Site icon Vistara News

V. Somanna: ಅಶೋಕ್‌ ಜತೆ ಮುನಿಸಿಕೊಂಡು ಅರ್ಧಕ್ಕೇ ಬಿಜೆಪಿ ರಥ ಇಳಿದ ವಿ. ಸೋಮಣ್ಣ: ಪಕ್ಷ ಬಿಡೋದು ಪಕ್ಕಾ?

v-somanna-left-rath-yatre-in-middle-way

#image_title

ಬೆಂಗಳೂರು: ವಿಜಯ ಸಂಕಲ್ಪ ಯಾತ್ರೆಯ ರಥ ಅರ್ಧ ದಾರಿಯಲ್ಲಿರುವಾಗಲೇ ಸಚಿವ ಆರ್.‌ ಅಶೊಕ್‌ ಜತೆಗೆ ಮುನಿಸಿಕೊಂಡ ಸಚಿವ ವಿ. ಸೋಮಣ್ಣ (V. Somanna) ರಥ ಇಳಿದು ಹೋಗಿದ್ದು, ಪಕ್ಷ ಬಿಡುವ ಮಾತುಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸ್ವತಃ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈ ನಡುವೆ ಸೋಮವಾರ ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನಕ್ಕೆ ಆಗಮಿಸಿ, ಪಕ್ಷದಲ್ಲಿ ಮುಂದುವರಿಯುವ ಸೂಚನೆ ನೀಡಿದ್ದರು.

ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ್ದ ಆರ್‌. ಅಶೋಕ್‌, ಸೋಮಣ್ಣ ಯಾವುದೇ ಕಾರಣಕ್ಕೆ ಪಕ್ಷ ಬಿಡುವುದಿಲ್ಲ ಎಂದಿದ್ದರು. ಸೋಮಣ್ಣ ಸಹ ಪ್ರತಿಕ್ರಿಯೆ ನೀಡಿ, ಊಹಾಪೋಹಗಳಿಗೆಲ್ಲ ಉತ್ತರ ನೀಡುವುದಿಲ್ಲ ಎಂದಿದ್ದರು.

ನಾಯಂಡಹಳ್ಳಿವರೆಗೂ ರಥಯಾತ್ರೆ ಸಾಗುತ್ತದೆ ಎಂದು ಯೋಜನೆ ಮಾಡಲಾಗಿತ್ತು. ರಥವನ್ನು ಏರಿದ ಅಶೋಕ್‌, ನಾಗರಭಾವಿಯಲ್ಲೇ ರಥವನ್ನು ಇಳಿದು ಹೊರಟರು. ನಾಯಂಡಹಳ್ಳಿವರೆಗೂ ಆಗಮಿಸುವುದಿಲ್ಲ ಎಂದು ಅಶೋಕ್‌ ಹೇಳಿದ್ದರಿಂದ ಸೋಮಣ್ಣ ಸಹ ಬೇಸರಗೊಂಡರು.

ತಮ್ಮದೇ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿದ್ದ ರಥಯಾತ್ರೆಯಿಂದ ಕೆಳಗಿಳಿದು ಸೋಮಣ್ಣ ಸಹ ತೆರಳಿದರು. ಈ ಮೂಲಕ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದೆ.

ಇದನ್ನೂ ಓದಿ: Vijay Sankalpa Yatre: ಸೋಮಣ್ಣ ಇಡೀ ಕರ್ನಾಟಕದ ಫಿಗರ್: ಎರಡು ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ ಎಂದ ಆರ್‌. ಅಶೋಕ್

ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎನ್ನುವುದು ಒಂದೆಡೆಯಾದರೆ, ಯಡಿಯೂರಪ್ಪ ಕಾರಣಕ್ಕೆ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಮತ್ತೊಂದು ಬೇಸರವೂ ಸೋಮಣ್ಣಗೆ ಇದೆ ಎನ್ನಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಈ ಭಾಗದಲ್ಲಿ ಪ್ರಬಲ ಲಿಂಗಾಯತ ನಾಯಕರು ಇಲ್ಲದಿರುವುದರಿಂದ, ಕಾಂಗ್ರೆಸ್‌ಗೆ ಸೆಳೆಲು ಸಿದ್ದರಾಮಯ್ಯ ಪ್ರಾಥಮಿಕ ಮಾತುಕತೆ ನಡೆಸಿದ್ದಾರ ಎನ್ನಲಾಗಿದೆ.

ಮುಂದಿನ ವಾರದಲ್ಲಿ ಸಿದ್ದ್ರಾಮಯ್ಯ ಅವರನ್ನು ಸೋಮಣ್ಣ ಬೇಟಿಯಾಗಿ ಅಂತಿಮ ಸುತ್ತಿನ ಮಾತುಕತೆ ನಡೆಸಿ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Exit mobile version