Site icon Vistara News

Vision Group : ಕೈಗಾರಿಕೆ ಬೆಳವಣಿಗೆಗೆ ಸಲಹೆ ನೀಡಲು 9 ವಿಷನ್‌ ಗ್ರೂಪ್‌ ರಚನೆ; ಗಣ್ಯ ಉದ್ಯಮಿಗಳ ನೇಮಕ

Vision group

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ (Industrial development) ಒತ್ತು ನೀಡಿರುವ ಸರಕಾರವು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ (MB Patil) ಅವರ ಅಧ್ಯಕ್ಷತೆಯಲ್ಲಿ ಒಂಬತ್ತು ಉದ್ಯಮ ವಲಯಗಳಿಗೆ (9 Industrial divisions) ವಿಷನ್ ಗ್ರೂಪ್‌ಗಳನ್ನು (Vision Group) ರಚಿಸಿ, ಆದೇಶ ಹೊರಡಿಸಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ (Industry and Commerce department) ಪ್ರಧಾನ ಕಾರ್ಯದರ್ಶಿ ಇವುಗಳಿಗೆ ಉಪಾಧ್ಯಕ್ಷರಾಗಿದ್ದು, ಎಲ್ಲ ವಿಷನ್ ಗ್ರೂಪ್‌ಗಳಿಗೂ ಆಯಾ ವಲಯದ ಗಣ್ಯ ಉದ್ಯಮಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಸ್ಪಷ್ಟ ಗುರಿಗಳೊಂದಿಗೆ ವಿಷನ್ ಗ್ರೂಪ್ ಗಳನ್ನು ರಚಿಸಲಾಗುವುದು ಎಂದು ಹೇಳಿದ್ದ ಸರಕಾರವು ವೈಮಾಂತರಿಕ್ಷ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಫಾರ್ಮಸುಟಿಕಲ್ಸ್, ಕೋರ್ ಮ್ಯಾನಫ್ಯಾಕ್ಚರಿಂಗ್, ಆಟೋಮೋಟೀವ್/ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಜವಳಿ ಮತ್ತು ಹಸಿರು ಇಂಧನ ವಲಯಗಳಿಗೆ ಈ ಉಪಕ್ರಮವನ್ನು ಕೈಗೊಂಡಿದೆ.

ಈ ವಿಷನ್ ಗ್ರೂಪ್ ಗಳು ಉದ್ಯಮಗಳ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಗೆ ಅಗತ್ಯ ಮಾರ್ಗದರ್ಶನ ಮಾಡಲಿದ್ದು, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಶೋಧಿಸಲಿವೆ.

ವಿಷನ್ ಗ್ರೂಪ್‌ಗಳಿಗೆ ನೇಮಕವಾಗಿರುವ ಸದಸ್ಯರ ವಿವರ ಹೀಗಿದೆ

1. ವೈಮಾಂತರಿಕ್ಷ ಮತ್ತು ರಕ್ಷಣೆ

ಅಪ್ಪಾರಾವ್ ವೆಂಕಟ ಮಲ್ಲವರಪು (ಸೆಂಟಮ್ ಎಲೆಕ್ಟ್ರಾನಿಕ್ಸ್)
ಉದಯಂತ್ ಮಲ್ಹೋತ್ರ (ಡೈನಾಮಿಕ್ ಟೆಕ್ನಾಲಜೀಸ್)
ಎಚ್ ಜಿ ಚಂದ್ರಶೇಖರ್ (ಸಾಸ್ಮೋಸ್)
ಅಶ್ವನಿ ಭಾರ್ಗವ (ಬೋಯಿಂಗ್)
ಕೃತ್ತಿವಾಸ ಮುಖರ್ಜಿ (ಏರ್ ಬಸ್)
ಸಮಿತ್ ರಾಯ್ (ರೇಥಿಯಾನ್)
ಸಿ ಬಿ ಅನಂತಕೃಷ್ಣನ್ (ಎಚ್ಎಎಲ್).

2.ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್

ಜಿತೇಂದ್ರ ಛಡ್ಡಾ (ಗ್ಲೋಬಲ್ ಫೌಂಡ್ರೀಸ್)
ಸಂತೋಷ್ ಕುಮಾರ್ (ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌)
ರಮೇಶ್ ಕುನ್ಹಿಕಣ್ಣನ್ (ಕೇನ್ಸ್ ಟೆಕ್ನಾಲಜಿ)
ವಿನಯ್ ಶೆಣೈ (ಇನ್ಫೈನ್ ಆನ್)
ವೇಣು ನೂಗೂರಿ (ಹಿಟಾಚಿ ಎನರ್ಜಿ)
ಎಸ್ ಕೆ ಮೂರ್ತಿ (ಇಂಟೆಲ್)
ಚರಣ್ ಗುರುಮೂರ್ತಿ (ಟಾಟಾ ಸೆಮಿಕಂಡಕ್ಟರ್ಸ್)

3.ಆಟೋಮೋಟೀವ್/ಎಲೆಕ್ಟ್ರಿಕ್ ವೆಹಿಕಲ್ಸ್

ಗುರುಪ್ರಸಾದ್ ಮುದ್ಲಾಪುರ (ಬಾಶ್)
ಅರುಣ್ ಮಿತ್ತಲ್ (ಎಕ್ಸೈಡ್)
ಸುದೀಪ್ ದಳವಿ (ಟೊಯೋಟ)
ಕಮಲ್ ಬಾಲಿ (ವೋಲ್ವೊ)
ಸುಶಾಂತ್ ನಾಯಕ್ (ಟಾಟಾ ಮೋಟರ್ಸ್)

