Site icon Vistara News

Auto fare | ಓಲಾ, ಉಬರ್ ಜತೆ ಸಾರಿಗೆ ಇಲಾಖೆ ಸಭೆ ಬರೀ ಕಾಟಾಚಾರ; ನಿರ್ಧಾರವಾಗದ ಆಟೋ ಕನಿಷ್ಠ ದರ

Auto fare

ಬೆಂಗಳೂರು: ಆಟೋಗಳಲ್ಲಿ ಬೇಕಾಬಿಟ್ಟಿ ದರ ವಸೂಲಿಗೆ(Auto fare) ಕಡಿವಾಣ ಹಾಕಲು ನಗರದ ಎಂ.ಎಸ್.ಬಿಲ್ಡಿಂಗ್‌‌ನ ಸಾರಿಗೆ ಇಲಾಖೆ ಕಚೇರಿಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ವಿ.ಪ್ರಸಾದ್, ಆಯುಕ್ತ ಟಿ.ಎಚ್‌.ಎಂ.ಕುಮಾರ್‌ ನೇತೃತ್ವದಲ್ಲಿ ಓಲಾ, ಉಬರ್ ಹಾಗೂ ರ‍್ಯಾಪಿಡೊ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಶನಿವಾರ ನಡೆಯಿತು. ಆದರೆ, ಸಭೆಯಲ್ಲಿ ದರ ನಿಗದಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ.

15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಅಗ್ರಿಗೇಟರ್ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ, ನ.7ರೊಳಗೆ ಸಭೆ ನಡೆಸಿ ವರದಿ ನೀಡುವಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್‌ ಸೂಚಿಸಿತ್ತು. ಇದರಿಂದ ಕಾಟಾಚಾರಕ್ಕೆ ಸಾರಿಗೆ ಇಲಾಖೆ ಸಭೆ ನಡೆಸಿದಂತಿದ್ದು, ದರ ನಿಗದಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಟ್ಟು 16 ಯೂನಿಯನ್‌ಗಳ ಪೈಕಿ ಕೇವಲ ಎರಡು ಸಾರಿಗೆ ಸೇವಾ ಯೂನಿಯನ್‌ಗಳು ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದು ಕಂಡುಬಂತು.

ಇದನ್ನ ೂ ಓದಿ | SSC Recruitment 2022| ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಏಕೆ? ಕನ್ನಡ‌, ಪ್ರಾದೇಶಿಕ ಭಾಷೆಗಳನ್ನು ಮುಗಿಸುವ ಹುನ್ನಾರ ಎಂದ HDK

ಬೆಂಗಳೂರು ನಗರ ಜಿಲ್ಲಾಧಿಕಾರಿ 2 ಕಿ.ಮೀ.ಗೆ ಈಗಾಗಲೇ 30 ರೂಪಾಯಿ ನಿಗದಿ ಮಾಡಿದ್ದಾರೆ. ಆದರೆ ಅಗ್ರಿಗೇಟರ್ ಆ್ಯಪ್‌ ಕಂಪನಿಗಳು ಶೇ.30 ದರ ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿದಿವೆ. ಆದರೆ ಇದಕ್ಕೆ ಸಾರಿಗೆ ಅಧಿಕಾರಿಗಳು ನಮಗೆ ಈ ಬಗ್ಗೆ ಯಾವುದೇ ಮನವಿ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ಕಂಪನಿಗಳು ನಾವು ಈಗಾಗಲೇ ಇ-ಮೇಲ್‌ನಲ್ಲಿ ಅಡಿಷನಲ್ ಕಮಿಷನರ್ ಹೇಮಂತ್ ಕುಮಾರ್‌ಗೆ ಸಂದೇಶ ಕಳುಹಿಸಿದ್ದೇವೆ ಎಂದು ತಿಳಿಸಿವೆ. ಇದಕ್ಕೆ ನನಗೆ ಯಾವುದೇ ‌ಮಾಹಿತಿ ಬಂದಿಲ್ಲ ಎಂದು ಆರ್‌ಟಿಒ ಕಮಿಷನರ್ ಟಿ.ಎಚ್‌.ಎಂ.ಕುಮಾರ್‌ ಯಾವುದೇ ಮನವಿಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಿಲಿಲ್ಲ. ನವೆಂಬರ್ 7ರಂದು ಹೈ ಕೋರ್ಟ್‌ನಲ್ಲಿ ದರ ನಿಗದಿ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ.

