Site icon Vistara News

Murder case: ಶೀಲ ಶಂಕಿಸಿ ಪತ್ನಿಯನ್ನು ಕೊಂದು ಕೋಲ್ಕತ್ತಾಗೆ ಪರಾರಿಯಾದ ಪತಿಯ ಸೆರೆ

murder case

ಕೊಲೆಗಾರ ಮಜೀದ್‌ ಹಾಗೂ ಕೊಲೆಯಾದ ಮೋನಿಷಾ

ಬೆಂಗಳೂರು: ವರ್ತೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆಯಾದ ಪ್ರಕರಣದಲ್ಲಿ ಕೊಲೆಗಾರನ್ನು ಪೊಲೀಸರು ಕೋಲ್ಕತ್ತಾದಲ್ಲಿ ಬಂಧಿಸಿದ್ದಾರೆ.

ಪತ್ನಿ ಮೋನಿಷಾ (30) ಅವರನ್ನು ಕೊಲೆಗೈದು ಪರಾರಿಯಾಗಿದ್ದ ಪತಿ ಶೇಕ್ ಮಜೀದ್ ಅಲಿ ಎಂಬಾತನನ್ನು ವರ್ತೂರು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ಈ ದಂಪತಿ ಕೋಲ್ಕತ್ತಾ ಮೂಲದವರಾಗಿದ್ದು, ಬೆಂಗಳೂರಲ್ಲಿ ವಾಸಿಸುತ್ತಿದ್ದರು.

ಫೆಬ್ರವರಿ 5ರಂದು ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಘಟನೆ ನಡೆದಿತ್ತು. ಫೆಬ್ರವರಿ 7ರಂದು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಆರೋಪಿ ಕೊಲೆ‌‌ ಮಾಡಿ ಕೋಲ್ಕತ್ತಾಗೆ ರಸ್ತೆ ಮಾರ್ಗವಾಗಿ ಓಡಿಹೋಗಿದ್ದ. ಅದಾಗಲೇ ವಿಮಾನದ ಮೂಲಕ ಕೊಲ್ಕತ್ತಾ ತಲುಪಿದ ಪೊಲೀಸರು ಆತನನ್ನು ಕೊಲ್ಕತ್ತಾದಿಂದ 150 ಕಿ.ಮೀ. ದೂರದಲ್ಲಿರುವ ಹಳ್ಳಿಯೊಂದರಲ್ಲಿ ಸೆರೆ ಹಿಡಿದಿದ್ದಾರೆ.

ಪತಿ-ಪತ್ನಿ ನಡುವೆ ಫೆಬ್ರವರಿ ಐದರಂದು ಜಗಳವಾಗಿದೆ. ಈ ವೇಳೆ ಟವಲ್‌ನಿಂದ ಆಕೆಯ ಕುತ್ತಿಗೆ ಬಿಗಿದು ಮಜೀದ್‌ ಹತ್ಯೆ ಮಾಡಿದ್ದ. ಮನೆಯಲ್ಲಿ ಮೃತದೇಹ ಲಾಕ್ ಮಾಡಿ ಎಸ್ಕೇಪ್ ಆಗಿದ್ದ. ಇಬ್ಬರು ಮದುವೆಯಾಗಿ 10 ವರ್ಷವಾಗಿದ್ದು 3 ವರ್ಷದಿಂದ ಕೌಟುಂಬಿಕ ಕಲಹ ಇತ್ತು. ದಂಪತಿಗೆ 6 ವರ್ಷದ ಒಂದು ಮಗು ಇದ್ದು, ಮಗುವನ್ನು ಊರಲ್ಲೇ ಬಿಟ್ಟು ಬಂದಿದ್ದರು.

ಇದನ್ನೂ ಓದಿ: Murder Case: ಮೈಸೂರಲ್ಲಿ ಪತ್ನಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ಪತಿ; ಪ್ರಿಯಕರನ ಜತೆ ಸೇರಿ ಕೊಂದೇಬಿಟ್ಟಳು

Exit mobile version