ಬೆಂಗಳೂರು: ಮತದಾರರ ಮಾಹಿತಿಯನ್ನು (Voter Data) ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂಬ ವಿಚಾರದಲ್ಲಿ ಸರ್ಕಾರದ ಮಾತಿಗೆ ಪ್ರತ್ಯುತ್ತರ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಾವುದೇ ತನಿಖೆಗೂ ಸಿದ್ಧ, ಮಾನನಷ್ಟ ಮೊಕದ್ದಮೆಯನ್ನೂ ಎದುರಿಸುತ್ತೇವೆ ಎಂದಿದ್ದಾರೆ.
ನಾವು ಚಿಲುಮೆ ಸಂಸ್ಥೆಯನ್ನು ಮಿಸ್ ಯೂಸ್ ಮಾಡಿಕೊಂಡಿದ್ದರೇ ಬಂಧಿಸಲಿ. ಇದು ಸೀರಿಯಸ್ ಕ್ರೈಮ್. ನಾಲ್ಕು ಓಟ್ ಗಳನ್ನು ತೆಗೆದಿದ್ದಾರೆ ಎಂದು ಟಿವಿಯಲ್ಲಿ ಒಬ್ಬ ಹುಡಗ ಹೇಳಿದ. ಅವರ ಮ್ಯಾಪಿಂಗ್, ಕಾರ್ಯ ವ್ಯಾಪ್ತಿ ಗೊತ್ತಿದೆ. ಆ ಸಂಸ್ಥೆಯವರು ಪ್ರತಿಯೊಬ್ಬರನ್ನೂ ಗೆಲ್ಲಿಸಿಕೊಡುತ್ತೇವೆ ಎಂದು ವಾರ್ಡ್ ಸದಸ್ಯರಿಗೆ ಒಂದು ಕೋಟಿ ರೂಪಾಯಿ ಆಫರ್ ಮಾಡಿದನ್ನು ರಾತ್ರಿ ಹೇಳಿದ್ದಾರೆ ಎಂದರು.
ಸರ್ಕಾರ ಈ ವಿಚಾವನ್ನು ಲಘುವಾಗಿ ತೆಗೆದುಕೊಂಡಿದೆ. ಸಿಎಂ ಉಡಾಫೆ ಮಾತಾಡಿದ್ದಾರೆ. ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಮಹದೇವಪುರ ಎಷ್ಟು ವಾರ್ಡ್ ಅಗಿದೆ, ಪ್ರತಿಯೊಂದು ಮ್ಯಾಪಿಂಗ್ ಕೂಡ ಆಗಿದೆ, ಯಾವ ರೀತಿ ಮನೆಗಳನ್ನು ಬರಕೊಂಡು ಖಾಲಿ ಸೈಟ್ ಅನ್ನು ಗುರುತಿಸಿದ್ದಾರೆ ಎಂದು ಅಲ್ಲಿನ ಸಿಬ್ಬಂದಿಯೇ ಹೇಳಿದ್ದಾರೆ.
ನಾವು ನಿನ್ನೆ ಚುನಾವಣಾ ಆಯೋಗಕ್ಕೆ ಮೇಲ್‌ನಲ್ಲಿ ಕಳಿಸಿದ್ದೇವೆ. ಅಫಿಷಿಯಲ್ ಆಗಿ ಹೋಗಿ ಮಾತಾಡಿಲ್ಲ. ಕಮಿಷನರ್ ದೂರು ಕೊಟ್ಟಿದ್ದನ್ನು ಅವರಿಗೆ ಕಳಿಸಿದ್ದೇವೆ. ನಾಳೆ ಬೆಳಿಗ್ಗೆಗೆ ಅವರನ್ನು ಭೇಟಿ ಮಾಡುತ್ತೇವೆ. ಇಡಿ ಕೇಸ್ ಇದೆ, ಅದನ್ನು ಮುಗಿಸಿ ,ಎಲೆಕ್ಷನ್ ಕಮಿಷನ್‌ಗೆ ಹೋಗುತ್ತೇವೆ. ಸಚಿವರನ್ನು ರಕ್ಷಣೆ ಮಾಡಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ. 28 ಅಧಿಕಾರಿಗಳ ಮೇಲೆ ಎಫ್‌ಐಆರ್ ಆಗಬೇಕು. ಸರ್ಕಾರದ ಅಧಿಕಾರಿ ಹುದ್ದೆಯನ್ನು ಖಾಸಗಿಯವರು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಯಾರೋ ಬಂದು ನಾನೊಬ್ಬ ಸಿಎಂ, ಅಧಿಕಾರಿ ಎನ್ನಲು ಆಗುತ್ತದೆಯೇ? ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವದ ಮಾನ ಮರ್ಯಾದೆ ಹೋಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಆಗದೆ, ಮತದಾನದ ಹಕ್ಕು ಕಿತ್ತುಕೊಳ್ಳುತ್ತಿದ್ದಾರೆ. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಇದು. ಜನತಾದಳ, ಕಮ್ಯುನಿಸ್ಟ್, ನಮ್ಮ ಕಾರ್ಯಕರ್ತರಿಗೂ ಹೇಳುತ್ತಿದ್ದೇನೆ, ಕೂಡಲೇ ಬೂತ್‌ಗಳಲ್ಲಿ ಹೋಗಿ, ಮತಪಟ್ಟಿ ಪರಿಶೀಲಿಸಿ ಎಂದರು.
