Site icon Vistara News

Yelahanka flyover : ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯುವಕನ ಡೆಡ್ಲಿ ಬೈಕ್‌ ರೈಡಿಂಗ್‌!

yelahanka flyover

ಬೆಂಗಳೂರು: ಇತ್ತೀಚೆಗೆ ಜೋಡಿಗಳು ಬೈಕ್​ನಲ್ಲಿ ಹೋಗುತ್ತಲೇ ರೊಮ್ಯಾನ್ಸ್ (Romance in bike riding) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಚ್ಚು ಸಾಹಸವೂ, ಪ್ರೇಮದ ಉನ್ಮಾದವೋ ಗೊತ್ತಿಲ್ಲ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಪರಸ್ಪರ ಎದುರುಬದುರು ಕುಳಿತುಕೊಂಡು ಮುದ್ದಾಡಿಕೊಂಡು ಹೋಗುವುದು, ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಡೆಡ್ಲಿ ರೈಡಿಂಗ್‌ ಮಾಡುವುದು ಹೆಚ್ಚುತ್ತಿದೆ. ಸದ್ಯ ಬೆಂಗಳೂರಲ್ಲಿ (Yelahanka flyover) ಜೋಡಿಯೊಂದರ ಬೈಕ್ ರೈಡಿಂಗ್ (Bike Riding ವಿಡಿಯೊ ವೈರಲ್‌ ಆಗಿದೆ.

ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಬೈಕ್‌ ರೈಡ್ ಮಾಡಿದ್ದಾನೆ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಯಲಹಂಕ ಫ್ಲೈ‌ಓವರ್‌ನಲ್ಲಿ ಮೇ 17ರ ರಾತ್ರಿ‌ ಈ ಘಟನೆ ನಡೆದಿದೆ. ಯುವ ಜೋಡಿಗಳು ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದಾರೆ. ಜೋಡಿಗಳ ಜಾಲಿ‌ ರೈಡ್‌ನ ದೃಶ್ಯ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಿಡಿದ್ದಾರೆ.

ಇದನ್ನೂ ಓದಿ: Viral Video: ಐಸ್ ಕ್ರೀಮ್‌ನಲ್ಲಿ ಚಿನ್ನದ ಉಂಗುರ ಅಡಗಿಸಿಕೊಟ್ಟ ಪ್ರಿಯತಮ! ಮುಂದೇನಾಯ್ತು?

ಇತ್ತ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದ್ದು, ಸಾರ್ವಜನಿಕ ಸುರಕ್ಷತೆ ಅಪಾಯಗಳ ಬಗ್ಗೆ ವ್ಯಾಪಕ ಕಳವಳ ಹುಟ್ಟುಹಾಕಿದೆ. ಹೆಲ್ಮೆಟ್ ಧರಿಸದೆ ಇರುವುದು ಜತೆಗೆ ಯುವತಿ ಪೆಟ್ರೋಲ್‌ ಟ್ಯಾಂಕ್ ಮೇಲೆ ಕುಳಿತು ತನ್ನ ಸಂಗಾತಿಯನ್ನು ಅಪ್ಪಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಅಜಾಗರೂಕ ಮತ್ತು ಅನುಚಿತ ವರ್ತನೆಗಾಗಿ ದಂಡ ವಿಧಿಸಿ ಎಂದು ನೆಟ್ಟಿಗರು ಕಾಮೆಂಟ್‌ ಹಾಕಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಖುದ್ದು ಪ್ರಕರಣ ದಾಖಲಿಕೊಂಡ ಪೊಲೀಸರು

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೆ ತಡ, ಬೈಕ್ ನಂಬರ್ ಪ್ಲೇಟ್ ಆಧರಿಸಿ ಯುವಕನನ್ನು ಬಂಧಿಸಿದ್ದಾರೆ. ಹೆಬ್ಬಾಳ ಸಂಚಾರಿ ಪೊಲೀಸರಿಂದ ಸಿಲಂಬರಸನ್ (21) ಎಂಬಾತನನ್ನು ಬಂಧಿಸಿದ್ದಾರೆ. ಯುವತಿಯನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ರೈಡ್ ಹೋಗಿದ್ದ. ಇದನ್ನೂ ಅದೆ ಫ್ಲೈಓವರ್‌ನಲ್ಲಿ ಹೋಗುತ್ತಿದ್ದ ಸವಾರರು ಸೆರೆಹಿಡಿದಿದ್ದರು. ಸದ್ಯ ಶಾಂಪುರ ನಿವಾಸಿಯಾಗಿರುವ ಸಿಲಂಬರಸನ್‌ ಡಿಎಲ್ ವಶಕ್ಕೆ ಪಡೆದಿರುವ ಪೊಲೀಸರು ಆರ್‌ಟಿಓಗೆ ಕಳುಹಿಸಿದ್ದಾರೆ. ಈತನ ಡಿಎಲ್ ರದ್ದು ಮಾಡಲು ಹೆಬ್ಬಾಳ ಸಂಚಾರಿ ಪೊಲೀಸರು ಆರ್ ಟಿ ಒ ಗೆ ಮನವಿ ಮಾಡಿದ್ದಾರೆ. ಜತೆಗೆ ಬೈಕ್ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: Murder Case : ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ; ಕೆಆರ್‌ ಮಾರ್ಕೆಟ್‌ನಲ್ಲಿ ಶವ ಪತ್ತೆ

