Site icon Vistara News

Wife Swap Case: ಬೆಂಗಳೂರಿನಲ್ಲಿ ಮತ್ತೆ ವೈಫ್ ಸ್ವಾಪ್ ದೂರು; ಏನಿದು ಅಸಹ್ಯ!

wife swap

ಬೆಂಗಳೂರು: ವೈಫ್‌ ಸ್ವಾಪ್‌ (Wife Swap Case) ಎಂಬ ಅಸಹ್ಯ ರೂಢಿಯ ಬಗ್ಗೆ ರಾಜಧಾನಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಬಸವನಗುಡಿ ಮಹಿಳಾ ಠಾಣೆಗೆ ಈ ಬಗ್ಗೆ (Wife swapping) ಒಬ್ಬರು ಮಹಿಳೆ ದೂರು ನೀಡಿದ್ದಾರೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಇಂಥ ಕೆಲವು ಪ್ರಕರಣ ದಾಖಲಾಗಿದ್ದ ಬಗ್ಗೆ ವರದಿಯಾಗಿತ್ತು. ಹೆಚ್ಚಾಗಿ ಇವು ಶ್ರೀಮಂತರ ಹೈಫೈ ಸೊಸೈಟಿಗಳಲ್ಲಿ ನಡೆಯುತ್ತಿದ್ದು, ಬೆಳಕಿಗೆ ಬರದೇ ಮುಚ್ಚಿ ಹೋಗುತ್ತಿವೆ ಎನ್ನಲಾಗಿದೆ. ಹೆಚ್ಚಾಗಿ ಲೈಂಗಿಕ ಸುಖಕ್ಕಾಗಿ ಮಾತ್ರ ಇಂಥ ಕೃತ್ಯಗಳು ನಡೆಯುವುದು ದಾಖಲಾಗಿದೆ.

ಏನಿದು ವೈಪ್ ಸ್ವಾಪ್?

ಇದು ಹೆಂಡತಿಯರನ್ನು ಸುಖಕ್ಕಾಗಿ ಬದಲಾಯಿಸಿಕೊಳ್ಳುವ ರೂಢಿ. ತನ್ನ ಹೆಂಡತಿಯನ್ನು ಒಂದು ರಾತ್ರಿಯ ಮಟ್ಟಿಗೆ ಸ್ನೇಹಿತನ ಜೊತೆ ಇರುವಂತೆ ಮಾಡುವುದು, ಸ್ನೇಹಿತನ ಹೆಂಡತಿಯ ಜೊತೆಗೆ ತಾನು ಇರುವುದು ಹೀಗೆ ಇದು ನಡೆಯುತ್ತದೆ. ತಾತ್ಕಾಲಿಕ ಒಪ್ಪಂದಗಳಾದ ಇವು ಐಷಾರಾಮಿ ಬದುಕನ್ನು ಹೊಂದಿರುವ ಕುಬೇರರ ನಡುವೆ ನಡೆಯುತ್ತಿದೆ. ಅಮೆರಿಕದಲ್ಲಿ ಆರಂಭವಾದ ಈ ಹೇಯ ಪದ್ಧತಿ ಅಲ್ಲಿಂದ ಇಲ್ಲಿಗೂ ಪಸರಿಸಿದೆ.

ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಇದು ದೊಡ್ಡ ಸದ್ದು ಮಾಡಿದ್ದಲ್ಲದೆ, ಬೆಂಗಳೂರಿನಲ್ಲೂ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈಗ ರಾಜಧಾನಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಪೂರ್ಣಚಂದ್ರ ಎಂಬಾತ ವೈಪ್ ಸ್ವಾಪ್ ಮಾಡಲು ತನ್ನ ಪತ್ನಿಯನ್ನು ಬಲವಂತ ಮಾಡಿದ್ದಾನೆ. ಒಪ್ಪದಿದ್ದುದಕ್ಕೆ ಹೆಂಡತಿಗೆ ಕಿರುಕುಳ ನೀಡಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸ್ವತಃ ಪತ್ನಿಯೇ ದೂರು ನೀಡಿದ್ದಾರೆ. ಸದ್ಯ ಗಂಡ ಪೂರ್ಣಚಂದ್ರ ಹಾಗೂ ಆತನ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇ- ಸಿಗರೇಟ್‌ ಮಾರುತ್ತಿದ್ದವರ ಬಂಧನ

ಬೆಂಗಳೂರು: ಇ-ಸಿಗರೇಟ್ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ. ಕೊತ್ತನೂರು ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ. ಬಂಧಿತರಿಂದ 26 ಲಕ್ಷ ರೂ. ಮೌಲ್ಯದ ಇ-ಸಿಗರೇಟ್ ಉತ್ಪನ್ನ ಹಾಗೂ ವಿದೇಶಿ ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ.

ಕೊತ್ತನೂರಿನ ಎರಡು ಗಿಫ್ಟ್ ಸೆಂಟರ್‌ನಲ್ಲಿ ದಾಸ್ತಾನು ಮಾಡಿದ್ದ ಆರೋಪಿಗಳು ಸಾರ್ವಜನಿಕರಿಗೆ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದರು. ವ್ಯಕ್ತಿಯೊಬ್ಬನ ಮೂಲಕ ಗಿಫ್ಟ್ ಸೆಂಟರ್‌ಗೆ ಇ-ಸಿಗರೇಟ್ ಗಳ ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಮುಜಮಿಲ್, ಅಬ್ದುಲ್ ಅಜೀಜ್, ಮಹಮ್ಮದ್ ಅಫ್ಜಲ್, ಅಬ್ದುಲ್ ಸಮೀರ್ , ಮಹಮ್ಮದ್ ಮುತಾಸದ್ದಿಕ್ ಬಂಧಿತ ಆರೋಪಿಗಳು.

ಇದನ್ನೂ ಓದಿ: Crime News: ಸತ್ತು ಹೋಗಿದ್ದೇನೆ ಎಂದು ನಂಬಿಸಿದ ಕೊಲೆ ಆರೋಪಿ 2 ವರ್ಷದ ಬಳಿಕ ಅರೆಸ್ಟ್!‌

Exit mobile version