Site icon Vistara News

Uber Auto Fare : ಟಿನ್‌ ಫ್ಯಾಕ್ಟರಿಯಿಂದ ಉಬರ್ ಆಟೋ ಹತ್ತಿದವನಿಗೆ 1 ಕೋಟಿ ರೂ. ಚಾರ್ಜ್‌!

uber auto fare

ಬೆಂಗಳೂರು: ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಆ ವ್ಯಕ್ತಿ ತುರ್ತು ಕೆಲಸಕ್ಕೆಂದು ಉಬರ್‌ ಆಟೋ (Uber Auto) ಬುಕ್‌ ಮಾಡಿದ್ದರು. ಟಿನ್‌ ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲಕ್ಕೆ ಇಳಿದ ಪ್ರಯಾಣಿಕ (Uber Auto Fare) ತಬ್ಬಿಬ್ಬಾಗಿದ್ದರು. ಯಾಕೆಂದರೆ ಟಿನ್‌ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಜಸ್ಟ್‌ 15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 500-1000 ರೂ. ಅಲ್ಲ ಬದಲಿಗೆ 1 ಕೋಟಿ ರೂ. (Uber Auto Fare) ತೋರಿಸಿತ್ತು.

ಆ್ಯಪ್ ಆಧಾರಿತ ಉಬರ್‌ ಆಟೋ ಬುಕ್‌ ಮಾಡಿ ಪ್ರಯಾಣಿಸಿದ ಆಂಧ್ರ ಪ್ರಯಾಣಿಕ ನಿಜಕ್ಕೂ ಕಕ್ಕಾಬಿಕ್ಕಿಯಾಗಿದ್ದರು. ಕೆಲಸ ನಿಮಿತ್ತ ಹೊರಹೋಗಲು ಉಬರ್ ಆಟೋ ಬುಕ್‌ ಮಾಡಿ ಟಿನ್‌ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲದಲ್ಲಿ ಬಂದು ಇಳಿದಿದ್ದರು. ಆಟೋ ಚಾರ್ಜ್‌ ಕೊಡೊಣಾ ಎಂದು ಪಾಕೆಟ್‌ನಿಂದ ಪರ್ಸ್‌ ತೆಗೆದು ಮೊಬೈಲ್‌ ನೋಡಿದಾಗ ಶಾಕ್‌ವೊಂದು ಕಾದಿತ್ತು.

ಪ್ರಯಾಣಿಕನಿಗೆ ಶಾಕ್‌

ಉಬರ್‌ ಆ್ಯಪ್‌ನಲ್ಲಿ ತೋರಿಸಿದ ಆಟೋ ಚಾರ್ಜ್‌ ನೋಡಿ, ಒಂದು ಕ್ಷಣ ತಲೆ ತಿರುಗುವಂತೆ ಮಾಡಿತ್ತು. ಯಾಕಂದರೆ ಟಿನ್‌ ಫ್ಯಾಕ್ಟರಿಯಿಂದ ಕೋರಮಂಗಲಗೆ 1,03,11,055 ರೂ. ಆಟೋ ಚಾರ್ಜ್ ತೋರಿತ್ತು. 207 ರೂ. ಆಗಿದ್ದ ಜಾಗದಲ್ಲಿ ಕೋಟಿ ರೂ. ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದ.

ಸದ್ಯ ಕೋಟಿ ರೂ. ಆಟೋ ಚಾರ್ಜ್‌ ತೋರಿಸುತ್ತಿದ್ದ ಉಬರ್ ಆ್ಯಪ್‌ನ ವಿಡಿಯೊ ಮಾಡಿ ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಂತಹ ಆ್ಯಪ್ ಆಧಾರಿತ ಆಟೋಗಳನ್ನು ಬಳಕೆ ಮಾಡದಂತೆ ಮನವಿ ಮಾಡಿದ್ದಾರೆ. ಕೂಡಲೇ ಇಂತಹ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಯಾಣಿಕರಿಂದ ಕಂಪೆನಿಗಳು ಹೇಗೆಲ್ಲ ಸುಲಿಗೆ ಮಾಡುತ್ತವೆ. 100-200ಪ್ರಯಾಣದ ಶುಲ್ಕಕ್ಕೆ 1 ಕೋಟಿ ರೂ. ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version