ಛೀ…ಈತನೆಂಥಾ ಕಾಮುಕ! ಸಾರ್ವಜನಿಕ ಸ್ಥಳದಲ್ಲಿ ಈ ಪಾಪಿ ಬಾಲಕಿಗೆ ಮಾಡಿದ್ದೇನು ಗೊತ್ತಾ?

ನವದೆಹಲಿ: ಕಾಮುಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಅಪ್ರಾಪ್ತ ಬಾಲಕಿ(Minor Girl)ಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ (Viral Video) ಆಗಿದ್ದು, ಈ ಹೇಯ ಕೃತ್ಯಕ್ಕೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ತನ್ನ ತಾಯಿಯೊಂದಿಗೆ ನಿಂತಿದ್ದ ಬಾಲಕಿಯ ಹಿಂದೆ ಹೋಗಿ ನಿಲ್ಲುವ ಕಾಮುಕ ತನ್ನ ಕುಚೇಷ್ಠೆ ಶುರು ಮಾಡುತ್ತಾನೆ. ಆಕೆಯ ಹಿಂಬಂದಿಯನ್ನು ಅನುಚಿತವಾಗಿ ಮುಟ್ಟಿ ವಿಕೃತಿ ಮೆರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೆಹಲಿಯ ಸಾದರ್‌ ಬಜಾರ್‌ನಲ್ಲಿ ಈ ಘಟನೆ ನಡೆದಿದ್ದು, ಕಾಮುಕನ ಕುಚೇಷ್ಠೆಯನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬ ರೆಕಾರ್ಡ್‌ ಮಾಡಿದ್ದಾನೆ. ವಿಡಿಯೋ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ಆ ವ್ಯಕ್ತಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದ್ದು, ಪೊಲೀಸರು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇನ್ನು ಪತ್ತೆಯಾಗದ ಕಿಡಿಗೇಡಿ

ಇನ್ನು ಘಟನೆಗೆ ಸಂಬಂಧಿಸಿದಂತೆ ಈ ನೀಚ ಕೃತ್ಯ ಎಸಗಿರುವ ಕಾಮುಕ ಇನ್ನೂ ಪತ್ತೆಯಾಗಿಲ್ಲ. ಪೊಲೀಸ್‌ ದೂರು ಕೂಡ ದಾಖಲಾಗಿಲ್ಲ. ಇನ್ನು ಅಪ್ರಾಪ್ತ ಬಾಲಕಿಗೆ ಈ ನೀಚ ಕೃತ್ಯದ ಬಗ್ಗೆ ಅರಿವಾಗಿಲ್ಲ ಎಂಬಂತೆ ವಿಡಿಯೋದಲ್ಲಿ ಭಾಸವಾಗುತ್ತಿದೆ. ಇನ್ನು ಮತ್ತೊಂದು ವರದಿ ಪ್ರಕಾರ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದ್ದು, ಕಿಡಿಗೇಟಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಾಗಿ ಪೊಲೀಸರ ತೀವ್ರ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನೆಟ್ಟಿಗರಿಂದ ಆಕ್ರೋಶ:

ಇನ್ನು ಈ ಹೇಯ ಕೃತ್ಯದ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದಂತೆ ನೆಟ್ಟುಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಿಮಿನಲ್ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈತ ನಿಮ್ಮ ಕಣ್ಣಿಗೆ ಬಿದ್ದರೆ ಪೊಲೀಸರಿಗೆ ಒಪ್ಪಿಸಬೇಡಿ..ನಿಮಗೇನು ಮಾಡಬೇಕು ಅಂತ ಅನಿಸುತ್ತದೆಯೋ ಅದನ್ನೇ ಮಾಡಿ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಇವರೆಲ್ಲ ಅತ್ಯಾಚಾರಿಗಳು..ಇವರು ಅಷ್ಟು ಸುಲಭವಾಗಿ ಕೈಗೆ ಸಿಗುವುದಿಲ್ಲ. ಇವನನ್ನು ತಕ್ಷಣ ಅರೆಸ್ಟ್‌ ಮಾಡಿ, ಕಠಿಣ ಶಿಕ್ಷೆ ವಿಧಿಸಿ ಎಂದು ಬರೆದುಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version