗ್ಡೆ ನೀಡಿದ ವರದಿಯನ್ನು ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್ ಸುಪರ್ದಿಗೆ ರಾಜ್ಯ ಸರ್ಕಾರ ನೀಡಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ವರದಿಯನ್ನು ಕೊಂಡೊಯ್ದಿದ್ದಾರೆ.

Continue Reading

ರಾಜಕೀಯ

Anna Bhagya: ಪಡಿತರ ವಿತರಕರಿಗೆ ಗುಡ್‌ ನ್ಯೂಸ್‌; ಪ್ರತಿ ಕೆಜಿ ಅಕ್ಕಿಗೆ ಒಂದೂವರೆ ರೂ. ಕಮಿಷನ್ ಹೆಚ್ಚಳವೆಂದ ಸಿದ್ದರಾಮಯ್ಯ

Anna Bhagya: ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂಪಾಯಿ ಕೊಡುತ್ತೇವೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಆದರೂ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ದೂರಿದ್ದಾರೆ.

VISTARANEWS.COM


on

CM Siddaramaiah announces Rs 1.5 per kg hike commission for rice to ration dealers
Koo

ಬೆಂಗಳೂರು: ನರೇಂದ್ರ ಮೋದಿಯವರು (PM Narendra Modi) ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳಾಗಿವೆ. ಬಿಜೆಪಿಯು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ. ಇನ್ನು ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ (Anna Bhagya) ಕಮಿಷನ್ ಮೊತ್ತವನ್ನು ಒಂದೂವರೆ ರೂಪಾಯಿಗೆ ಹೆಚ್ಚಳಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಹತ್ವದ ಘೋಷಣೆ ಮಾಡಿದರು.

ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅನ್ನಭಾಗ್ಯ ಸೇರಿ ಬಡವರು, ಮಧ್ಯಮ ವರ್ಗದವರಿಗೆ ಕೊಟ್ಟ ಭಾಗ್ಯಗಳನ್ನು ಆಡಿಕೊಂಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದುರಂತ. ಇಂಥ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ, ಅನ್ನದಾತರು ದುಡಿದರೆ ದೇಶ ಬದುಕುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅಕ್ಕಿ ಕೊಡಲಿಲ್ಲ

ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂಪಾಯಿ ಕೊಡುತ್ತೇವೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಆದರೂ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ದೂರಿದರು.

ಬಿಜೆಪಿ ಬಡವರ, ದುಡಿಯುವವರ, ಶ್ರಮಿಕರ ಪರವಾಗಿ ಇದ್ದಿದ್ದರೆ, ಈ ನಾಡಿನ ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಇದ್ದಿದ್ದರೆ ಅಕ್ಕಿ ಕೊಡುತ್ತಿತ್ತು. ಮೋದಿಗೆ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಹಸಿವು ಮುಕ್ತ ದೇಶ ಬೇಕಾಗಿಲ್ಲ. ಆದ್ದರಿಂದ ನಿಜವಾಗೊ ನಿಮ್ಮ ಪರವಾಗಿ ಇರುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಹೃದಯದ ಮಾತು ಕೇಳಿ ಮತ ಚಲಾಯಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಹಸಿವಿನ ಜತೆಗೆ ದೇಶವನ್ನು ಅನಕ್ಷರತೆ, ಅನಾರೋಗ್ಯ ಮತ್ತು ನಿರುದ್ಯೋಗ ಮುಕ್ತ ಮಾಡುವುದೇ ನಮ್ಮ ಕಾಂಗ್ರೆಸ್ ಪಕ್ಷದ ಗುರಿ. ನಮ್ಮ ಹಿಂದಿನ ಸರ್ಕಾರದ ಕಾಲದಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಕಾರ್ಯಕ್ರಮಗಳೆಲ್ಲವೂ ಈ ಗುರಿಯೆಡೆಗೆ ಕರ್ನಾಟಕವನ್ನು ಕೊಂಡೊಯ್ಯುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಮ್ಮ ಈಗಿನ ಸರ್ಕಾರದ ಗ್ಯಾರಂಟಿ ಯೋಜನೆಗಳ ಗುರಿ ಕೂಡಾ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತ ಮಾಡುವುದೇ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಸವಣ್ಣನ ಕಾಯಕ-ದಾಸೋಹದ ಪರಿಕಲ್ಪನೆ ಅನ್ನಭಾಗ್ಯಕ್ಕೆ ಪ್ರೇರಣೆ