4.ಮಶೀನ್ ಟೂಲ್ಸ್ ಉದ್ಯಮ

ಸಂಜಯ್ ಕೌಲ್ (ಟಿಮ್ ಕೆನ್)
ಬಿ ಹರೀಶ್ (ಎಸಿಇ)
ಲಕ್ಷ್ಮೀಕಾಂತನ್ ಕೃಷ್ಣನ್ (ಟೇಗು ಟೆಕ್)
ಎ ವೆಂಕಟಕೃಷ್ಣನ್ (ಯೂಕೆನ್)
ತರಂಗ್ ವಿ ಪಾರೀಕ್ (ವೈಜಿ-1)

5.ಫಾರ್ಮಾಸುಟಿಕಲ್ಸ್ ಉದ್ಯಮ

ಜಿ ವಿ ಪ್ರಸಾದ್ (ರೆಡ್ಡಿ ಲ್ಯಾಬ್ಸ್)
ಸಿದ್ಧಾರ್ಥ ಮಿತ್ತಲ್ (ಬಯೋಕಾನ್)
ಸಮೀರ್ ಕೇತ್ರಪಾಲ್ (ಜ್ಯುಬಿಲಿಯೆಂಟ್ ಲೈಫ್ ಸೈನ್ಸಸ್)
ವಿಷ್ಣುಕಾಂತ ಭೂತದ (ಶಿಲ್ಪಾ)
ಉಮಾಂಗ್ ವೋಹ್ರ (ಸಿಪ್ಲಾ)
ದಿಲೀಪ್ ಸುರಾನ (ಮೈಕ್ರೋಲ್ಯಾಬ್ಸ್).

6.ಕೋರ್ ಮ್ಯಾನುಫ್ಯಾಕ್ಚರಿಂಗ್

ವಿನೋದ್ ನೋವಲ್ (ಜಿಂದಾಲ್)
ಕೆ.ಸಿ ಜಾನ್ವಾರ್ (ಅಲ್ಟ್ರಾ ಟೆಕ್)
ರಾಹುಲ್ ಕುಮಾರ್ (ಬಲ್ದೋಟ)
ಬಹಿರಜಿ ಘೋರ್ಪಡೆ (ಸ್ಮಿಯೋರ್)
ಆರ್‌ಬಿಎಂ ತ್ರಿಪಾಠಿ (ಜೆ ಕೆ ಸಿಮೆಂಟ್)

7.ಇಂಡಸ್ಟ್ರಿ 5.0

ಅಕ್ಷಯ್ ಸಿಂಘಾಲ್ (ಲಾಗ್ 9)
ಮಲ್ಲಿಕಾರ್ಜುನ್ ಸಂತಾನಕೃಷ್ಣನ್ (ಜಿ ಎಸ್ ಗ್ಲೋಬಲ್ ವೆಂಚರ್ಸ್)
ರೋಹನ್ ಗಣಪತಿ (ಬೆಲಾಟ್ರಿಕ್ಸ್)
ಅವೈಸ್ ಅಹಮದ್ (ಪಿಕ್ಸೆಲ್)
ಸೌವಿಕ್ ಸೇನಗುಪ್ತ (ಇನ್ಫ್ರಾ ಮಾರ್ಕೆಟ್)
ಗದಾಧರ ರೆಡ್ಡಿ (ನೋಪೋ ನ್ಯಾನೋ ಟೆಕ್ನಾಲಜೀಸ್)

8. ಜವಳಿ ಉದ್ಯಮ

ಪಂಕಜ್ ನಾರೂಲ (ಶಾಹಿ ಎಕ್ಸ್‌ಪೋರ್ಟ್‌)
ಗೌತಮ್ ಚಕ್ರವರ್ತಿ (ಗೋಕುಲ ದಾಸ್)
ವಿಶಾಖ್ ಕುಮಾರ್ (ಆದಿತ್ಯ ಬಿರ್ಲಾ ಮಧುರಾ ಎಫ್ & ಎಲ್)
ವಿ.ಎಸ್ ಗಣೇಶ್ (ಪೇಜ್ ಇಂಡಸ್ಟ್ರೀಸ್)
ಪುನೀತ್ ಲಾಲಭಾಯ್ (ಅರವಿಂದ್ ಮಿಲ್ಸ್)

9.ಹಸಿರು ಇಂಧನ ಉದ್ಯಮ

ಕಿಶೋರ್ ನಾಯರ್ (ಅವಾಡ ಎನರ್ಜಿ)
ವಿವೇಕ್ ಸಿಂಗ್ಲಾ (ರೆನ್ಯೂ ಪವರ್)
ಕೃಷ್ಣ ರೇವಂಕರ್ (ಎಂವೀ ಸೋಲಾರ್ ಸಿಸ್ಟಮ್ಸ್)
ಶರದ್ ಪುಂಗಾಲಿಯ (ಆ್ಯಮ್ ಪ್ಲಸ್ ಸೋಲಾರ್)
ಆಶಿಶ್ ಖನ್ನಾ (ಟಾಟಾ ಪವರ್ ಸೋಲಾರ್)

Exit mobile version