ಸಭೆಯ ನಂತರ ಆಟೋ ರಿಕ್ಷಾ ಚಾಲಕರ ಪರ ವಕೀಲ ಅಮೃತೇಶ್ ಮಾತನಾಡಿ, ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಯಾವುದೇ ದರ ನಿಗದಿ ಮಾಡದೇ ಸಭೆ ಮುಗಿಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಓಲಾ, ಉಬರ್ ಕಂಪನಿಗಳು ಹಗಲು ದರೋಡೆ ಮಾಡುತ್ತಿವೆ. ಸಭೆಯಲ್ಲಿ ನಾವು ವಿವರವಾಗಿ ನಮ್ಮ ಬೇಡಿಕೆಗಳನ್ನು ತಿಳಿಸಿದ್ದೇವೆ. ಆದರೂ ಕಾಟಾಚಾರಕ್ಕೆ ಸಭೆ ಮುಗಿಸಿದ್ದಾರೆ. ಯಾವುದೇ ಅಂತಿಮ ನಿರ್ಧಾರಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಬಂದಿಲ್ಲ. ಸಾರಿಗೆ ಇಲಾಖೆ ಅವರಿಗೆ ಲೈಸೆನ್ಸ್ ನೀಡಿಲ್ಲ. ಯಾವುದೇ ಆಟೋ ಯೂನಿಯನ್‌ಗಳನ್ನು ಸಭೆಗೆ ಕರೆದಿಲ್ಲ. ಕೇವಲ ಆಪ್ ಆಧಾರಿತ ಕಂಪನಿಗಳನ್ನು ಮಾತ್ರ ಮೀಟಿಂಗ್‌ಗೆ ಕರೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನಿಷ್ಠ ದರ 100 ರೂಪಾಯಿ ನಿಗದಿ ಮಾಡಲು ಮನವಿ
ಜಿಎಸ್‌ಟಿ ಜತೆಗೆ ಹೊಸ ದರ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ. ಸದ್ಯ 2 ಕಿ.ಮೀ. ಗೆ ಸಾರಿಗೆ ಇಲಾಖೆ 30 ರೂಪಾಯಿ ನಿಗದಿ ಮಾಡಿದೆ. ನಂತರದ ಪ್ರತಿ ಕಿ.ಮೀ.ಗೆ 15 ರೂಪಾಯಿ ಇದೆ. ಆದರೆ ಓಲಾ, ಉಬರ್ ಕಂಪನಿಗಳು ಕನಿಷ್ಠ ದರವಾಗಿ 100 ರೂಪಾಯಿ ವಸೂಲಿ ಮಾಡುತ್ತಿವೆ. ಅದರಂತೆ 100 ರೂಪಾಯಿ ನಿಗದಿ ಮಾಡಲು ಕಂಪನಿಗಳು ಸಭೆಯಲ್ಲಿ ಮನವಿ ಮಾಡಿವೆ. ಹೊಸ ದರ ಪರಿಷ್ಕರಣೆಯಲ್ಲಿ ಕನಿಷ್ಠ ದರ ಏರಿಕೆ ಮಾಡುವ ಸಾಧ್ಯತೆ ಇದ್ದು, 30 ರೂ.ಗಳಿಂದ 45 ರೂ.ಗಳಿಗೆ ಏರಿಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ | Vande Bharat Express | ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಮತ್ತೆ ಅಪಘಾತ; ಹಸು, ಎಮ್ಮೆ ಆಯ್ತು, ಈ ಸಲ ಗೂಳಿಗೆ ಡಿಕ್ಕಿ

Exit mobile version