Site icon Vistara News

Vistara News Launch | ಕಾಯಕ ಯೋಗಿ ಪುರಸ್ಕಾರಕ್ಕೆ ಭಾಜನರಾದ ಉದ್ಯಮಿ ಜಯರಾಮ್​ ಕಿಮ್ಮನೆ

kayaka

ಬೆಂಗಳೂರು: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಗಾಲ್ಫ್ ರೆಸಾರ್ಟ್ ಆರಂಭಿಸಿ, ಇಂಟರ್ನ್ಯಾಷನಲ್ ಟ್ರಾವೆಲ್ ಅವಾರ್ಡ್ ಪಡೆದಿರುವ ಹೆಸರಾಂತ ಉದ್ಯಮಿ ಶ್ರೀ ಜಯರಾಮ್​ ಕಿಮ್ಮನೆ ಅವರಿಗೆ ವಿಸ್ತಾರ ನ್ಯೂಸ್​ ಬಳಗವು (Vistara News Launch) ” ಕಾಯಕ ಯೋಗಿ ಪ್ರಶಸ್ತಿ” ನೀಡಿ ಗೌರವಿಸಿದೆ.

ಅಡಕೆ ಕೃಷಿಕರಾಗಿ, ಕಾಫಿ ಪ್ಲಾಂಟರ್ ಆಗಿ ಮತ್ತು ಉದ್ಯಮಿಯಾಗಿ ಅಡಕೆಗೆ ಮೌಲ್ಯಯುತ ಬೆಲೆ ದೊರಕಿಸಿ ಕೊಡುವಲ್ಲಿ ಹಗಲಿರುಳೆನ್ನದೆ ಶ್ರಮಿಸಿದವರು. ಅಡಕೆ ವ್ಯಾಪಾರದ ಮೂಲಕ ಉದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಇವರು ಸ್ಥಾಪಿಸಿದ ಕೆಟಿಜಿ ಕಂಪನಿ ಇಂದು ಹೆಮ್ಮರವಾಗಿ ಬೆಳೆದಿದೆ.

ರಿಯಲ್ ಎಸ್ಟೇಟ್ ಕಂಪನಿಯಾಗಿರುವ ರಾಯಲ್ ನಂದಿ ರೆಸಾರ್ಟ್‌ಗೆ ಇವರು ನಿರ್ದೇಶಕರು. ಎಲ್‌ಐಸಿಯ ದಕ್ಷಿಣ ಭಾರತದ ಝೋನಲ್ ಬೋರ್ಡ್ ಮೆಂಬರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2000ರಿಂದ 2008ರವರೆಗೆ ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರಾಗಿ ಬ್ಯಾಂಕ್ ಉನ್ನತ ಮಟ್ಟಕ್ಕೇರಲು ಶ್ರಮಿಸಿರುವ ಶ್ರೀ ಜಯರಾಮ್‌ ಕಿಮ್ಮನೆ ಸಮಾಜಸೇವೆಯಲ್ಲೂ ಮುಂಚೂಣಿ ಮುಂದಾಳು. ಅರಬಿಂದೋ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿಯಾಗಿ ಜ್ಞಾನದೀಪ ಎಂಬ ಪ್ರತಿಷ್ಠಿತ ಸ್ಕೂಲ್ ನಡೆಸುತ್ತಿದ್ದಾರೆ. ಮಲೆನಾಡಿನ ಪ್ರಯೋಗ ಶೀಲ ಉದ್ಯಮಿ ಶ್ರೀ ಜಯರಾಮ್ ಕಿಮ್ಮನೆ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ |ವಿಸ್ತಾರ Money Guide | ಶೀಘ್ರದಲ್ಲಿ‌ ಎಲ್ಲರಿಗೂ ಏಕರೂಪದ ಐಟಿಆರ್‌ ಫಾರ್ಮ್ ?

Exit mobile version