ಬೆಂಗಳೂರು ಗ್ರಾಮಾಂತರ: ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಕಾಕೋಳು ಗ್ರಾಮ ರಸ್ತೆಯಲ್ಲಿ ತೆರಳುವ ವೇಳೆ ಬೈಕ್ ಸ್ಕಿಡ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ(Accident) ಯುವಕನೊಬ್ಬ ಮೃತಪಟ್ಟಿದ್ದಾನೆ.
ಇಟಗಲಪುರ ನಿವಾಸಿ ಪ್ರದೀಪ್ (19) ಮೃತ ದುರ್ದೈವಿ. ಯುವಕ ಆಟೋ ಚಾಲಕನಾಗಿದ್ದು, ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಆಟೋವನ್ನು ಸ್ನೇಹಿತನ ಮನೆ ಬಳಿ ಬಿಟ್ಟು ಬೈಕ್ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ರಾಜಾನುಕುಂಟೆಯಿಂದ ಕಾಕೋಳುಗೆ ಹೋಗುವ ಮುಖ್ಯ ರಸ್ತೆ ಕೆಲಸ ನಡೆಯುತ್ತಿದೆ. ಈ ಮಾರ್ಗದಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿದ್ದ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಯುವಕನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಭಗತ್ ಸಿಂಗ್ ಪಾತ್ರದ ರಿಹರ್ಸಲ್ ಮಾಡಲು ಹೋಗಿ ನೇಣು ಬಿಗಿದುಕೊಂಡ ಬಾಲಕ