Site icon Vistara News

Vistara News Polling Booth : ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌: ವಿನೂತನ ಪ್ರಯೋಗಕ್ಕೆ ಡಾ. ಮಂಜುನಾಥ್‌ ಚಾಲನೆ

vistara News polling Booth inaugurated

ಬೆಂಗಳೂರು: ಲೋಕಸಭಾ ಚುನಾವಣೆಯ ಕಾವೇರುತ್ತಿರುವ ಹೊತ್ತಿನಲ್ಲಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಮತ್ತು ಜನರ ನಾಡಿಮಿಡಿತ ಅರಿಯಲು ವಿಸ್ತಾರ ನ್ಯೂಸ್‌ (Vistara News) ಆರಂಭಿಸಿರುವ ಅತ್ಯಂತ ವಿನೂತನ ಹಾಗೂ ಮೊಟ್ಟಮೊದಲ ಪೋಲಿಂಗ್‌ ಬೂತ್‌ಗೆ (Vistara news polling booth) ಹೃದಯವಂತ ವೈದ್ಯರಾದ ಡಾ. ಸಿ.ಎನ್‌. ಮಂಜುನಾಥ್‌ (Dr CN Manjunath) ಅವರು ಸೋಮವಾರ ಬೆಳಗ್ಗೆ ಚಾಲನೆ ನೀಡಿದರು.

ಅತ್ಯಂತ ಕಡಿಮೆ ಅವಧಿಯಲ್ಲಿ ನಾಡಿನ ಜನರ ಪ್ರೀತಿಪಾತ್ರ ಟಿವಿ ಚಾನೆಲ್‌ ಆಗಿ ಜನಪ್ರಿಯತೆ ಪಡೆದಿರುವ ವಿಸ್ತಾರ ನ್ಯೂಸ್‌ನ ಈ ಅನ್ವೇಷಕ ಉಪಕ್ರಮವನ್ನು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿಕಟಪೂರ್ವ ನಿರ್ದೇಶಕರಾಗಿರುವ ಡಾ. ಸಿ.ಎನ್‌. ಮಂಜುನಾಥ್‌ ಅವರು ಭೇಷ್‌ ಎಂದು ಹಾಡಿಹೊಗಳಿದರು.

ಒಂದು ಮಾಧ್ಯಮವಾಗಿ ವಿಸ್ತಾರ ನಡೆಸುತ್ತಿರುವ ಪ್ರಯೋಗ, ಜನರಲ್ಲಿ ಅರಿವು ಮೂಡಿಸಲು ನಡೆಸುತ್ತಿರುವ ಯತ್ನ ಅತ್ಯಂತ ಶ್ಲಾಘನೀಯ, ಇಂಥ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗಲಿ ಎಂದು ಅವರು ಹಾರೈಸಿದರು.

ರಾಜ್ಯದ ಲೋಕಸಭಾ ಚಿತ್ರಗಳಲ್ಲಿ ಜನರ ನಾಡಿಮಿಡಿತ ಹೇಗಿದೆ? ಅವರು ಯಾರು ಗೆಲ್ಲಬೇಕು ಎಂಬ ಬಯಸಿದ್ದಾರೆ ಎಂಬುದನ್ನು ಅರಿಯುವ ಉದ್ದೇಶದಿಂದ ಆರಂಭಿಸಿರುವ ಈ ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಜನಸಾಮಾನ್ಯರು ಕರೆ ಮಾಡಿ ತಿಳಿಸಲು ಅವಕಾಶ ನೀಡಲಾಗಿದೆ.

ಏನಿದು ಪೋಲಿಂಗ್‌ ಬೂತ್‌?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ಸೋಮವಾರದಿಂದ ನಿತ್ಯ ಎರಡು ಲೋಕಸಭೆ ಕ್ಷೇತ್ರಗಳನ್ನು ನಿಗದಿ ಮಾಡಲಾಗಿದೆ. ಇಲ್ಲಿರುವ ಟೈಮ್‌ಟೇಬಲ್‌ ಗಮನಿಸಿ ಕರೆ ಮಾಡಬಹುದು.

ಮೊದಲ ದಿನ ಯಾವ್ಯಾವ ಕ್ಷೇತ್ರ?

ಸೋಮವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಂಡ್ಯ ಲೋಕಸಭಾ ಕ್ಷೇತ್ರದ (Mandya Lokasabha Constituency) ಮತದಾರರ ಅಭಿಪ್ರಾಯ ಸಂಗ್ರಹ ನಡೆಯಲಿದೆ.

ಸೋಮವಾರ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ (Belagavi Lokasabha Constituency) ಮತದಾರರ ಅಭಿಪ್ರಾಯ ಸಂಗ್ರಹ ನಡೆಯಲಿದೆ.

ಮಧ್ಯಾಹ್ನ 1 ಗಂಟೆಯವರೆಗೆ ಮಂಡ್ಯ ಮತ ಕ್ಷೇತ್ರದ ಮತದಾರರು, ಸಾರ್ವಜನಿಕರು ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಮಧ್ಯಾಹ್ನ 2 ಗಂಟೆಗೆ ಮಂಡ್ಯ ಕ್ಷೇತ್ರದ ಫಲಿತಾಂಶ ಪ್ರಕಟವಾಗಲಿದೆ.

ಮಧ್ಯಾಹ್ನ 2ರಿಂದ ಆರು ಗಂಟೆಯವರೆಗೆ ಬೆಳಗಾವಿ ಕ್ಷೇತ್ರದ ಜನರು ಕರೆ ಮಾಡಬಹುದು. ಫಲಿತಾಂಶ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

ಪೋಲಿಂಗ್ ಫಲಿತಾಂಶ ಯಾವಾಗ?

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ನಲ್ಲಿ ಸಂಗ್ರಹವಾಗುವ ಮಂಡ್ಯ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಮಾಹಿತಿಗಳನ್ನು ಆಧರಿಸಿದ ಫಲಿತಾಂಶವನ್ನು ರಾತ್ರಿ ಎಂಟು ಗಂಟೆಗೆ ಪ್ರಸಾರ ಮಾಡಲಾಗುತ್ತದೆ.

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡುತ್ತಾರೆ. ಯಾರು ಅಭ್ಯರ್ಥಿಯಾಗಬೇಕು, ಯಾರು ಗೆಲ್ಲಬೇಕು, ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.

ನಿರಂತರ ಫೋನ್‌ ಕಾಲ್‌ಗಳ ದಾಖಲೆ

ಬೆಳಗ್ಗೆ 9 ಗಂಟೆಗೆ ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ ತೆರೆದುಕೊಳ್ಳುತಿದ್ದಂತೆಯೇ ಕರೆಗಳ ಸುರಿಮಳೆಯೇ ಸುರಿಯುತ್ತಿದೆ. ಮೊದಲ 15 ನಿಮಿಷದಲ್ಲೇ 500ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಲಾಗದೆ ಮಿಸ್‌ ಕಾಲ್‌ ಆದ ಕರೆಗಳ ಸಂಖ್ಯೆ 300೦ಕ್ಕಿಂತಲೂ ಹೆಚ್ಚಾಗಿತ್ತು.

ಇದನ್ನೂ ಓದಿ | Lok Sabha Election 2024: ಮಾರ್ಚ್‌ 14ಕ್ಕೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ?

Exit mobile version