Site icon Vistara News

Viral video: ಮಹಿಳಾ‌ ಪ್ಯಾಸೆಂಜರ್ ಜೊತೆ ರೈಲ್ವೆ ಟಿಟಿ ಅನುಚಿತ ವರ್ತನೆ, ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು

tt

ಬೆಂಗಳೂರು: ರೈಲಿನಲ್ಲಿ ಸಂಚರಿಸುತ್ತಿದ್ದ ಮಹಿಳಾ‌ ಪ್ಯಾಸೆಂಜರ್ ಒಬ್ಬರ ಜೊತೆಗೆ ರೈಲ್ವೆ ಟಿಕೆಟ್‌ ಕಲೆಕ್ಟರ್‌ ಅನುಚಿತವಾಗಿ ವರ್ತಿಸಿದ ಹಾಗೂ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೆ.ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗಿದೆ. ಪ್ರಯಾಣಿಕ ಮಹಿಳೆ ಟಿಕೇಟ್ ತೋರಿಸುವುದು ತಡವಾಗಿದ್ದಕ್ಕೆ ಟಿಟಿ ಆಕೆಯನ್ನು ದಬಾಯಿಸಿ ಮೈಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಫ್ಲಾಟ್‌ಫಾರಂನಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಅಕ್ಕಪಕ್ಕದವರು ವಿಡಿಯೋ ಮಾಡಿದ್ದಾರೆ. ಪ್ರಯಾಣಿಕರು ಟಿಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಕೆ.ಆರ್ ಪುರಂ ಹಾಗೂ ರೈಲ್ವೆ ಪೊಲೀಸರಿಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಕರೀಷ್ಮಾ ಬೆಹರಾ ಎಂಬಾಕೆ ಟ್ವೀಟ್‌ ಮಾಡಿದ್ದು, ರೈಲ್ವೆ ಮಿನಿಸ್ಟರ್ ಹಾಗೂ ಸೆಂಟ್ರಲ್ ಮಿನಿಸ್ಟರ್‌ಗೆ ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೊ ತೋರಿಸಿ, ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಶಿಕ್ಷಕ ಬಂಧನ

Exit mobile version