ಬೆಂಗಳೂರು: ಇಂಥದೊಂದು ವಿಚಿತ್ರ ದೂರು ಬೆಂಗಳೂರು ಪೊಲೀಸರಿಗೆ ಬಂದಿದೆ. ಅದೂ ದೂರುದಾರರು ಟ್ವೀಟ್ ಮಾಡಿ ಬೆಂಗಳೂರು ಪೊಲೀಸರ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಎದುರು ಮನೆಯವರು ಸಾಕಿರುವ ಹುಂಜ ಮತ್ತು ಬಾತುಕೋಳಿಗಳು ನಿತ್ಯ ಕೂಗುವುದರಿಂದ ಡಿಸ್ಟರ್ಬ್ ಆಗುತ್ತಿದೆ. ಅದು ಪ್ರತಿದಿನ ಕೂಗುವುದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ. ನಮ್ಮ ಮನೆಯಲ್ಲಿರುವ ಎರಡು ವರ್ಷದ ಮಗು ನಿದ್ದೆ ಮಾಡಲು ಸಾಧ್ಯವಾಗಗುತ್ತಿಲ್ಲ ಎಂದು ಟ್ವಿಟ್ಟರ್ ಮೂಲಕ ಬೆಂಗಳೂರು ಪೊಲೀಸರಲ್ಲಿ ನೆಮೊ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಮನವಿ ಮಾಡಲಾಗಿದೆ.
ಜತೆಗೆ ಹುಂಜ ಕೂಗುವ ವಿಡಿಯೋ ಕೂಡ ಅಪ್ಲೋಡ್ ಮಾಡಿ ಟ್ಯಾಗ್ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಂಡು ಹುಂಜ ಮತ್ತು ಕೋಳಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ. ಇದು ಜೆಪಿ ನಗರ 8ನೇ ಹಂತದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಎಂದು ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ | Viral news | ಮಹಾರಾಷ್ಟ್ರದಲ್ಲಿ ಬೆಡ್‌ರೂಂ, ತೆಲಂಗಾಣದಲ್ಲಿ ಕಿಚನ್! ಎರಡು ರಾಜ್ಯದಲ್ಲಿ ಒಂದೇ ಮನೆ!