ಹೊಂಬಾಳೆನೋ, ಇನ್ನೊಬ್ಬನೋ, ಯಾರಿಗಾದರೂ ಕೇಕ್ ಆದರೂ ತಿನ್ನಿಸಲು ಶಿವಕುಮಾರ್ ಆದರೇನು, ಇನ್ನೊಬ್ಬ ಆದರೇನು? ನಾನು ತಪ್ಪು ಮಾಡಿದ್ದೇನೆ ಎಂದು ನೀನು ತಪ್ಪು ಮಾಡಬೇಕಾ? ಅಧಿಕಾರ ಇದೆ ಎಂದು ಯಾರೋ ತಪ್ಪು ಮಾಡಿದ ಎಂದು ನೀನು ಮಾಡಬೇಕೇ? ತಪ್ಪಿದ್ದರೆ ಯಾರಿದ್ದರೂ ಕ್ರಮ ತೆಗೆದುಕೊಳ್ಳಿ ಎಂದರು.
ಕಾಂಗ್ರೆಸ್ ಸರ್ಕಾರದ ಜಾತಿ ಗಣತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಹಾಗೇನಾದರೂ ಇದ್ದರೆ ನೀವು ಆಕ್ಷನ್ ತಗೊಳ್ಳಿ. ಮತ ಪಟ್ಟಿ ನನ್ನ ಹಕ್ಕು. ಅದನ್ನು ದುರುಪಯೋಗ ಮಾಡಿದರೆ ಹೇಗೆ? ನಮ್ಮ ಭ್ರಷ್ಟಾಚಾರವನ್ನೇ ತನಿಖೆ ಮಾಡಿ ಎನ್ನುತ್ತಿದ್ದೇವೆ. ಇನ್ನು ಜಾತಿ ಗಣತಿ ತನಿಖೆ ಮಾಡಬೇಡಿ ಅಂತೀವಾ? ಮಾಧ್ಯಮದಲ್ಲಿ ಸುದ್ದಿ ಬಂದ ಕೂಡಲೇ ಬಿಬಿಎಂಪಿ ಕಮಿಷನರ್, ಸಂಸ್ಥೆಗೆ ನೀಡಿದ್ದ ಆದೇಶ ರದ್ದು ಮಾಡಿದರು. ಆದರೆ ಕ್ರಿಮಿನಲ್ ಕೇಸ್ ಏಕೆ ಹಾಕಲಿಲ್ಲ? ಯಾಕೆ FIR ಹಾಕಿ ಬಂಧನ ಮಾಡಿಲ್ಲ? ಯಾರು ಅನುಮತಿ ಕೊಟ್ಟರೋ ಅವರನ್ನು ಬಂಧನ ಮಾಡಬೇಕು. EVM ಬಗ್ಗೆ ಮಾತಾಡಿದ್ದಾರೆ. ಇಡೀ ದೇಶ ಅ ಬಗ್ಗೆ ಚರ್ಚೆ ಮಾಡುತ್ತಿದೆ. ಯಾರು ಅಕ್ರಮ ಮಾಡಿದ್ದಾರೆ ಅವರ ಬಂಧನ ಆಗಲಿ ಎಂದರು.
ಮಾನನಷ್ಟ ಮೊಕದ್ದಮೆ ಕುರಿತು ಅಶ್ವತ್ಥನಾರಾಯಣ್ ಮಾತಿಗೆ ಪ್ರತಿಕ್ರಿಯಿಸಿ, ಮಾನನಷ್ಟ ಮೊಕದ್ದಮೆ ಹಾಕಲಿ. ಇದರ ಬಗ್ಗೆ ಎಲ್ಲವೂ ಚರ್ಚೆ ಆಗಲಿ. ಯಾರಿಗೆ ಕಾಲ್ ಮಾಡಿದ್ದಾರೆ ಎಷ್ಟು ಕಾಲ್ ಮಾಡಿದ್ದಾರೆ. ಯಾರ ಜತೆ ಮಾತಾಡಿದ್ದಾರೆ ಎಲ್ಲವೂ ತನಿಖೆ ಆಗಲಿ. ಅವಮಾನ ಆಗಿದ್ದರೆ ಅಶ್ವತ್ಥನಾರಾಯಣ ಅವರು ಮಾನನಷ್ಟ ಕೇಸ್ ಹಾಕಲಿ. ಮುನಿರತ್ನ ಮೇಲೆ ಓಟರ್ ಐಡಿ ಕೇಸ್ ಇನ್ನೂ ನಡೆಯುತ್ತಿದೆ. ತುಳುಸಿ ಮುನಿರಾಜು ಗೌಡ ಇನ್ನೂ ಕೇಸ್ ವಾಪಸ್ ಪಡೆದಿಲ್ಲ. ಅ ಕೇಸ್‌ನ ಓಟರ್ ಐಡಿ ಏನು ಆಯಿತು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Voter Data | 6 ಲಕ್ಷ ಮತದಾರರ ಹೆಸರು ಡಿಲೀಟ್ ಹಿಂದೆ ʼಚಿಲುಮೆʼ ಕೈವಾಡ?: ಮೂಡಿದ ಅನುಮಾನ