ನಮ್ಮ ಯೋಜನೆಗಳಲ್ಲಿ ರಾಜಕೀಯ ಲಾಭದ ಉದ್ದೇಶ ಇಲ್ಲ, ನಮ್ಮ ಯೋಜನೆಗಳ ಉದ್ದೇಶ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಾಗಿದೆ. ರಾಜ್ಯದ ಯಾವುದೇ ಮನೆಯಲ್ಲಿ ಹಸಿವು, ಅನಾರೋಗ್ಯ, ಅನಕ್ಷರತೆ ಮತ್ತು ನಿರುದ್ಯೋಗದಿಂದ ಬಳಲುವರು ಇರದಂತೆ ನೋಡಿಕೊಳ್ಳುವುದೇ ನಮ್ಮ ಆಶಯ ಮತ್ತು ಬದ್ಧತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಘಳಿಗೆಯಲ್ಲಯೇ ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತಂದೆ. 2013ರ ಬಸವ ಜಯಂತಿಯ ದಿನವೇ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆ ಬಸವಣ್ಣನವರ ದಾಸೋಹದಿಂದ ಪ್ರೇರಿತವಾಗಿರುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ಇದನ್ನೂ ಓದಿ: Caste Census: ಬಹು ವಿವಾದಿತ ಜಾತಿ ಗಣತಿ ವರದಿ ಸ್ವೀಕರಿಸಿದ ಸಿದ್ದರಾಮಯ್ಯ; ಜೇನುಗೂಡಿಗೆ ಕೈ ಹಾಕಿತೇ ಸರ್ಕಾರ?

ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Continue Reading
Advertisement
Summer Shopping 2024
ಫ್ಯಾಷನ್12 mins ago

Summer Shopping 2024: ಮಾಲ್‌ಗಳಲ್ಲಿ ಸಮ್ಮರ್‌ಗೂ ಮುನ್ನವೇ ಶುರುವಾಯ್ತು ಸೀಸನ್‌ ಶಾಪಿಂಗ್‌

Caste Census siddalinga Swameeji
ರಾಜಕೀಯ21 mins ago

Caste Census : ಜಾತಿ ಗಣತಿ ವರದಿಗೆ ಭಾರಿ ಅಪಸ್ವರ; ಅವೈಜ್ಞಾನಿಕ ಎಂದ ಸಿದ್ದಗಂಗಾ ಶ್ರೀ

Dry weather likely to prevail over the State
ಮಳೆ21 mins ago

Karnataka Weather : ಬಿಸಿಲ ತಾಪಕ್ಕೆ ಕರಾವಳಿ, ಉತ್ತರ ಕರ್ನಾಟಕ ತತ್ತರ

Population revealed in caste census report SCs first and Muslims second place
ಪ್ರಮುಖ ಸುದ್ದಿ25 mins ago

Caste Census report: ಜಾತಿಗಣತಿ ವರದಿಯಲ್ಲಿ ಜನಸಂಖ್ಯೆ ಬಹಿರಂಗ; ಎಸ್ಸಿಗಳು ಫಸ್ಟ್‌, 2ನೇ ಸ್ಥಾನದಲ್ಲಿ ಮುಸ್ಲಿಮರು!

Missing youth found burnt in field
ರಾಯಚೂರು56 mins ago

Murder Case : ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

Road Accident honnavara
ಉತ್ತರ ಕನ್ನಡ1 hour ago

Road Accident: ಸ್ಕೂಟಿಗೆ ಬಸ್‌ ಡಿಕ್ಕಿ; ಹೆದ್ದಾರಿಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ತಾಯಿ, ಮಗಳು

Leaked video Dhanush and Rashmika Mandanna D 51
ಸ್ಯಾಂಡಲ್ ವುಡ್1 hour ago

Rashmika Mandanna: ಧನುಷ್‌ -ರಶ್ಮಿಕಾ ಅಭಿನಯದ ಸಿನಿಮಾವೊಂದರ ದೃಶ್ಯ ಲೀಕ್‌!

bmtc
ಉದ್ಯೋಗ1 hour ago

Job Alert: ದ್ವಿತೀಯ ಪಿಯುಸಿ ಪಾಸ್‌ ಆದವರಿಗೆ ಗುಡ್‌ನ್ಯೂಸ್‌; 2,500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ

IND vs ENG
ಕ್ರೀಡೆ1 hour ago

IND vs ENG: ಅಂತಿಮ ಟೆಸ್ಟ್​ಗೆ ಭಾರತ ತಂಡ ಪ್ರಕಟ; ರಾಹುಲ್​​ ಔಟ್​, ಬುಮ್ರಾ ಇನ್​

CM Siddaramaiah announces Rs 1.5 per kg hike commission for rice to ration dealers
ರಾಜಕೀಯ1 hour ago

Anna Bhagya: ಪಡಿತರ ವಿತರಕರಿಗೆ ಗುಡ್‌ ನ್ಯೂಸ್‌; ಪ್ರತಿ ಕೆಜಿ ಅಕ್ಕಿಗೆ ಒಂದೂವರೆ ರೂ. ಕಮಿಷನ್ ಹೆಚ್ಚಳವೆಂದ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ13 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