ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆಯೊಬ್ಬರ ಶವ ಪತ್ತೆಯಾಗಿದ್ದು, ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
ಸದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ಈ ಘಟನೆ ನಡೆದಿದೆ. 29 ವರ್ಷದ ಮಹಿಳೆ ಕತೀಜಾ ಕೂಬ್ರ ನೇಣಿಗೆ ಶರಣಾಗಿದ್ದಾರೆ. ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ ತವರಿನವರು ಆರೋಪಿಸಿದ್ದಾರೆ. ಪತಿ ಮಹಬೂಬ್ ಪರೀಷ್ ಪತ್ನಿಯನ್ನು ಹೊಡೆದು ನೇಣು ಹಾಕಿರುವ ಶಂಕೆ ವ್ಯಕ್ತವಾಗಿದೆ.
ʻಮದುವೆಯಾದಾಗಿನಿಂದ ಮಗಳ ಜೊತೆ ಅಳಿಯನಿಗೆ ಯಾವಾಗಲೂ ಜಗಳ ಅಗುತ್ತಿತ್ತು. ಆತನಿಗೆ ಇನ್ನೋರ್ವ ಮಹಿಳೆಯ ಜೊತೆ ಸಂಬಂಧವಿತ್ತು. ನನ್ನ ಮಗಳಿಗೆ ಪ್ರತಿನಿತ್ಯ ಅವನು ಹೊಡೆಯುತ್ತಿದ್ದ. ಹಾಗಾಗಿ ನನ್ನ ಮಗಳನ್ನು ಅಳಿಯನೇ ಸಾಯಿಸಿದ್ದಾನೆʼ ಎಂದು ಮೃತ ಮಹಿಳೆಯ ತಂದೆ ಜಾವೀದ್ ವುಲ್ಲಾ ಖಾನ್ ಹೇಳಿಕೆ ನೀಡಿದ್ದಾರೆ. ಮೃತ ಕತೀಜಾ ಅವರ ಗಂಡ, ಮಾವ ಮತ್ತು ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Murder Case | ಬಾರ್ ಗಲಾಟೆ ಕೊಲೆಯಲ್ಲಿ ಅಂತ್ಯ; ಕಾರು ಚಾಲಕನನ್ನು ಅಪಹರಿಸಿ ಬರ್ಬರ ಹತ್ಯೆ